ಅಕ್ರಮ ಸಂಬಂಧ ಶಂಕೆ: ಪತ್ನಿ ಕೊಂದ ಪತಿ
ಚಾಮರಾಜನಗರ

ಅಕ್ರಮ ಸಂಬಂಧ ಶಂಕೆ: ಪತ್ನಿ ಕೊಂದ ಪತಿ

October 29, 2018

ಯಳಂದೂರು:  ಅಕ್ರಮ ಸಂಬಂಧ ಶಂಕೆ ಯಿಂದ ತನ್ನ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಅವಲ್ ಕಂದಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಭಾಗ್ಯ (25) ಗಂಡನಿಂದ ಕೊಲೆಯಾ ದವರು. ಗ್ರಾಮದ ಉಪ್ಪಾರ ಬಡವಾಣೆ ನಿವಾಸಿ ಕುಂಡಬಲ್ಲಶೆಟ್ಟಿ ಮಗ ಶೇಖರ್ ತನ್ನ ಪತ್ನಿ ಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಘಟನೆಯ ವಿವರ: ಶೇಖರ್ ಹಾಗೂ ಭಾಗ್ಯ ಒಂದೇ ಗ್ರಾಮದವರಾಗಿದ್ದು, 7 ವರ್ಷಗಳ ಹಿಂದೆ ಪ್ರೀತಿಸಿ ಮದು ವೆಯಾಗಿದ್ದರು. ಆರಂಭದಲ್ಲಿ ಅನೋನ್ಯ ವಾಗಿ ಸಂಸಾರ ನಡೆಸುತ್ತಿದ್ದರು. ಆದರೆ, ಕಳೆದ 3 ವರ್ಷಗಳಿಂದ ಶೇಖರ್ ಸಣ್ಣ-ಪುಟ್ಟ ವಿಚಾರಗಳಿಗೂ ಪತ್ನಿಯೊಂದಿಗೆ  ಜಗಳವಾಡುತ್ತಿದ್ದ. ಜೊತೆಗೆ, ಮಹಿಳಾ ಸಂಘದಲ್ಲಿ ಸಾಲ ಪಡೆದು ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

ಭಾಗ್ಯ ಇದಕ್ಕೆ ನಿರಾಕರಿಸಿದಾಗ, ಯಾರ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟ್ಟು ಕೊಂಡಿದ್ದೀಯ? ಎಂದು ಶೇಖರ್ ಅ.25 ರಂದು ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಇದರಿಂದ ಬೇಸರಗೊಂಡ ಭಾಗ್ಯ ಗ್ರಾಮ ಸ್ಥರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಮಾಡಿಸಿ ಗ್ರಾಮದ ಯಜಮಾನರ ಸೂಚನೆ ಮೇರೆಗೆ ತವರು ಮನೆಗೆ ಹೋಗಿದ್ದಾಳೆ.

ಆದರೆ, ಇದರಿಂದ ಕೋಪಿಸಿಕೊಂಡಿದ್ದ ಶೇಖರ್ ಶನಿವಾರ (ಅ.27) ರಾತ್ರಿ ಪತ್ನಿಯ ಮನೆಯ ಬಳಿ ಹೋಗಿ ಮನೆಗೆ ಕಲ್ಲು ಎಸೆದಿದ್ದಾನೆ. ಈ ವೇಳೆ ಮನೆಯ ಲ್ಲಿದ್ದ ಭಾಗ್ಯ ಅವರ ತಾಯಿ, ಅಜ್ಜಿ, ನಾದಿನಿ ಮನೆಯಿಂದ ಹೊರಬಂದು, ಯಾರು ಕಲ್ಲು ಎಸೆದಿದ್ದು ಎಂದು ವಿಚಾರಿಸುತ್ತಿರುವ ಸಮ ಯದಲ್ಲಿ ಮನೆಯೊಳಗೆ ನುಗ್ಗಿದ ಶೇಖರ್  ಮಲಗಿದ್ದ ಭಾಗ್ಯಳನ್ನು ಮನೆಯಿಂದ ಹೊರ ಗಡೆಗೆ ಎಳೆದುಕೊಂಡು ಬಂದು ಕತ್ತರಿ ಯಿಂದ ಕುತ್ತಿಗೆ ಕೂಯ್ದು, ದೇಹದ ಹಲ ವೆಡೆಗೆ ತಿವಿದು ಗಾಯಗೊಳಿಸಿದ್ದಾನೆ. ಬಿಡಿಸಲು ಬಂದ ಭಾಗ್ಯಳ ತಾಯಿ, ಅಜ್ಜಿ, ನಾದಿನಿಗೂ ಗಾಯಗಳಾಗಿವೆ.

ಅಷ್ಟಕ್ಕೆ ಸುಮ್ಮನಾಗದ ಶೇಖರ್, ಭಾಗ್ಯಳ  ಮೇಲೆ ದಿಂಡು ಕಲ್ಲು ಎತ್ತುಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ.

ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈ ಎಸ್‍ಪಿ ಪುಟ್ಟಮಾದಯ್ಯ, ಸಿಪಿಐ ರಾಜೇಶ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಬಂಧನ: ಕೊಲೆ ಮಾಡಿ ತಲೆ ಮರೆÀಸಿಕೊಂಡಿದ ಶೇಖರ್ ಚಾಮರಾಜ ನಗರ ತಾಲೂಕಿನ ಬಾಗಳಿ ಗ್ರಾಮದ ಪಂಪ್‍ಸೆಟ್ ಬಾವಿಯಲ್ಲಿ ಅವಿತುಕೊಂಡಿದ್ದ. ಮೊಬೈಲ್ ಸಿಗ್ನಲ್ ಆಧÀರಿಸಿ ಕಾರ್ಯಾ ಚರಣೆ  ನಡೆಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Translate »