ಕೊಳ್ಳೇಗಾಲ: 9ನೇ ವಾರ್ಡ್‍ನಲ್ಲಿ ಶೇ.80.96ರಷ್ಟು ಮತದಾನ
ಚಾಮರಾಜನಗರ

ಕೊಳ್ಳೇಗಾಲ: 9ನೇ ವಾರ್ಡ್‍ನಲ್ಲಿ ಶೇ.80.96ರಷ್ಟು ಮತದಾನ

October 29, 2018

ಯುವಕನಿಂದ ಮತದಾನದ ಫೋಟೋ ವೈರಲ್

ಕೊಳ್ಳೇಗಾಲ: ಪಟ್ಟಣದ ನಗರಸಭೆ 9ನೇ ವಾರ್ಡ್‍ನಲ್ಲಿ ನಡೆದ ಚುನಾವಣೆಯಲ್ಲಿ ಶೇ.80.96ರಷ್ಟು ಮತದಾನವಾಗಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಟೌನ್ ಶಾಲೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಿಎಸ್ಪಿ ಅಭ್ಯರ್ಥಿ ನಿಧನದಿಂದ ಈ ಚುನಾವಣೆ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ಏರ್ಪಟ್ಟಿದ್ದು, ಒಟ್ಟು 1,350 ಮತದಾರರ ಪೈಕಿ 544ಮಂದಿ ಪುರುಷರು, 549 ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಸೇರಿದಂತೆ ಹಲವು ಗಣ್ಯರು ಮತಯಾಚಿಸುತ್ತಿದ್ದರು.

ಯುವಕನಿಂದ ಮತದಾನದ ಫೋಟೋ ವೈರಲ್: ಯುವಕನೋರ್ವ ತಾನು ಮತ ಚಲಾ ಯಿಸಿದ್ದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್‍ಲೋಡ್ ಮಾಡಿದ್ದು, ಫೋಟೋ ವೈರಲ್ ಆಗಿದೆ. ಪಟ್ಟಣದ ಮಠದ ಬೀದಿ ನಿವಾಸಿ ನಿಖಿಲ್ ಎಂಬಾತ ಕ್ರಮ ಸಂಖ್ಯೆ 2ರ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದು, ಈ ದೃಶ್ಯವನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಹೀಗಾಗಿ ಈತನ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

Translate »