ಅರಳಕುಪ್ಪೆ ಗ್ರಾಪಂ ಅಧ್ಯಕ್ಷರಾಗಿ ಮಹದೇವು ಆಯ್ಕೆ
ಚಾಮರಾಜನಗರ

ಅರಳಕುಪ್ಪೆ ಗ್ರಾಪಂ ಅಧ್ಯಕ್ಷರಾಗಿ ಮಹದೇವು ಆಯ್ಕೆ

October 29, 2018

ಪಾಂಡವಪುರ: ತಾಲೂಕಿನ ಅರಳಕುಪ್ಪೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್.ಮಹ ದೇವು ಅವಿರೋಧವಾಗಿ ಆಯ್ಕೆಯಾದರು.ಒಟ್ಟು 19 ಮಂದಿ ಸದಸ್ಯರ ಬಲ ಹೊಂದಿರುವ ಪಂಚಾಯಿತಿಯ ಹಿಂದಿನ ಅಧ್ಯಕ್ಷ ಸಣ್ಣ ನಿಂಗೇಗೌಡರ ರಾಜೀನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾ ಧಿಕಾರಿಗಳು ಚುನಾವಣೆಯನ್ನು ನಿಗದಿ ಪಡಿಸಿದ್ದರು. ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ವೇಳೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಎಸ್.ಮಹದೇವು ಹೊರತು ಪಡಿಸಿ ಬೇರೆಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಾಪಂ ಇಓ ಮಹೇಶ್ ಅವರು, ಮಹದೇವು ಅವರ ಆಯ್ಕೆಯನ್ನು ಅಂತಿಮಗೊಳಿಸಿ ಘೋಷಿಸಿದರು.

ಎಸ್.ಮಹದೇವು ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಬಳಿಕ ಎಲ್ಲಾ ಸದಸ್ಯರು ಅಧ್ಯಕ್ಷ ಮಹದೇವು ಅವರನ್ನು ಅಭಿನಂಧಿಸಿದರು.ನೂತನ ಅಧ್ಯಕ್ಷ ಎಸ್.ಮಹದೇವು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ದಿಂದ ಹಾಗೂ ಎಲ್ಲಾ ಸದಸ್ಯರ ಸಹಕಾರ ದಿಂದ ಪಂಚಾಯಿತಿಯ ನೂತನ ಅಧ್ಯಕ್ಷ ನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಪಂಚಾಯಿತಿಯ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತೇನೆ. ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ, ಚರಂಡಿಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸು ತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಎಸ್. ನಿಂಗೇಗೌಡ, ಗ್ರಾಪಂ ಸದಸ್ಯರಾದ ವಿಶ್ವ ನಾಥ್, ಧನಂಜಯ್, ಚಿದಾನಂದ, ಮಹೇಶ್, ಶ್ವೇತ, ಲಕ್ಷ್ಮಮ್ಮ, ಶಿವಮ್ಮ, ಸೋಮಶೇಖರ್, ಸೋಮು, ಯೋಗೇಶ್, ಎಪಿಎಂಸಿ ಅಧ್ಯಕ್ಷ ರಾದ ಕುಳ್ಳೇಗೌಡ, ಜೆಡಿಎಸ್ ಮುಖಂಡ ರಾದ ಮಹೇಂದ್ರ, ಅಶೋಕ್, ಪೇಡಾರವಿ, ಪ್ರಶಾಂತ್, ವಾಸು, ಗುರುಮೂರ್ತಿ ಹಾಜರಿದ್ದರು.

Translate »