ವನವಾಸಿ ಮಂದಿಗೆ ಬಿಲ್ಲುಗಾರಿಕೆ, ಅಥ್ಲೆಟಿಕ್ ಸ್ಪರ್ಧೆ
ಚಾಮರಾಜನಗರ

ವನವಾಸಿ ಮಂದಿಗೆ ಬಿಲ್ಲುಗಾರಿಕೆ, ಅಥ್ಲೆಟಿಕ್ ಸ್ಪರ್ಧೆ

October 30, 2018

ಗುಂಡ್ಲುಪೇಟೆ:  ವನವಾಸಿ ಕಲ್ಯಾಣಾಶ್ರಮವು ವನವಾಸಿ ಜನರ ಸಮಗ್ರ ಅಭಿವೃದ್ಧಿ ಮೂಲಕ ರಾಷ್ಟ್ರೀಯ ಭಾವೈಕ್ಯತೆಗೆ ಶ್ರಮಿಸುತ್ತಿದ್ದು, ವನವಾಸಿಗಳು ಇದರ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂ ಗಣದಲ್ಲಿ ವನವಾಸಿ ಕಲ್ಯಾಣಾಶ್ರಮದ ವತಿಯಿಂದ ಆಯೋಜಿಸಿದ್ದ ವನವಾಸಿ ಜನರ ಬಿಲ್ಲುಗಾರಿಕೆ ಹಾಗೂ ಅಥ್ಲೆಟಿಕ್ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಅರಣ್ಯ ಪ್ರದೇಶ ಗಳಲ್ಲಿ ನೆಲೆಸಿರುವ ವನವಾಸಿಗಳನ್ನು ನಗರ ಹಾಗೂ ಗ್ರಾಮವಾಸಿಗಳು ಪ್ರೀತಿ ವಿಶ್ವಾಸ ಗಳಿಂದ ನೋಡುವಂತಾಗಬೇಕು. ಇವರ ಅಭಿವೃದ್ಧಿಗೆ ಸರ್ಕಾರಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಹೆಚ್ಚಿನ ನೆರವು ನೀಡುತ್ತಿದ್ದರೂ ಇವುಗಳ ಅರಿವಿಲ್ಲದೆ ಸದ್ಬಳಕೆಯಾಗುತ್ತಿಲ್ಲ ಎಂದರು.

ವನವಾಸಿ ಸಂಸ್ಥೆಯ ರಾಜ್ಯ ಕಾರ್ಯ ದರ್ಶಿ ಶಾಂತಾರಾಮ ಸಿದ್ದಿ ಮಾತನಾಡಿ, ದೇಶದ ಅಲ್ಲಲ್ಲಿ ನೆಲೆಸಿರುವ ವನವಾಸಿ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ, ಸಾಮಾ ಜಿಕ ಹಾಗೂ ಕ್ರೀಡಾ ಸವಲತ್ತುಗಳನ್ನು ನೀಡುವ ಮೂಲಕ ವನವಾಸಿ ಸಂಸ್ಥೆಯು ರಾಷ್ಟ್ರೀಯ ವಾಹಿನಿಗೆ ತರುತ್ತಿದ್ದು, ದೇಶ ಪ್ರೇಮ ಬೆಳೆಯುವಂತೆ ಮಾಡಿ ಶ್ರಮಿಸು ತ್ತಿದೆ. ನಿಸರ್ಗದ ನಡುವೆಯೇ ಇರುವ ಈ ಸಮುದಾಯದ ಯುವಕರು ದೈಹಿಕವಾಗಿ ಬಲಿಷ್ಠರಿದ್ದು, ಇವರಿಗೆ ಸಮರ್ಪಕ ತರಬÉೀತಿ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಾಡಿ ಮುಂದಿನ ಒಲಂಪಿಕ್ಸ್‍ನಲ್ಲಿ ಜಯ ಗಳಿಸಲು ಅಗತ್ಯವಾದ ತರಬೇತಿ ನೀಡಲಾ ಗುತ್ತಿದೆ ಎಂದು ವಿವರಿಸಿದರು.

ಇಲ್ಲಿ ಕಳೆದ ಮೂರು ದಿನಗಳಿಂದ ಬಿಲ್ವಿದ್ಯೆ ತರಬೇತಿ ನೀಡಿದ್ದು, ವಿಜೇತರನ್ನು ಡಿಸೆಂಬರ್ ತಿಂಗಳಲ್ಲಿ ಅಸ್ಸಾಂನಲ್ಲಿ ನಡೆ ಯುವ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿ ಸುವಂತೆ ಮಾಡಲಾಗುತ್ತಿದೆ ಎಂದರು. ಈ ಕ್ರೀಡಾಕೂಟದಲ್ಲಿ ರಾಜ್ಯದ 18 ಜಿಲ್ಲೆಗಳ ಸುಮಾರು 450ಕ್ಕೂ ಹೆಚ್ಚು ಕ್ರೀಡಾ ಪಟುಗಳು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪಿ. ಗಿರೀಶ್, ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಸದಸ್ಯರಾದ ಗೋವಿಂದರಾಜನ್, ಕುಮಾರ್, ಮಲ್ಲರಾಜು, ವನಜ್ಯೋತಿ ಪತ್ರಿಕೆಯ ಮುಖ್ಯಸ್ಥ ಡಾ.ರಂಗನಾಥ್, ಅಂತರರಾಷ್ಟ್ರೀಯ ವಾಲಿಬಾಲ್ ಪಟು ತೇಜಸ್ವಿನಿ ಜತ್ತಿ, ಮುಖಂಡರಾದ ಸಿ.ಮಹಾದೇವಪ್ರಸಾದ್, ಎಸ್.ಸಿ.ಮಂಜುನಾಥ್, ಎ.ಜಿ.ಮಂಜು ನಾಥ್, ಸಿ.ಹುಚ್ಚೇಗೌಡ, ದೊಡ್ಡಹುಂಡಿ ಜಗದೀಶ್ ಸೇರಿದಂತೆ ಹಲವರು ಇದ್ದರು.

Translate »