ಗಾಂಜಾ ಗಿಡ ವಶ: ಆರೋಪಿ ಸೆರೆ
ಚಾಮರಾಜನಗರ

ಗಾಂಜಾ ಗಿಡ ವಶ: ಆರೋಪಿ ಸೆರೆ

October 30, 2018

ಹನೂರು: ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 12 ಗಾಂಜಾ ಗಿಡಗಳನ್ನು ವಶಪಡಿಸಿ ಕೊಂಡು ವ್ಯಕ್ತಿಯೋರ್ವ ನನ್ನು ಹನೂರು ಠಾಣಾ ಪೊಲೀ ಸರು ಬಂಧಿಸಿದ್ದಾರೆ. ಕಾಮ ಗೆರೆ ನಿವಾಸಿ ಮಾದೇವ ಬಂಧಿತ ಆರೋಪಿ.

ಘಟನೆ ವಿವರ: ಮಾದೇವ ಗುಂಡಾಲ್ ಜಲಾಶಯದ ಬಳಿಯ ತನ್ನ ಜಮೀನಿನಲ್ಲಿ ಕಬ್ಬಿನ ಫಸಲಿನ ಮಧ್ಯ ಗಾಂಜಾ ಬೆಳೆದಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಭಾನುವಾರ ಮಧ್ಯಾಹ್ನ ಹನೂರು ಠಾಣೆ ಇನ್ಸ್‍ಪೆಕ್ಟರ್ ಮೋಹಿತ್ ಸಹದೇವ್, ಮುಖ್ಯಪೇದೆಗಳಾದ ಸಿದ್ದೇಶ್, ಜಮೀಲ್, ಮಲ್ಲಿಕಾರ್ಜುನ, ರಾಮದಾಸ್, ಪೇದೆಗಳಾದ ರಾಜು, ಪ್ರದೀಪ್, ರಾಮಶೆಟ್ಟಿ, ಮಂಕದರ್ ಪಾಷ, ವಿಶ್ವನಾಥ್, ಚಂದ್ರು, ವೀರಭದ್ರ, ಚಾಲಕ ಶಂಕರ್ ದಾಳಿ ನಡೆಸಿ ಕಬ್ಬಿನ ತೋಟದಲ್ಲಿ ಬೆಳೆದಿದ್ದ 12 ಗಾಂಜಾ  ಗಿಡಗಳನ್ನು ವಶಕ್ಕೆ ಪಡೆದು ಮಾದೇವನನ್ನು ಬಂಧಿಸಿದ್ದರು. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

 

Translate »