ಆರೋಪ ಸಾಬೀತಾಗುವವರೆಗೆ ಅಪರಾಧಿ ಎನ್ನಲಾಗದು
ಚಾಮರಾಜನಗರ

ಆರೋಪ ಸಾಬೀತಾಗುವವರೆಗೆ ಅಪರಾಧಿ ಎನ್ನಲಾಗದು

October 30, 2018

ಚಾಮರಾಜನಗರ: ನಮ್ಮ ಸಂವಿಧಾನದಲ್ಲಿ ಯಾವುದೇ ಆರೋಪಿ ಯನ್ನು ಆತನ ಆರೋಪ ಸಾಬೀತಾಗು ವವರೆಗೆ ನ್ಯಾಯಾಲಯ ಆತನನ್ನು ಆರೋಪಿ ಎಂದೇ ಪರಿಗಣಿಸಬೇಕೆ ಹೊರತು, ಆತನನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಬಸವರಾಜ ತಿಳಿಸಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರಾಗೃಹ ಸಂಯುಕ್ತ ಆಶ್ರಯದಲ್ಲಿ “ವಿಚಾರಣಾ ಧೀನ ಖೈದಿಗಳಿಗೆ ಕಾನೂನು ಸೇವೆಗಳ ಅಭಿಯಾನ” ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದರು. ಪೊಲೀಸರು ನ್ಯಾಯಾ ಲಯಕ್ಕೆ ಆರೋಪ ಪಟ್ಟಿಯನ್ನು ನೀಡಿದ ತಕ್ಷಣ ಆರೋಪಕ್ಕೆ ಒಳಗಾದ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ, ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಸತ್ಯ ಎಂದು ಕಂಡುಬಂದಲ್ಲಿ ಆತನಿಗೆ ವಿಧಿಗ ಳನ್ವಯ ಶಿಕ್ಷೆವಿಧಿಸಿ ನಂತರ ಆತನನ್ನು ಅಪರಾಧಿ ಎಂದು ಪರಿಗಣಿಸಬಹುದು ಎಂದರು.

ಈ ಅಭಿಯಾನದ ಮೂಲಕ ಕಾರಾ ಗೃಹದ ವಿಚಾರಣಾಧೀನ ಖೈದಿಗಳಿಗೆ ಕಾನೂನು ಅರಿವು ಹಾಗೂ ಸಂವಿಧಾನದ ಹಕ್ಕುಗಳನ್ನು ತಿಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಕ್ಷಿ ಮಾತನಾಡಿ, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜಿಲ್ಲಾ ಕಾರಾಗೃಹದಲ್ಲಿ ಇರುವ ವಿಚಾರಣಾಧೀನ ಖೈದಿಗಳಿಗೆ ಎರಡು ತಿಂಗಳುಗಳ ಕಾಲ ಕಾನೂನಿಗೆ ಸಂಬಂ ಧಿಸಿದಂತೆ ಮಾಹಿತಿ ಕೊಡಲಾಗುವುದು. ಈ ಸಂಬಂಧ ಇಬ್ಬರು ಪ್ಯಾನಲ್ ವಕೀಲರು ಗಳನ್ನು ನೇಮಿಸಲಾಗಿದ್ದು, ಆರೋಪಿಗಳಿಗೆ ಅವರ ಹಕ್ಕುಗಳ ಬಗ್ಗೆ ವಿಚಾರ ತಿಳಿಸಲಿ ದ್ದಾರೆ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ನಮ್ಮ ದೇಶದಲ್ಲಿ ಎಷ್ಟೇ ಕಠಿಣ ಕಾನೂನುಗಳು ಜಾರಿಗೆ ಬಂದರು ಅಪರಾಧಗಳ ಸಂಖ್ಯೆ ಹೆಚ್ಚುತಿರುವುದು ವಿಷಾದನೀಯ, ಪ್ರತಿಯೊಬ್ಬರು ಕಾನೂನಿನ ಕನಿಷ್ಠ ಜ್ಞಾನವನ್ನು ಹೊಂದಿದ್ದಲ್ಲಿ ಅಪರಾಧಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಶಾಂತಶ್ರೀ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‍ಕುಮಾರ್, ತರಬೇತಿ ನ್ಯಾಯಾಧೀಶ ಎಂ.ಪಿ.ಉಮೇಶ್, ಜಿಲ್ಲಾ ಕಾರಾಗೃಹದ ಪ್ಯಾನಲ್ ವಕೀಲರಾದ ಕೆ.ಬಿ. ವೀರಭದ್ರ ಸ್ವಾಮಿ, ಎ.ಎಸ್.ಮಂಜುನಾಥಸ್ವಾಮಿ ಕಾನೂನುಗಳ ಬಗ್ಗೆ ತಿಳಿಸಿದರು.

Translate »