ಚಾಮರಾಜನಗರ

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

October 30, 2018

ಗುಂಡ್ಲುಪೇಟೆ:  ಗ್ರಾಮದಲ್ಲಿರುವ ಮದ್ಯದಂಗಡಿಯಿಂದಾಗಿ ಕುಡುಕರ ಹಾವಳಿ ಹೆಚ್ಚಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಯಾಗಿದ್ದು, ಈ ಮದ್ಯದಂಗಡಿಯನ್ನು ಸ್ಥಳಾಂತರಿ ಸುವಂತೆ ನೂರಾರು ಮಹಿಳೆಯರು ಮದ್ಯದಂಗಡಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬೊಮ್ಮಲಾ ಪುರದಲ್ಲಿ ನಡೆದಿದೆ.

ಗ್ರಾಮದ ಮುಖ್ಯರಸ್ತೆಯಲ್ಲಿರುವ ಮದ್ಯ ದಂಗಡಿ ಮುಂಭಾಗ ಸಮಾವೇಶಗೊಂಡ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಗ್ರಾಮದ ಮಧ್ಯಭಾಗದಲ್ಲಿರುವ ಮದ್ಯದಂಗಡಿ ಯಿಂದ ಕುಡುಕರ ಹಾವಳಿ ಮಿತಿಮೀರಿ ಅಶಾಂತಿ ವಾತಾವರಣ ಸೃಷ್ಠಿಯಾಗಿದೆ. ತುರ್ತಾಗಿ ಈ ಮದ್ಯದಂಗಡಿಯನ್ನು ಗ್ರಾಮದ ಹೊರವಲಯಕ್ಕೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು.

ಹಾಲಿ ಇರುವ ಮದ್ಯದಂಗಡಿ ಸಮೀಪ ದಲ್ಲಿ ಅಂಗನವಾಡಿ ಕಟ್ಟಡ, ಬ್ಯಾಂಕ್, ಸೊಸೈಟಿಗಳಿದ್ದು, ಇಲ್ಲಿಗೆ ಬರುವ ಮಕ್ಕಳು ಹಾಗೂ ಮಹಿಳೆಯರಿಗೆ ತೊಂದರೆಯಾಗು ತ್ತಿದೆ. ಆದ್ದರಿಂದ ಮದ್ಯದಂಗಡಿಯನ್ನು ಗ್ರಾಮದ ಹೊರವಲಯಕ್ಕೆ ಸ್ಥಳಾಂತರಿಸ ಬೇಕು ಎಂದು ಒತ್ತಾಯಿಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಷಯ ತಿಳಿದು ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಬಾಲಕೃಷ್ಣ, ಸಬ್‍ಇನ್ಸ್‍ಪೆಕ್ಟರ್ ಗಳಾದ ಲತೇಶ್‍ಕುಮಾರ್, ರವಿಕಿರಣ್ ಹಾಗೂ ಅಬ್ಕಾರಿ ಸಬ್‍ಇನ್ಸ್‍ಪೆಕ್ಟರ್ ದ್ವಾರಕಪ್ರಸಾದ್ ಭೇಟಿ ನೀಡಿ ಸಾರ್ವ ಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

Translate »