ಅಪಘಾತದ ಹಿನ್ನೆಲೆ; ನ್ಯಾಯಾಲಯ ವಿಚಾರಣೆಗೆ ಹೆದರಿ ಮರಕ್ಕೆ ನೇಣುಹಾಕಿಕೊಂಡು ಯುವಕ ಆತ್ಮಹತ್ಯೆ
ಚಾಮರಾಜನಗರ

ಅಪಘಾತದ ಹಿನ್ನೆಲೆ; ನ್ಯಾಯಾಲಯ ವಿಚಾರಣೆಗೆ ಹೆದರಿ ಮರಕ್ಕೆ ನೇಣುಹಾಕಿಕೊಂಡು ಯುವಕ ಆತ್ಮಹತ್ಯೆ

October 30, 2018

ಚಾಮರಾಜನಗರ: ಯುವಕನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಗೂಳೀಪುರ ಗ್ರಾಮದಿಂದ ಸೋಮವಾರ ವರದಿಯಾಗಿದೆ.

ಗ್ರಾಮದ ಶಂಕರಪ್ಪ ಎಂಬುವರ ಪುತ್ರ ಮಹೇಶ್ ಉ. ಮಹದೇವಸ್ವಾಮಿ (25) ಆತ್ಮಹತ್ಯೆ ಮಾಡಿ ಕೊಂಡ ಯುವಕ. ಮೃತ ಮಹೇಶ್ ಮೂರು ವರ್ಷದ ಹಿಂದೆ ಆಟೋ ಅಪಘಾತ ನಡೆಸಿದ್ದ ಎನ್ನಲಾಗಿದೆ. ಇದರ ಪ್ರಕರಣ ಯಳಂದೂರು ನ್ಯಾಯಾ ಲಯದಲ್ಲಿ ಸೋಮವಾರ ಇತ್ತು. ಇದರಿಂದ ಭಯಭೀತನಾಗಿ ಗ್ರಾಮದ ಮನೆಯ ಹಿಂಭಾಗ ಇದ್ದ ಹುಣಸೆಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಾಮಸಮುದ್ರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪುಟ್ಟಸ್ವಾಮಿ ತಿಳಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಬ್‍ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಪರಿಶೀಲಿಸಿದರು. ನಂತರ ಶವವನ್ನು ಮರದಿಂದ ಇಳಿಸಿ ನಗರದ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಶವಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »