ಗುಂಡ್ಲುಪೇಟೆ: ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿ ಕೇರಳದಿಂದ ಕಸಾಯಿಖಾನೆ ತ್ಯಾಜ್ಯಗಳನ್ನು ತಂದು ಪಟ್ಟಣದ ಸಮೀಪ ಸುರಿಯುತ್ತಿದ್ದ ಎರಡು ಲಾರಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಪಟ್ಟಣದ ಶ್ರೀರಾಮದೇವರ ಗುಡ್ಡದ ಸಮೀಪ ಎರಡು ಲಾರಿಗಳು ನಿಂತಿದ್ದ ಬಗ್ಗೆ ಅನುಮಾನಗೊಂಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸಮೀಪಕ್ಕೆ ಹೋಗಿ ನೋಡಿದಾಗ ತ್ಯಾಜ್ಯಗಳನ್ನು ಸುರಿಯುತ್ತಿದ್ದುದು ಕಂಡುಬಂದಿತು. ಪರಿಶೀಲಿಸಿದಾಗ ಕಸಾಯಿಖಾನೆಯ ಹಾಗೂ ಕೊಳೆತ ತರಕಾರಿ ಹಣ್ಣುಗಳು ಮತ್ತು ಕೊಳಚೆ ಪದಾರ್ಥ ಗಳಿದ್ದುದು ಕಂಡುಬಂದಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎರಡು ಲಾರಿಗಳನ್ನು…
ಕಡಜ ದಾಳಿ; ಯುವಕ ಸಾವು
October 9, 2018ಚಾಮರಾಜನಗರ: ಕಡಜ ದಾಳಿಯಿಂದ ತೀವ್ರವಾಗಿ ಗಾಯ ಗೊಂಡಿದ್ದ ಯುವಕ ಸಾವನ್ನಪಿರುವ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ. ಬಂಡಿಗೆರೆ ಗ್ರಾಮದ ಸಿದ್ದರಾಜು ಎಂಬುವರ ಮಗ ಮಹೇಶ್ (22) ಕಡಜ ದಾಳಿಗೆ ಬಲಿಯಾದ ಯುವಕ. ಘಟನೆ ವಿವರ: ಭಾನುವಾರ ಸಂಜೆ ಮಹೇಶ್ ಜೆಸಿಬಿಯಲ್ಲಿ ಹರದನಹಳ್ಳಿ ಬಳಿಯ ಜಮೀನಿನಲ್ಲಿ ಗಿಡಗಳನ್ನು ಕೀಳುತ್ತಿದ್ದರು. ಈ ವೇಳೆ ಗಿಡಗಳ ಮಧ್ಯೆ ಇದ್ದ ಕಡಜ ಮಹೇಶ್ ಮೇಲೆ ದಾಳಿ ನಡೆಸಿ ಎಲ್ಲೆಡೆ ಕಚ್ಚಿತು. ಇದರಿಂದ ತೀವ್ರವಾಗಿ ಗಾಯಗೊಂಡ ಮಹೇಶ್‍ನನ್ನು ನಗರದ ಜಿಲ್ಲಾ…
ಅ.21, ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ
October 9, 2018ಚಾಮರಾಜನಗರ: ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿ ಕಾರ್ಯಕ್ರಮವನ್ನು ಅ.21ರಂದು ಚಾ.ನಗರದಲ್ಲಿ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲು ನಿರ್ಧಾರ ಮಾಡಲಾಯಿತು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಈ ಹಿಂದೆ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗಿತ್ತು. ಜಯಂತಿ ಕಾರ್ಯಕ್ರಮ…
ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಹಿರಿದು
October 8, 2018ಚಾಮರಾಜನಗರ: ಕಕ್ಷಿದಾರರುಗಳಿಗೆ ಉತ್ತಮ ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಹಿರಿದು ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಬಿ.ಎಂ. ಶ್ಯಾಮ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಇರುವ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ವಕೀಲರನ್ನು ಉದ್ದೇಶಿಸಿ ಮಾತನಾಡಿದರು. ವಕೀಲ ವೃತ್ತಿಯು ಪವಿತ್ರ ವಾಗಿದ್ದು, ಇದಕ್ಕೆ ಅವಿರತ ಶ್ರಮವಿರಬೇಕು. ವಕೀಲರು ಸದಾಕಾಲ ಓದಿನಲ್ಲಿ ತೊಡಗಿರಬೇಕು. ವಕೀಲರು ಇಂಗ್ಲೀಷ್ ಭಾಷೆಯನ್ನು ಕಲಿಯಬೇಕು, ಭಾಷೆ ಬಳಕೆಯಲ್ಲಿ ಯಾವುದೇ…
ರಾಮಾಪುರ ಪ್ರೌಢ ಶಾಲೆಯಲ್ಲಿ ಕಿಡಿಗೇಡಿಗಳ ದಾಂಧಲೆ
October 8, 2018ಹನೂರು: ಸಮೀ ಪದ ರಾಮಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಾಗಿಲು ಮುರಿದು ಕೊಠಡಿಯಲ್ಲಿದ್ದ ಪೀಠೋಪಕರಣ ಹಾಗೂ ಇತರ ಉಪಕರಣಗಳನ್ನು ಕಿಡಿಗೇಡಿಗಳು ನಾಶ ಪಡಿಸಿರುವ ಘಟನೆ ನಡೆದಿದೆ. ಶನಿವಾರ ರಾತ್ರಿ ಶಾಲೆಯ ಕಬ್ಬಿಣದ ಗೇಟ್ ಮತ್ತು ಮರದ ಎರಡು ಕೊಠಡಿಗಳ ಬಾಗಿಲು ಮುರಿದು ಮುಖ್ಯ ಶಿಕ್ಷಕರ ಕೊಠಡಿ ಹಾಗೂ ಸಿಬ್ಬಂದಿಗಳ ಕೊಠಡಿಯಲ್ಲಿರುವ ಪೀಠೋಪಕರಣಗಳು ಸೇರಿದಂತೆ ರೇಡಿಯೋ, ಟಿವಿ, ಕಿಟಕಿ, ಬಾಗಿಲು ಸೇರಿದಂತೆ ಲಕ್ಷಾಂತರ ಬೆಲೆ ಬಾಳುವ ಉಪಕರಣಗಳನ್ನು ನಾಶಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ…
ಬೇಗೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಬಹುಮತ
October 8, 2018ಬೇಗೂರು: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸಂಪೂರ್ಣ ಬಹುಮತ ದೊರಕಿದೆ. 15 ಸದಸ್ಯ ಬಲದ ಗ್ರಾಮಪಂಚಾಯಿತಿ ಹಾಲಿ ಅಧ್ಯಕ್ಷ ಬಿ.ಎಸ್.ಚೇತನ್ ಅವರು ಗ್ರಾಮಪಂಚಾಯಿತಿಗೆ ಬರುವ ಯಾವುದೇ ಅನುದಾನ ವಿತರಣೆಯಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಚೇತನ್ ಸ್ವಜನಪಕ್ಷಪಾತ ಮಾಡಿ ಆಡಳಿತ ದುರು ಪಯೋಗಮಾಡಿಕೊಂಡಿದ್ದಾರೆ ಎಂದು ಆರೋಪಿಸಿ 12 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಉಪವಿಭಾಗಾ ಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಉಪ ವಿಭಾ ಗಾಧಿಕಾರಿ ಅ.5 ರ ಮಧ್ಯಾಹ್ನ 12…
ಜನರನ್ನು ಸ್ವಾವಲಂಬಿಗಳನ್ನಾಗಿಸುತ್ತಿರುವ ಧರ್ಮಸ್ಥಳ ಸಂಸ್ಥೆ
October 8, 2018ಗುಂಡ್ಲುಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಾಲೂಕಿನಾದ್ಯಾಂತ ಮಹಿಳೆಯರು ಮತ್ತು ಪುರುಷರನ್ನು ಸಂಘಟಿಸಿ ಅವರಲ್ಲಿ ಉಳಿತಾಯ ಮನೋಭಾವ ಬೆಳೆಸಿ ಆರ್ಥಿಕ ನೆರವನ್ನು ನೀಡುವುದ ರೊಂದಿಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಸುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಜನ ಜಾಗೃತಿ ಜಾಥಾ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆಯು ಗಾಂಧಿ ಜಯಂತಿ ಸಂಭ್ರಮಾಚರಣೆ…
ಮೂವರ ಆತ್ಮಹತ್ಯೆ ಯತ್ನಕ್ಕೂ ನನಗೂ ಸಂಬಂಧ ಇಲ್ಲ
October 8, 2018ಚಾಮರಾಜನಗರ: ತಾಲೂಕಿನ ಬೇಡರಪುರ ಗ್ರಾಮದ ಮಲ್ಲಯ್ಯ ಅವರ ಕುಟುಂಬ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ದ್ದಕ್ಕೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಅವರು ಮಾಡಿರುವ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ ವಾದದ್ದು ಎಂದು ಅದೇ ಗ್ರಾಮದ ರೈತ ಎಂ.ಶಿವಪ್ಪ ಸ್ಪಷ್ಟನೆ ನೀಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೇಡರಪುರ ಗ್ರಾಮದ ಸರ್ವೇ ನಂ.33/2 ರಲ್ಲಿ ನನ್ನ ಸ್ವಾಧೀನ ಬಂಧದಲ್ಲಿ 4 ಎಕರೆ ಜಮೀನಿದೆ….
ಜೀರಿಗೆ ಗದ್ದೆ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಭೇಟಿ
October 7, 2018ಕೊಳ್ಳೇಗಾಲ: ಹನೂರು ಕ್ಷೇತ್ರ ವ್ಯಾಪ್ತಿಯ ಜೀರಿಗೆಗದ್ದೆಯ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಭೇಟಿ ನೀಡುವ ಮೂಲಕ ಗಿರಿಜನ ಮಕ್ಕಳ ಕುಶಲೋಪರಿ ವಿಚಾರಿಸಿದರು. ಪ್ರಥಮ ಬಾರಿಗೆ ಆಶ್ರಮ ಶಾಲೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಸುಮಾರು ಇಪ್ಪತ್ತು ನಿಮಿಷಗಳ ಕಾಲ ಗಿರಿಜನ ಮಕ್ಕಳ ಯೋಗಕ್ಷೇಮ ಅವರಿಗೆ ತಲುಪಬೇಕಾದ ಸವಲತ್ತು ವಿತರಿಸಲಾಗುತ್ತಿದೆಯೇ ಎಂಬ ಕುರಿತು ಮಾಹಿತಿ ಪಡೆದರು. ಖುದ್ದು ಮಕ್ಕಳು ಊಟ ಮಾಡುವವರೆವಿಗೂ ತಾಳ್ಮೆಯಿಂದ ಕಾದಿದ್ದು ಊಟೋಪಚಾರ ಸಮರ್ಪಕ ರೀತಿ ನೀಡಲಾಗುತ್ತಿದೇಯೆ ಎಂಬುದರ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆ…
ಚಾಮರಾಜೇಶ್ವರ ರಥ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
October 7, 20182 ವರ್ಷಗಳಿಂದ ರಥೋತ್ಸವ ಸ್ಥಗಿತ ರಥ ನಿರ್ಮಾಣ ಕಾಮಗಾರಿ ವಿಳಂಭಕ್ಕೆ ಆಕ್ರೋಶ ಚಾಮರಾಜನಗರ: ಶ್ರೀ ಚಾಮರಾಜೇಶ್ವರಸ್ವಾಮಿ ಬ್ರಹ್ಮ ರಥೋ ತ್ಸವದ ಕಾಮಗಾರಿಯನ್ನು ತಕ್ಷಣ ಪ್ರಾರಂ ಭಿಸಬೇಕು ಎಂದು ಒತ್ತಾಯಿಸಿ ನಾಗರಿ ಕರು, ಭಕ್ತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಶ್ರೀ ಚಾಮರಾಜೇಶ್ವರಸ್ವಾಮಿ ಸೇವಾ ಸಮಿ ತಿಯ ಆಶ್ರಯದಲ್ಲಿ ದೇವಸ್ಥಾನದ ಮುಂಭಾಗ ನೂರಾರು ಜನರು ಜಮಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಮುಜರಾಯಿ ಸಚಿ ವರು, ಜಿಲ್ಲಾಡಳಿತ,…