ಚಾಮರಾಜೇಶ್ವರ ರಥ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಚಾಮರಾಜೇಶ್ವರ ರಥ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

October 7, 2018
  • 2 ವರ್ಷಗಳಿಂದ ರಥೋತ್ಸವ ಸ್ಥಗಿತ
  • ರಥ ನಿರ್ಮಾಣ ಕಾಮಗಾರಿ ವಿಳಂಭಕ್ಕೆ ಆಕ್ರೋಶ

ಚಾಮರಾಜನಗರ:  ಶ್ರೀ ಚಾಮರಾಜೇಶ್ವರಸ್ವಾಮಿ ಬ್ರಹ್ಮ ರಥೋ ತ್ಸವದ ಕಾಮಗಾರಿಯನ್ನು ತಕ್ಷಣ ಪ್ರಾರಂ ಭಿಸಬೇಕು ಎಂದು ಒತ್ತಾಯಿಸಿ ನಾಗರಿ ಕರು, ಭಕ್ತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಶ್ರೀ ಚಾಮರಾಜೇಶ್ವರಸ್ವಾಮಿ ಸೇವಾ ಸಮಿ ತಿಯ ಆಶ್ರಯದಲ್ಲಿ ದೇವಸ್ಥಾನದ ಮುಂಭಾಗ ನೂರಾರು ಜನರು ಜಮಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಮುಜರಾಯಿ ಸಚಿ ವರು, ಜಿಲ್ಲಾಡಳಿತ, ಮುಜರಾಯಿ ಇಲಾಖೆ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ದೇವಸ್ಥಾನದ ಎದುರು ಹಾಕ ಲಾಗಿದ್ದು ಶಾಮಿಯಾನದಡಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಧರಣಿ ನಡೆಸಿದ ಭಕ್ತರು, ಈ ಕೂಡಲೇ ಶ್ರೀ ಚಾಮರಾಜೇ ಶ್ವರಸ್ವಾಮಿ ಬ್ರಹ್ಮ ರಥೋತ್ಸವದ ಕಾಮ ಗಾರಿಯನ್ನು ಪ್ರಾರಂಭಿಸಬೇಕು. ಇಲ್ಲದಿ ದ್ದಲ್ಲಿ ಹಂತ ಹಂತವಾಗಿ ಹೋರಾಟ ರೂಪಿ ಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇ ಶ್ವರಸ್ವಾಮಿ ದೇವಸ್ಥಾನಕ್ಕೆ ಹಾಗೂ ಬ್ರಹ್ಮ ರಥೋತ್ಸವಕ್ಕೆ ಸುಮಾರು 2 ಶತಮಾನಗಳ ಇತಿಹಾಸ ಇದೆ. ಆಷಾಢ ಮಾಸದಲ್ಲಿ ಬ್ರಹ್ಮ ರಥೋತ್ಸವಕ್ಕೆ ಸುಮಾರು 2 ಶತಮಾನಗಳ ಇತಿಹಾಸ ಇದೆ. ಆಷಾಢÀ ಮಾಸದಲ್ಲಿ ನಡೆಯಲಿರುವ ಏಕೈಕ ರಥೋತ್ಸವ ಇದಾ ಗಿದೆ. ನೂತನ ದಂಪತಿಗಳು ರಥೋತ್ಸವ ದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿತ್ತು. ಕಳೆದ 2 ವರ್ಷಗಳ ಹಿಂದೆ ಕಿಡಿಗೇಡಿ ಯೊಬ್ಬ ದೊಡ್ಡ ರಥಕ್ಕೆ ಬೆಂಕಿ ಹಚ್ಚಿದ ಪರಿಣಾಮ ಎರಡು ವರ್ಷಗಳಿಂದ ರಥೋ ತ್ಸವ ಸ್ಥಗಿತಗೊಂಡಿದೆ. ಹೊಸ ರಥ ನಿರ್ಮಾಣ ವಿಷಯವನ್ನು ಜಿಲ್ಲಾ ಉಸ್ತು ವಾರಿ ಸಚಿವರು, ಮುಜರಾಯಿ ಸಚಿವರು, ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ನೂತನ ರಥ ನಿರ್ಮಾಣಕ್ಕೆ ಸರ್ಕಾರ 1.20 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಇದುವರೆವಿಗೂ ರಥ ನಿರ್ಮಾ ಣದ ಕಾಮಗಾರಿ ಪ್ರಾರಂಭವಾಗಿಲ್ಲ. ಈ ವಿಳಂಬ ಹೀಗೆಯೇ ಮುಂದುವರೆದರೆ ಮುಂದಿನ ವರ್ಷವೂ ರಥೋತ್ಸವ ನಡೆ ಯುವುದಿಲ್ಲ. ಹೀಗಾಗಿ ಬೀದಿಗಿಳಿದು ಪ್ರತಿ ಭಟನೆ ನಡೆಸುತ್ತಿರುವುದಾಗಿ ಹೇಳಿದರು.

ನಗರದಲ್ಲಿ ನಡೆಸಲು ಉದ್ದೇಶಿಸಿರುವ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ದೇವಸ್ಥಾನದ ಮುಂಭಾಗದ ಆವರಣದಲ್ಲಿ ನಡೆಸಲು ಅವಕಾಶ ನೀಡು ವುದಿಲ್ಲ. ರಥ ನಿರ್ಮಾಣದ ಕಾಮಗಾರಿ ಪ್ರಾರಂಭವಾಗದೇ ದೇವಸ್ಥಾನದ ಮುಂಭಾಗ ಯಾವುದೇ ಕಾರ್ಯಕ್ರಮ ನಡೆದರೂ ಅದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯ ಪಾಲಕ ಇಂಜಿನಿಯರ್ ವಾಸುದೇವ್ ಸ್ಥಳಕ್ಕೆ ಆಗಮಿಸಿ, ನೂತನ ರಥ ನಿರ್ಮಾಣಕ್ಕೆ ನಕ್ಷೆ ತಯಾರಾಗಿದ್ದು, ಮುಜರಾಯಿ ಇಲಾಖೆಗೆ ಕಳುಹಿಸಲಾಗಿದೆ. ಅನುಮತಿ ದೊರೆತ ಕೂಡಲೇ ಟೆಂಡರ್ ಕರೆಯ ಲಾಗುವುದು ಎಂದರು. ಇವರ ಮಾತಿಗೆ ಪ್ರತಿಭಟನಾಕಾರರು ಮನ್ನಣೆ ನೀಡದೆ ಧರಣಿ ಮುಂದುವರೆಸಿದರು.

ಶಿರಸ್ತೇದಾರ್ ಶಂಕರ್‍ರಾವ್ ಆಗಮಿಸಿ, ಜಿಲ್ಲಾಧಿಕಾರಿಗಳು ಸಭೆಯೊಂದರಲ್ಲಿ ಪಾಲ್ಗೊಂ ಡಿರುವುದರಿಂದ ಇಲ್ಲಿಗೆ ಆಗಮಿಸಲು ಆಗು ತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಆರಂಭಿಸು ವುದಾಗಿ ಭರವಸೆ ನೀಡಿದರು. ಇವರ ಮಾತಿಗೂ ಧರಣಿ ನಿರತರು ಸೊಪ್ಪು ಹಾಗದೇ ಧರಣಿ ಮುಂದುವರೆಸಿದರು.

ಪರಿಸ್ಥಿತಿ ಕೈಮೀರುತ್ತಿದೆ ಎಂಬ ಮಾಹಿತಿ ಅರಿತ ಹೆಚ್ವುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯಿತ್ರಿ, ಸ್ಥಳಕ್ಕೆ ಆಗಮಿಸಿ, ನೂತನ ರಥ ನಿರ್ಮಾಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನವೆಂಬರ್ ಮೊದಲ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭಾ ಸದಸ್ಯರಾದ ಸುದರ್ಶನ್‍ಗೌಡ, ಪ್ರಕಾಶ್, ಮಂಜುನಾಥ್, ರಾಘವೇಂದ್ರ, ಬಸವಣ್ಣ, ಮಹದೇವಯ್ಯ, ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ, ಮಹದೇವನಾಯ್ಕ, ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಶಾ. ಮುರುಳಿ, ಚಾ.ರಂ.ಶ್ರೀನಿವಾಸ್‍ಗೌಡ, ಮಂಜುನಾಥ್‍ಗೌಡ, ಬಂಗಾರನಾಯ್ಕ, ಶಿವಣ್ಣ, ಆರ್.ವಿ.ಮಹದೇವಸ್ವಾಮಿ, ಸಿದ್ದ ಶೆಟ್ಟಿ, ಚಂದ್ರಶೇಖರ, ಬಾಲಸುಬ್ರಮಣ್ಯಂ, ಸಿದ್ದರಾಜು, ವಾಜಪೇಯಿ, ಕಂಟ್ರಾಕ್ಟರ್ ಸೋಮನಾಯಕ್, ವಾಸು, ಕೇಶವ ಮೂರ್ತಿ, ಸುಂದರ್‍ರಾಜ್, ರಾಜು ನಾಯ್ಕ, ನಾಗಶೆಟ್ಟಿ, ಲೋಕನಾಥ್, ಬಸ ವರಾಜು, ಪಾಪು ಸೇರಿದಂತೆ ನೂರಾರು ಭಕ್ತರು ಎಲ್ಲಾ ಕೋಮುವಾರು ಯಜ ಮಾನರು ಭಾಗವಹಿಸಿದ್ದರು.

Translate »