ತಮಿಳುನಾಡಿನ ದಿಂಬಂ ಬಳಿ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್
ಚಾಮರಾಜನಗರ

ತಮಿಳುನಾಡಿನ ದಿಂಬಂ ಬಳಿ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್

October 7, 2018

ಚಾಮರಾಜನಗರ: – ತಮಿಳುನಾಡಿನ ದಿಂಬಂ ಬಳಿ ಖಾಸಗಿ ಬಸ್‍ವೊಂದು ಪ್ರಪಾತಕ್ಕೆ ಬಿದ್ದು, ಇಬ್ಬರು ಸ್ಥಳ ದಲ್ಲಿಯೇ ಸಾವನ್ನಪ್ಪಿ, 21 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತಮಿಳುನಾಡಿನ ಈರೋಡ್‍ನ ಗುರುಸ್ವಾಮಿ(56), ಮುತ್ತು(65) ಮೃತಪಟ್ಟವರು.

ಘಟನೆಯ ವಿವರ: ಮೈಸೂರಿನಿಂದ ಮಧ್ಯಾಹ್ನ 3:30ಕ್ಕೆ ಸುಮಾರಿಗೆ ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಈರೋಡ್‍ಗೆ ತೆರಳುತ್ತಿದ್ದ ಖಾಸಗಿ ಬಸ್(ಆರ್‍ಪಿಎನ್) ಶುಕ್ರವಾರ ರಾತ್ರಿ 8.30ರ ಸಮಯದಲ್ಲಿ ತಮಿಳುನಾಡಿನ ದಿಂಬಂ ಬಳಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 80 ರಿಂದ 100 ಅಡಿಗಳ ಆಳದಷ್ಟು ಪ್ರಪಾತಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಬಸ್‍ನಲ್ಲಿ 30 ಮಂದಿ ಪ್ರಯಾಣಿಕರಿದ್ದರು. ಘಟನೆಯಿಂದ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದರೆ. 21 ಮಂದಿಗೆ ಗಾಯವಾಗಿದೆ.

ಗಾಯಳುಗಳನ್ನು ತಮಿಳುನಾಡಿನ ಸತ್ಯಮಂಗಲಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, 18 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಈರೋಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅತಿಯಾದ ವೇಗ ಹಾಗೂ ಮಳೆ ಬರುತ್ತಿದ್ದ ಕಾರಣದಿಂದ ಘಟನೆ ಸಂಭವಿಸಿದೆ. ಬಸ್‍ನ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿ ದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಸತ್ಯ ಮಂಗಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »