ಜೀರಿಗೆ ಗದ್ದೆ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಭೇಟಿ
ಚಾಮರಾಜನಗರ

ಜೀರಿಗೆ ಗದ್ದೆ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಭೇಟಿ

October 7, 2018

ಕೊಳ್ಳೇಗಾಲ:  ಹನೂರು ಕ್ಷೇತ್ರ ವ್ಯಾಪ್ತಿಯ ಜೀರಿಗೆಗದ್ದೆಯ ಗಿರಿಜನ ಆಶ್ರಮ ಶಾಲೆಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಭೇಟಿ ನೀಡುವ ಮೂಲಕ ಗಿರಿಜನ ಮಕ್ಕಳ ಕುಶಲೋಪರಿ ವಿಚಾರಿಸಿದರು.

ಪ್ರಥಮ ಬಾರಿಗೆ ಆಶ್ರಮ ಶಾಲೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಸುಮಾರು ಇಪ್ಪತ್ತು ನಿಮಿಷಗಳ ಕಾಲ ಗಿರಿಜನ ಮಕ್ಕಳ ಯೋಗಕ್ಷೇಮ ಅವರಿಗೆ ತಲುಪಬೇಕಾದ ಸವಲತ್ತು ವಿತರಿಸಲಾಗುತ್ತಿದೆಯೇ ಎಂಬ ಕುರಿತು ಮಾಹಿತಿ ಪಡೆದರು. ಖುದ್ದು ಮಕ್ಕಳು ಊಟ ಮಾಡುವವರೆವಿಗೂ ತಾಳ್ಮೆಯಿಂದ ಕಾದಿದ್ದು ಊಟೋಪಚಾರ ಸಮರ್ಪಕ ರೀತಿ ನೀಡಲಾಗುತ್ತಿದೇಯೆ ಎಂಬುದರ ಕುರಿತು ಮಕ್ಕಳಿಂದಲೇ ಮಾಹಿತಿ ಪಡೆ ದರು. ಆಶ್ರಮ ಶಾಲೆಯ ನಿರ್ವಹಣೆ ಉತ್ತಮ ರೀತಿಯಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿ ಸಿದ ಜಿಲ್ಲಾಧಿಕಾರಿಗಳು ಇಂದು ಮಾತ್ರ ಈ ರೀತಿ ನಿರ್ವಹಣೆ ಮಾಡಲಾಗಿದೆಯೇ ಅಥವಾ ದಿನಂಪ್ರತಿ ಇದೇ ರೀತಿ ಸ್ವಚ್ಛತೆ ಕಾಯ್ದುಕೊಳ್ಳಲಾಗುತ್ತಿದೆಯೇ ಎಂದು ನಿಲಯ ಪಾಲಕರನ್ನು ಪ್ರಶ್ನಿಸಿದರು.

ಕೆಲಕಾಲ ಮಕ್ಕಳ ಪಾಠ, ಪ್ರವಚನದ ಬಗ್ಗೆಯೂ ಮಾಹಿತಿ ಪಡೆದು ನೆಲ್ಲಿಕತ್ರಿಯಲ್ಲಿರುವ ಗಿರಿಜನ ಮಕ್ಕಳು ಇಲ್ಲಿ ಕಲಿಯುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ಅಲ್ಲಿನ ಮಕ್ಕಳನ್ನು ಇಲ್ಲಿಗೆ ಕರೆತಂದು ಶೈಕ್ಷ ಣಿಕ ಪ್ರಗತಿಗೆ ಸ್ಪಂದಿಸಿ ಎಂದು ಗಿರಿಜನ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಕೆಲಕಾಲ ಅಡುಗೆ ಸಿಬ್ಬಂದಿಗಳು, ಶಿಕ್ಷಕರು ಹಾಗೂ ವಾರ್ಡ್‍ನ್ ಜೊತೆ ಸಂಯ ಮದಿಂದಲೇ ಚರ್ಚಿಸಿದ ಜಿಲ್ಲಾಧಿಕಾರಿಗಳು ಚಹಾ ಸವಿದು ನಿರ್ಗಮಿಸಿದರು. ಈ ಸಂದರ್ಭದಲ್ಲಿ ಗಿರಿಜನ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಗ್ರಾಪಂ ಉಪಾಧ್ಯಕ್ಷ ಸಿದ್ದರಾಜು, ಪರಿಸರ ಪ್ರೇಮಿ ಕೃಷ್ಣಮೂರ್ತಿ, ಮುಖಂಡ ಮಲ್ಲಣ್ಣ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಇದ್ದರು.

Translate »