ಕಡಜ ದಾಳಿ; ಯುವಕ ಸಾವು
ಚಾಮರಾಜನಗರ

ಕಡಜ ದಾಳಿ; ಯುವಕ ಸಾವು

October 9, 2018

ಚಾಮರಾಜನಗರ:  ಕಡಜ ದಾಳಿಯಿಂದ ತೀವ್ರವಾಗಿ ಗಾಯ ಗೊಂಡಿದ್ದ ಯುವಕ ಸಾವನ್ನಪಿರುವ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ. ಬಂಡಿಗೆರೆ ಗ್ರಾಮದ ಸಿದ್ದರಾಜು ಎಂಬುವರ ಮಗ ಮಹೇಶ್ (22) ಕಡಜ ದಾಳಿಗೆ ಬಲಿಯಾದ ಯುವಕ.

ಘಟನೆ ವಿವರ: ಭಾನುವಾರ ಸಂಜೆ ಮಹೇಶ್ ಜೆಸಿಬಿಯಲ್ಲಿ ಹರದನಹಳ್ಳಿ ಬಳಿಯ ಜಮೀನಿನಲ್ಲಿ ಗಿಡಗಳನ್ನು ಕೀಳುತ್ತಿದ್ದರು. ಈ ವೇಳೆ ಗಿಡಗಳ ಮಧ್ಯೆ ಇದ್ದ ಕಡಜ ಮಹೇಶ್ ಮೇಲೆ ದಾಳಿ ನಡೆಸಿ ಎಲ್ಲೆಡೆ ಕಚ್ಚಿತು. ಇದರಿಂದ ತೀವ್ರವಾಗಿ ಗಾಯಗೊಂಡ ಮಹೇಶ್‍ನನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯರಾತ್ರಿ ಮೃತಪಟ್ಟನು ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಶವಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ಸಂಜೆ ಅವರ ಸ್ವಗ್ರಾಮ ಬಂಡಿಗೆರೆಯಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »