ಚಾಮರಾಜನಗರ

ಕೊಳ್ಳೇಗಾಲ: 9ನೇ ವಾರ್ಡ್ ಬಿಎಸ್ಪಿ ಅಭ್ಯರ್ಥಿ ಸಾವು
ಚಾಮರಾಜನಗರ

ಕೊಳ್ಳೇಗಾಲ: 9ನೇ ವಾರ್ಡ್ ಬಿಎಸ್ಪಿ ಅಭ್ಯರ್ಥಿ ಸಾವು

August 27, 2018

ಕೊಳ್ಳೇಗಾಲ:  ಆ.31ರಂದು ಕೊಳ್ಳೇಗಾಲದಲ್ಲಿ ನಡೆ ಯುವ ನಗರಸಭೆ ಚುನಾವಣೆಯಲ್ಲಿ 9ನೇ ವಾರ್ಡ್‍ನಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ರಮೇಶ್ ಅವರು ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವ ಘಟನೆ ಜರುಗಿದೆ. ಮೃತ ರಮೇಶ್ ಅವರು ಇಂದು ಬೆಳಗ್ಗೆ ನಂಜನಗೂಡು ದೇವಾಲಯಕ್ಕೆ ಪತ್ನಿ ಸಮೇತ ತೆರಳಿ ಪೂಜೆ ಸಲ್ಲಿಸಿ ವಾಪಸ್ಸಾ ಗುವ ವೇಳೆಯಲ್ಲಿ ಆಲಗೂಡು ಗ್ರಾಮದಲ್ಲಿ ಪತ್ನಿಯನ್ನು ಮಾವನ ಮನೆಗೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ತೇರಂಬಳ್ಳಿ ಸಮೀಪ ಅಯತಪ್ಪಿ ಬಿದ್ದು ಮುಖಕ್ಕೆ ಹಾಗೂ ತಲೆಗೆ ಬಿಟ್ಟು ಬಿದ್ದಿತ್ತೆನ್ನಲಾಗಿದೆ. ರಕ್ತದೊತ್ತಡ…

ಕೇರಳದ ಆಸ್ಪತ್ರೆ ತ್ಯಾಜ್ಯಕ್ಕೆ ತೊಟ್ಟಿಯಾದ ಗುಂಡ್ಲುಪೇಟೆ ಲಾರಿ ವಶ: ಒಬ್ಬನ ಬಂಧನ
ಚಾಮರಾಜನಗರ

ಕೇರಳದ ಆಸ್ಪತ್ರೆ ತ್ಯಾಜ್ಯಕ್ಕೆ ತೊಟ್ಟಿಯಾದ ಗುಂಡ್ಲುಪೇಟೆ ಲಾರಿ ವಶ: ಒಬ್ಬನ ಬಂಧನ

August 27, 2018

ಗುಂಡ್ಲುಪೇಟೆ:  ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ವಾದ ಪರಿಣಾಮವನ್ನು ಬೀರುವ ಮತ್ತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಕೇರಳದ ಆಸ್ಪತ್ರೆಯ ತ್ಯಾಜ್ಯಗಳನ್ನು ಪಟ್ಟ ಣದ ಕಲ್ಯಾಣಿಕೊಳದ ಸಮೀಪದ ದೇವಾಲಯದ ಮುಂಭಾಗದಲ್ಲಿರುವ ಜಮೀನಿನಲ್ಲಿ ಸುರಿಯುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಿದ ಕರವೇ ಕಾರ್ಯಕರ್ತರು ಲಾರಿ ಯೊಂದನ್ನು ಪೆÇಲೀಸರ ವಶಕ್ಕೆ ನೀಡಿ ರುವ ಘಟನೆ ನಡೆದಿದೆ. ಆ.26ರ ಮುಂಜಾನೆ 6 ಗಂಟೆಗೆ ಕೇರಳ ಗಡಿಯಲ್ಲಿರುವ ಮೂಲೆಹೊಳೆ ಅರಣ್ಯ ಇಲಾಖೆಯ ಚೆಕ್‍ಪೆÇೀಸ್ಟ್ ಮೂಲಕ ವೇಗ ವಾಗಿ ಸಾಗಿ ಬಂದ ಲಾರಿ ದುರ್ವಾಸನೆ ಬೀರುತ್ತಿದ್ದುದನ್ನು ಗಮನಿಸಿದ…

ಶಿವಪುರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಚಾಮರಾಜನಗರ

ಶಿವಪುರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

August 27, 2018

ಚಾಮರಾಜನಗರ:  ಶಿವಪುರದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆÀ್ರಸ್‍ನ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಎಂ.ಸಿ.ಮಹದೇವಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಅಧಿಕಾರಿ ಗುರುಸ್ವಾಮಿ ಕರ್ತವ್ಯ ನಿರ್ವಹಿಸಿದರು. ಅವಿರೋಧ ಆಯ್ಕೆ ಘೋಷಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಿಕಾಂತ, ಎನ್.ಕುಮಾರ್, ನಾಗಮ್ಮ, ಮಾಜಿ ಉಪಾಧ್ಯಕ್ಷರಾದ ಅಂಬಿಕಾ, ಭಾಗ್ಯ, ಸದಸ್ಯರಾದ ಲಕ್ಷ್ಮಿ, ವಸಂತ, ಸುಧಾ, ಮಹದೇವಮ್ಮ, ಮಹದೇವಸ್ವಾಮಿ, ಎಂ.ದುಂಡೇಗೌಡ, ಎಂ.ಶಿವಣ್ಣ, ಶಿವಸ್ವಾಮಿ ಹಾಜರಿದ್ದರು.

ಕೊಡಗಿನ ನೆರೆ ಸಂತ್ರಸ್ತರಿಗೆ ದೇಣಿಗೆ
ಚಾಮರಾಜನಗರ

ಕೊಡಗಿನ ನೆರೆ ಸಂತ್ರಸ್ತರಿಗೆ ದೇಣಿಗೆ

August 27, 2018

ಚಾಮರಾಜನಗರ: ಕೊಡಗಿನ ನೆರೆ ಸಂತ್ರಸ್ತರಿಗೆ ರಾಮಸಮುದ್ರ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ನಗರದ ಶಾಲಾ-ಕಾಲೇಜು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ 14,962 ರೂ. ದೇಣಿಗೆಯನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಮೂಲಕ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್.ಮಹೇಶ್, ಸಹ ಕಾರ್ಯದರ್ಶಿ ವಿ.ರಂಗನಾಥ್, ಖಜಾಂಚಿ ಗೌತಮ್, ಸದಸ್ಯರಾದ ನೂತನ್, ಆರ್.ಸಿ. ರಾಜೇಶ್, ಮಹದೇವಪ್ರಸಾದ್, ಆರ್.ಎನ್. ಭರತ್, ಮನೋಜ್, ಪ್ರಶಾಂತ್, ಕಿರಣ, ಚಂದ್ರು, ಮಹೇಶ್, ಮನೋಹರ್ ಹಾಜರಿದ್ದರು.

ನೇರ ಫೊನ್-ಇನ್: 35 ದೂರು ದಾಖಲು: ಸದ್ದು ಮಾಡಿದ ಅಕ್ರಮ ಮರಳು ದಂಧೆ, ಮೂಲ ಸೌಲಭ್ಯಗಳ ಕೊರತೆ
ಚಾಮರಾಜನಗರ

ನೇರ ಫೊನ್-ಇನ್: 35 ದೂರು ದಾಖಲು: ಸದ್ದು ಮಾಡಿದ ಅಕ್ರಮ ಮರಳು ದಂಧೆ, ಮೂಲ ಸೌಲಭ್ಯಗಳ ಕೊರತೆ

August 26, 2018

ಚಾಮರಾಜನಗರ:  ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಒಟ್ಟು 35 ದೂರುಗಳು ದಾಖಲಾಗಿವೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತವಾಗಿ ಒಂದು ಗಂಟೆಗಳ ಕಾಲ ಜಿಲ್ಲೆಯ ನಾನಾ ಭಾಗದಿಂದ ದೂರುಗಳು, ಸಮಸ್ಯೆಗಳನ್ನು ಕರೆ ಮಾಡಿ ತಿಳಿಸಲಾಯಿತು. ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ, ನಗರದ ಸಂಚಾರ ವ್ಯವಸ್ಥೆ, ಇ-ಸ್ವತ್ತು, ಸ್ವಚ್ಛತೆ ಸೇರಿದಂತೆ ಇತರೆ ವಿಷಯಗಳನ್ನು ಜಿಲ್ಲೆಯ ವಿವಿಧ…

ಕಾರು-ಬೈಕ್ ಡಿಕ್ಕಿ: ಬೈಕ್ ಸವಾರ ಸಾವು
ಚಾಮರಾಜನಗರ

ಕಾರು-ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

August 26, 2018

ಬೇಗೂರು(ಗುಂಡ್ಲುಪೇಟೆ): ಕಾರು, ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಬೇಗೂರು ಸಮೀಪದ ಮಾದಪಟ್ಟಣ ಗೇಟ್ ಬಳಿ ನಡೆದಿದೆ.ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮದ ಜಗದೀಶ್(30) ಮೃತರು. ಜಗದೀಶ್ ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಬೊಲೆರೋ ಕಾರು ಜಗದೀಶ್ ಅವರ ಬೈಕಿಗೆ ಬೇಗೂರು ಸಮೀಪದ ಮಾದಪಟ್ಟಣ ಗೇಟ್ ಬಳಿ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ಜಗದೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೆÇಲೀಸರು ತಿಳಿಸಿದರು.ಸ್ಥಳಕ್ಕೆ ಬೇಗೂರು ಠಾಣೆಯ ಪಿಎಸ್‍ಐ…

ಸಂವಿಧಾನ ಪ್ರತಿ ದಹನ ಖಂಡಿಸಿ ಬೃಹತ್ ಪ್ರತಿಭಟನೆ
ಚಾಮರಾಜನಗರ

ಸಂವಿಧಾನ ಪ್ರತಿ ದಹನ ಖಂಡಿಸಿ ಬೃಹತ್ ಪ್ರತಿಭಟನೆ

August 26, 2018

ಸಂವಿಧಾನ ಸಂರಕ್ಷಣಾ ವೇದಿಕೆಯಡಿ ದಲಿತ ಸಂಘಟನೆಗಳ ಆಕ್ರೋಶ ಚಾಮರಾಜನಗರ: ದೆಹಲಿಯ ಜಂತರ್-ಮಂತರ್‍ನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿರುವುದನ್ನು ಖಂಡಿಸಿ ನಗರದಲ್ಲಿ ಶನಿವಾರ ಸಂವಿಧಾನ ಸಂರಕ್ಷಣಾ ವೇದಿಕೆಯಡಿ ವಿವಿಧ ದಲಿತಪರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಸಂವಿಧಾನ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾವೇಶಗೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ‘ಸಂವಿಧಾನ ದೇಶದ ಜೀವಾಳ’…

ವೈದ್ಯರಿಲ್ಲದೆ ನಿತ್ಯ ರೋಗಿಗಳ ಪರದಾಟ
ಚಾಮರಾಜನಗರ

ವೈದ್ಯರಿಲ್ಲದೆ ನಿತ್ಯ ರೋಗಿಗಳ ಪರದಾಟ

August 26, 2018

ಬೇಗೂರು: – ಸಮೀಪದ ಹಸಗೂಲಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆ ರೂಪ ಅವರ ವರ್ಗಾವಣೆಯಾಗಿ ಒಂದು ವಾರ ಕಳೆದರೂ ಬೇರೊಬ್ಬ ವೈದ್ಯರನ್ನು ನಿಯೋಜನೆ ಮಾಡದ ಪರಿಣಾಮ ರೋಗಿಗಳು ವೈದ್ಯರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಸಗೂಲಿಯು ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಭಾಗದಲ್ಲಿ ಇರುವುದರಿಂದ ಮಂಚಹಳ್ಳಿ, ಶೆಟ್ಟಹಳ್ಳಿ, ಪಾಳ್ಯ, ಆಲತ್ತೂರು, ಬೆಟ್ಟದಮಾದಳ್ಳಿ, ಗರಗನಹಳ್ಳಿ, ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಆದರೆ, ವಾರದಿಂದ ವೈದ್ಯರಿಲ್ಲದೆ ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿವೆ. ಆದರೆ, ವೈದ್ಯರನ್ನು ನಿಯೋಜನೆ ಮಾಡದ ಕಾರಣ ರೋಗಿಗಳಿಗೆ ಸಮಸ್ಯೆಯಾಗಿದ್ದು…

ಬಿಳಿಗಿರಿ ರಂಗಪ್ಪನಿಗೆ ಶ್ರಾವಣ ಮಾಸದ ವಿಶೇಷ ಪೂಜೆ
ಚಾಮರಾಜನಗರ

ಬಿಳಿಗಿರಿ ರಂಗಪ್ಪನಿಗೆ ಶ್ರಾವಣ ಮಾಸದ ವಿಶೇಷ ಪೂಜೆ

August 26, 2018

ಯಳಂದೂರು: ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಬಿಳಿಗಿರಿ ರಂಗನಬೆಟ್ಟದ ದೇವಸ್ಥಾನಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ರಾಜ್ಯದ ವಿವಿಧ ಜಿಲ್ಲೆಯಿಂದ ಸಾವಿರಾರು ಭಕ್ತರು ಭೇಟಿ ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಬೆಳಿಗ್ಗೆಯಿಂದಲೇ ಬೆಟ್ಟಕ್ಕೆ ಭಕ್ತರು ಬಸ್, ಕಾರು, ಬೈಕ್‍ಗಳಲ್ಲಿ ತಂಡೋಪ ತಂಡವಾಗಿ ಬಂದು ವಿವಿಧ ಸೇವಾ ಕಾರ್ಯಗಳನ್ನು ಸಲ್ಲಿಸಿದರು. ಸದ್ಯ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ನವೀಕರಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬಿಳಿಗಿರಿ ರಂಗನಾಥ ಸ್ವಾಮಿ, ಅಲುಮೇಲು ರಂಗನಾಯಕಿ ಅವರ ಜೀವಕಳೆ ತುಂಬಿರುವ ಮೂರ್ತಿಗಳನ್ನು…

ನಗರಸಭೆ ಚುನಾವಣೆ: ವೀಕ್ಷಕರ ನೇಮಕ
ಚಾಮರಾಜನಗರ

ನಗರಸಭೆ ಚುನಾವಣೆ: ವೀಕ್ಷಕರ ನೇಮಕ

August 26, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೀಕ್ಷಕರು ನೇಮಕವಾಗಿದ್ದು, ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ. ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಅನಿತಾಲಕ್ಷ್ಮಿ (ಮೊ. 94491 16870), ಮುಖ್ಯ ಆಡಳಿತಧಿಕಾರಿಗಳು, ವಿ.ಜೆ.ಎನ್.ಎಲ್. ಬೆಂಗಳೂರು ಇವರು ನೇಮಕವಾಗಿದ್ದಾರೆ. ಇವರ ಸಂಪರ್ಕ ಅಧಿಕಾರಿಯಾಗಿ ಸರ್ವ ಶಿಕ್ಷಣ ಅಭಿಯಾನದ ಡಿವೈಪಿಸಿ ಸಿ.ಎನ್.ರಾಜು (ಮೊ. 94815 45929) ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ವೆಚ್ಚ ವೀಕ್ಷಕರಾಗಿ ಅರ್ಥಿಕ ಇಲಾಖೆ(ವಿತ್ತೀಯ ಸುಧಾರಣೆ)ಯ ಉಪನಿಯಂತ್ರಕರು (ಆರ್ಥಿಕ ನಿರ್ವಹಣೆ) ಬೆಂಗಳೂರು (ಮೊ. 90352…

1 88 89 90 91 92 141
Translate »