ನಗರಸಭೆ ಚುನಾವಣೆ: ವೀಕ್ಷಕರ ನೇಮಕ
ಚಾಮರಾಜನಗರ

ನಗರಸಭೆ ಚುನಾವಣೆ: ವೀಕ್ಷಕರ ನೇಮಕ

August 26, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೀಕ್ಷಕರು ನೇಮಕವಾಗಿದ್ದು, ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ.

ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಅನಿತಾಲಕ್ಷ್ಮಿ (ಮೊ. 94491 16870), ಮುಖ್ಯ ಆಡಳಿತಧಿಕಾರಿಗಳು, ವಿ.ಜೆ.ಎನ್.ಎಲ್. ಬೆಂಗಳೂರು ಇವರು ನೇಮಕವಾಗಿದ್ದಾರೆ. ಇವರ ಸಂಪರ್ಕ ಅಧಿಕಾರಿಯಾಗಿ ಸರ್ವ ಶಿಕ್ಷಣ ಅಭಿಯಾನದ ಡಿವೈಪಿಸಿ ಸಿ.ಎನ್.ರಾಜು (ಮೊ. 94815 45929) ಕಾರ್ಯ ನಿರ್ವಹಿಸುತ್ತಿದ್ದಾರೆ.

ಚುನಾವಣಾ ವೆಚ್ಚ ವೀಕ್ಷಕರಾಗಿ ಅರ್ಥಿಕ ಇಲಾಖೆ(ವಿತ್ತೀಯ ಸುಧಾರಣೆ)ಯ ಉಪನಿಯಂತ್ರಕರು (ಆರ್ಥಿಕ ನಿರ್ವಹಣೆ) ಬೆಂಗಳೂರು (ಮೊ. 90352 36236) ಇವರು ನೇಮಕವಾಗಿದ್ದಾರೆ. ಇವರ ಸಂಪರ್ಕ ಅಧಿಕಾರಿಯಾಗಿ ಚಾಮರಾಜನಗರ ತಾಲೂಕು ಪಂಚಾಯಿತಿಯ ಸಹಾಯಕ ಲೆಕ್ಕಾಧಿಕಾರಿ ದೇವನಾಯಕ (ಮೊ. 94818 17232) ಕಾರ್ಯನಿರ್ವಹಿಸುತ್ತಿದ್ದಾರೆ.
ಚುನಾವಣಾ ವೀಕ್ಷಕರನ್ನು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಚಿನ 48 ಗಂಟೆಯೊಳಗೆ ಬಹಿರಂಗ ಪ್ರಚಾರ ಅಂತ್ಯ
ಚಾಮರಾಜನಗರ:  ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಯೊಳಗೆ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಲ್ಲಾ ಅಭ್ಯರ್ಥಿಗಳು ಪಕ್ಷದ ಮುಖಂಡರಿಗೆ ಸೂಚನೆಗಳನ್ನು ನೀಡಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ಮದ್ಯ ಮಾರಾಟ ನಿಷೇಧ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಸಂಬಂಧ ಆ. 31ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಈ ಎರಡು ನಗರಸಭೆ ವ್ಯಾಪ್ತಿಯ ಗಡಿಯಿಂದ 3 ಕಿ.ಮೀ. ಪರಿಧಿಯಲ್ಲಿ ಆ. 30ರ ಬೆಳಿಗ್ಗೆ 7 ಗಂಟೆಯಿಂದ ಆ. 31ರ ಮಧ್ಯರಾತ್ರಿಯ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.

Translate »