ಪ್ರೀತಿ, ಸಾಯಿ, ಡಿಜಿಎಂ ಬಡಾವಣೆ  ನಿವಾಸಿಗಳಿಗೆ ಪಾಲಿಕೆ ಚುನಾವಣೆಯಲ್ಲಿ  ಮತದಾನದ ಹಕ್ಕು: ಹೈಕೋರ್ಟ್ ಆದೇಶ
ಮೈಸೂರು

ಪ್ರೀತಿ, ಸಾಯಿ, ಡಿಜಿಎಂ ಬಡಾವಣೆ  ನಿವಾಸಿಗಳಿಗೆ ಪಾಲಿಕೆ ಚುನಾವಣೆಯಲ್ಲಿ  ಮತದಾನದ ಹಕ್ಕು: ಹೈಕೋರ್ಟ್ ಆದೇಶ

August 26, 2018

ಮೈಸೂರು: ಶ್ರೀರಾಂಪುರ ವಾರ್ಡ್ 65ರ ವ್ಯಾಪ್ತಿಯ ಪ್ರೀತಿ, ಸಾಯಿ ಹಾಗೂ ಡಿಜಿಎಂ ಬಡಾವಣೆಗಳ ನಿವಾಸಿ ಗಳಿಗೆ ಮೈಸೂರು ಮಹಾ ನಗರಪಾಲಿಕೆ ಚುನಾ ವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡು ವಂತೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಭಾರತ ಆಹಾರ ನಿಗಮದ ಸದಸ್ಯ, ಪ್ರೀತಿ ಬಡಾವಣೆ ನಿವಾಸಿ ಹಾಗೂ ಕೋರ್ಟ್ ಮೊರೆ ಹೋದವರಲ್ಲಿ ಒಬ್ಬರಾದ ಜೆ.ಜಯಂತ್, ಇದು ಮುಡಾ ನಿಯಮಗಳಿಗೆ ಒಳಪಟ್ಟಿರುವ ಬಡಾವಣೆಗಳ ನಿವಾಸಿಗಳ ಹೋರಾಟಕ್ಕೆ ಸಂದ ಜಯ ಮಾತ್ರವಲ್ಲ, ಪ್ರಜಾಪ್ರಭುತ್ವದ ಗೆಲುವು ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರೀತಿ, ಸಾಯಿ ಹಾಗೂ ಡಿಜಿಎಂ ಬಡಾ ವಣೆ ನಿವಾಸಿಗಳು ಕಳೆದ ವಿಧಾನಸಭೆ ಚುನಾ ವಣೆಯಲ್ಲಿ ಕೆಆರ್ ಕ್ಷೇತ್ರದ ಮತದಾರರಾಗಿ ಮತ ಚಲಾಯಿಸಿದ್ದರು. ಆದರೆ ನಗರಾಭಿವೃದ್ಧಿ ಇಲಾಖೆಯು ಈ ಬಡಾವಣೆಗಳ ವ್ಯಾಪ್ತಿ ಯನ್ನು ಸರಿಯಾಗಿ ಗುರುತಿಸದೇ ಸದರಿ ಬಡಾವಣೆ ನಿವಾಸಿಗಳ ಮತದಾನದ ಹಕ್ಕನ್ನು ನಿರಾಕರಿಸಿ ಮೈಸೂರು ನಗರಪಾಲಿಕೆ ಚುನಾವಣೆ ವಿಭಾಗಕ್ಕೆ ಸೂಚನೆ ನೀಡಿತ್ತು.

ನಗರಾಭಿ ವೃದ್ಧಿ ಇಲಾಖೆಯ ಈ ಅವೈಜ್ಞಾನಿಕ ಸೂಚನೆಯನ್ನು ಪ್ರಶ್ನಿಸಿ ಪ್ರೀತಿ, ಸಾಯಿ ಹಾಗೂ ಡಿಜಿಎಂ ಬಡಾವಣೆ ನಿವಾಸಿಗಳು ಹೈ ಕೋರ್ಟ್ ಮೊರೆ ಹೋಗಬೇಕಾಗಿ ಬಂತು ಎಂದರು. ವಿಶೇಷವೆಂದರೆ ಸರ್ಕಾರಿ ಇಲಾಖೆಯಿಂದ ಆದ ಈ ಪ್ರಮಾದವನ್ನು ಹೈ ಕೋರ್ಟ್ ಏಕಸದಸ್ಯ ಪೀಠದ ಮುಂದೆ ಸರ್ಕಾರದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಅವರೇ ಒಪ್ಪಿಕೊಂಡರು. ಈ ತಪ್ಪನ್ನು ಸರಿಪಡಿಸಿ, ಸದರಿ ಬಡಾವಣೆ ನಿವಾಸಿಗಳಿಗೆ ಮತ ಚಲಾಯಿಸಲು ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ನ್ಯಾಯಾಲಯದಲ್ಲಿ ತಿಳಿಸಿದರು. ಅಡ್ವೊಕೇಟ್ ಜನರಲ್ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯವು ನಗರಾಭಿವೃದ್ಧಿ ಇಲಾಖೆಯು ಹೊರಡಿಸಿದ್ದ ಅಧಿಸೂಚನೆಯನ್ನು ವಜಾ ಮಾಡುವಂತೆ ಆದೇಶಿಸಿ ತೀರ್ಪು ನೀಡಿದೆ. ಈ ತೀರ್ಪಿನಿಂದ ಬಡಾವಣೆಯ ಸುಮಾರು 350ರಿಂದ 400 ಮಂದಿ, ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆಯುವಂತಾಗಿದೆ ಎಂದರು. ಬಡಾವಣೆ ನಿವಾಸಿಗಳಾದ ಸುರೇಶ್, ರಾಜಪ್ಪ, ರಾಜೇಶ್, ವಕೀಲ ವೆಂಕಟೇಶ್ ಗೋಷ್ಠಿಯಲ್ಲಿದ್ದರು.

ತೆರಿಗೆ ಕಟ್ಟದ ಚಳವಳಿ ಆರಂಭಿಸುತ್ತೇನೆ
ನಮ್ಮ ಈ ಬಡಾವಣೆಗಳಲ್ಲಿ ಮೂಲ ಭೂತ ಸೌಲಭ್ಯಗಳ ಕೊರತೆ ಇದ್ದು, ನಾವು ತೆರಿಗೆ ಕಟ್ಟುವ ಮುಡಾ ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ ನಿರ್ವಹಣೆ ಜವಾಬ್ದಾರಿ ನಮ್ಮದಲ್ಲ ಎಂದು ನಗರ ಪಾಲಿಕೆಯತ್ತ ಬೊಟ್ಟು ಮಾಡುತ್ತಾರೆ. ಇತ್ತ ಪಾಲಿಕೆಯ ವರು ಈ ಬಡಾವಣೆ ನಮ್ಮ ವಶಕ್ಕೆ ಬಂದಿಲ್ಲ ಎಂದು ಕೈಚೆಲ್ಲುತ್ತಾರೆ. ಇಂತಹ ಸಮ ಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಡಾ ಹಾಗೂ ಪಾಲಿಕೆ ಜಂಟಿ ಸಭೆ ನಡೆಸಬೇಕು. ಇಲ್ಲವಾದರೆ ಪಾಲಿಕೆ ನಿರ್ವಹಣೆ ಮಾಡದೇ ಕೈಚೆಲ್ಲಿರುವ ಮುಡಾ ಬಡಾವಣೆ ನಿವಾಸಿಗಳು ಯಾವುದೇ ತೆರಿಗೆ ಪಾವತಿ ಮಾಡದೇ ಇರುವ ಚಳವಳಿ ಆರಂ ಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Translate »