ಲಾರಿ ಟೈರ್ ಸಿಡಿದು ಮಹಿಳೆ ಸಾವು
ಚಾಮರಾಜನಗರ

ಲಾರಿ ಟೈರ್ ಸಿಡಿದು ಮಹಿಳೆ ಸಾವು

August 26, 2018

ಗುಂಡ್ಲುಪೇಟೆ: ವೇಗವಾಗಿ ಚಲಿಸುತ್ತಿದ್ದ ಲಾರಿಯ ಹಿಂಬದಿಯ ಟೈರ್ ಸಿಡಿದ ಪರಿಣಾಮ ಲಾರಿ ಸಮೀಪ ಬೈಕಿನಲ್ಲಿ ಹಿಂಬದಿ ಕುಳಿತು ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ನಿವಾಸಿ ಮಂಜುಳಾ(35) ಸಾವನ್ನಪ್ಪಿದವರು.

ಘಟನೆಯ ವಿವರ: ಪಟ್ಟಣದ ನಿವಾಸಿಗಳಾದ ರೇಷ್ಮಾ ಮತ್ತು ಮಂಜುಳಾ ಅವರು ಬೈಕ್‍ನಲ್ಲಿ ಪಟ್ಟಣಕ್ಕೆ ಬರುತ್ತಿದ್ದ ವೇಳೆ, ಅವರ ಮುಂದೆ ಹೋಗುತ್ತಿದ್ದ ಸರಕು ಸಾಗಣೆ ಲಾರಿಯ ಟೈರ್ ಸಿಡಿದಿದೆ. ಇದರ ಪರಿಣಾಮ ಟೈರ್‍ನ ಚೂರು ಬೈಕ್‍ನ ಹಿಂಬದಿಯಲ್ಲಿ ಕುಳಿತಿದ್ದ ಮಂಜುಳ ಅವರಿಗೆ ತಗಲಿದೆ. ಇದರಿಂದ ಅವರು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಬೈಕ್ ಚಾಲನೆ ಮಾಡುತ್ತಿದ್ದ ರೇಷ್ಮಾ ಅವರಿಗೆ ಗಾಯವಾಗಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯು ಊಟಿಯಿಂದ ಗುಂಡ್ಲುಪೇಟೆಗೆ ಬರುತ್ತಿದ್ದಾಗ ಪಟ್ಟಣದ ಹೊರವಲಯದಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »