ಕುಡಿದ ಮತ್ತಿನಲ್ಲಿ ಮೇರಿ ಮೂರ್ತಿ ಭಗ್ನ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಹಾಸನ

ಕುಡಿದ ಮತ್ತಿನಲ್ಲಿ ಮೇರಿ ಮೂರ್ತಿ ಭಗ್ನ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

August 26, 2018

ಬೇಲೂರು: ಕುಡಿದ ಮತ್ತಿನಲ್ಲಿ ತಾಲೂಕಿನ ಮತ್ತಿಹಳ್ಳಿ ಚರ್ಚ್ ಆವರಣ ದಲ್ಲಿದ್ದ ಮೇರಿ ಮೂರ್ತಿಯನ್ನು ಭಗ್ನಗೊಳಿ ಸಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಅರೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಲೂರು ತಾಲೂಕಿನ ಸುಳಗೋಡು ಗ್ರಾಮದ ವಿಷ್ಣು, ಬೇಲೂರು ತಾಲೂಕಿನ ಕರ್ಕಿಹಳ್ಳಿ ಕೌಶಿಕ್, ಮತ್ತಿಹಳ್ಳಿ ಪ್ರಸನ್ನ, ಪಾಂಡವಪುರ ತಾಲೂಕಿನ ಶಂಭುಕನ ಹಳ್ಳಿ ಕುಮಾರಸ್ವಾಮಿ ಬಂಧಿತರು. ಇವರು ಆ.14ರ ಮಧ್ಯರಾತ್ರಿ ತಾಲೂಕಿನ ಅರೇಹಳ್ಳಿ ಠಾಣೆ ವ್ಯಾಪ್ತಿಯ ಮತ್ತಿಹಳ್ಳಿ ಗ್ರಾಮದ ಸಂತ ಮಿಕಾಯಿಲ್ ಚರ್ಚ್‍ನಲ್ಲಿದ್ದ ಮೇರಿ ಮೂರ್ತಿಯನ್ನು ಕುಡಿದ ಮತ್ತಿನಲ್ಲಿ ಭಗ್ನ ಗೊಳಿಸಿ ನಾಪತ್ತೆಯಾಗಿದ್ದರು. ಪ್ರಕರಣವು ಸೂಕ್ಷ್ಮವಾಗಿದ್ದರಿಂದ ಆರೋಪಿಗಳ ಪತ್ತೆ ಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪುರವಾಡ್, ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್ ಅವರು, ವೃತ್ತ ನಿರೀಕ್ಷಕ ಲೋಕೇಶ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಅರೇಹಳ್ಳಿ ಎಸ್‍ಐ ಸುಬ್ಬಯ್ಯ, ಸಿಬ್ಬಂದಿ ರವೀಶ್, ನಂದೀಶ್, ತಾಂಡವೇಶ್ವರ್, ಜಮ್ರುದ್ದೀನ್, ಮನು ಕುಮಾರ್, ಶಿವಶಂಕರ್ ಒಳಗೊಂಡ ತಂಡ ಕಾರ್ಯಚರಣೆ ನಡೆಸಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ಪತ್ತೆ ಮಾಡಿದ ಈ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪುರ ವಾಡ್, ಡಿವೈಎಸ್‍ಪಿ ಸದಾ ನಂದ ತಿಪ್ಪಣ್ಣನವರ್ ಶ್ಲಾಘಿಸಿದ್ದಾರೆ.

Translate »