ಹಾಸನ: ನಗರ ಸೇರಿದಂತೆ ಜಿಲ್ಲೆಯೆಲ್ಲೆಡೆ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನ ಸಂಕೇತವಾದ ಬಕ್ರೀದ್ ಅನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಹಾಸನ ನಗರ: ನಗರದಲ್ಲಿ ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯದ ಮೂಲಕ ಮುಸ್ಲಿಂ ಬಾಂಧವರು ಸಡಗರ ದಿಂದ ಬಕ್ರೀದ್ ಆಚರಿಸಿದರು. ಹಬ್ಬದ ಅಂಗವಾಗಿ ನಗರದ ಹೊಸಲೈನ್ ರಸ್ತೆ ಬಳಿ ಇರುವ ಈದ್ಗಾ ಮೈದಾನಕ್ಕೆ ಬಿಳಿವಸ್ತ್ರ ಧರಿಸಿ ಬೆಳಿಗ್ಗೆಯೇ ಆಗಮಿಸಿದ ಮುಸ್ಲಿಂ ಬಾಂಧವರು ಹಿರಿಯರು-ಕಿರಿಯರೆನ್ನದೆ, ಸಾಮೂಹಿಕವಾಗಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು….
ಕಮಲದ ಹೂವು ಕೀಳಲು ಹೋದ ವ್ಯಕ್ತಿ ಸಾವು
August 23, 2018ಗುಂಡ್ಲುಪೇಟೆ,: ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಕಮಲದ ಹೂವುಗಳನ್ನು ಕೀಳಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಮದ್ದೂರು ಕಾಲೋನಿ ಬಳಿ ಇರುವ ಕೆರೆಯಲ್ಲಿ ಬುಧವಾರ ನಡೆದಿದೆ. ತಾಲೂಕಿನ ಹಸಗೂಲಿ ಗ್ರಾಮದ ನಾಗಶೆಟ್ಟಿ (36) ಎಂಬಾತನೇ ಸಾವಿಗೀ ಡಾದ ವ್ಯಕ್ತಿ. ಈತ ತಮ್ಮ ಮನೆಯಲ್ಲಿ ವರಮಹಾಲಕ್ಮ್ಷಿ ಪೂಜೆಯ ನಿಮಿತ್ತ ವಾಗಿ ಮದ್ದೂರು ಕಾಲೋನಿ ಬಳಿ ಇರುವ ಕೆರೆಯಲ್ಲಿ ಅರಳಿದ್ದ ಕಮಲದ ಹೂವು ಗಳನ್ನು ಕೀಳಲು ಹೋಗಿದ್ದಾಗ ಕೆಸರಿ ನಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ…
ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ರೈತರ ಪ್ರತಿಭಟನೆ
August 22, 2018ಚಾಮರಾಜನಗರ: ಮನೆಯ ವಿದ್ಯುತ್ ಬಿಲ್ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಖಂಡಿಸಿ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಅಮ್ಮನಪುರ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಗ್ರಾಮದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಗ್ರಾಮದ ಬಸ್ ನಿಲ್ದಾಣದ ಬಳಿ ಬೆಳಿಗ್ಗೆಯೇ ಜಮಾಯಿಸಿದ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಸೆಸ್ಕ್ ವಿರುದ್ಧ ಘೊಷಣೆಗಳನ್ನು ಕೂಗುತ್ತ ಪ್ರತಿಭಟನೆ ಆರಂಭಿಸಿದರು. ರಸ್ತೆ ಮಧ್ಯೆದಲ್ಲಿಯೇ ಮಧ್ಯಾಹ್ನ ಅಡುಗೆ ತಯಾರಿಸಿ ಸೇವಿಸಿದರು. ನಂತರ ಸಂಜೆ ತನಕ ಪ್ರತಿಭಟನೆ ನಡೆಸಿದರು….
ಕಬಡ್ಡಿಯಲ್ಲಿ ಅಮಚವಾಡಿ ಶಾಲೆ ಪ್ರಥಮ
August 22, 2018ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಕಳೆದ 21 ವರ್ಷಗಳಿಂದ ಸತತವಾಗಿ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುತ್ತಿರು ವುದು ವಿಶೇಷ. ಈ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ವಿದ್ಯಾರ್ಥಿಗಳು ಕೀರ್ತಿ ತಂದಿದ್ದಾರೆ. ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದ ಸ್ಪರ್ಧಾಳುಗಳನ್ನು ಶಾಲೆಯ ಮುಖ್ಯ ಶಿಕ್ಷಕರು ಆದ ದೈಹಿಕ ಶಿಕ್ಷಕ ಡಿ.ಲೋಕೇಶ್ ಕಾಲೇಜಿನ ಪ್ರಾಂಶುಪಾಲರಾದ…
ಮಳೆ ಸಂತ್ರಸ್ತ ಕೊಡಗು ಜನರ ನೆರವಿಗೆ ಲಕ್ಷ ರೂ. ನೀಡಿದ ಪುಟ್ಟಮಾದಪ್ಪ
August 22, 2018ಚಾಮರಾಜನಗರ: ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜನರ ನೆರವಿಗೆ ಜಿಲ್ಲೆಯ ಜನರ ಹೃದಯ ಮಿಡಿದಿದ್ದು, ಚಾಮರಾಜ ನಗರದ ಪಟೇಲ್ ಬಜಾಜ್ ಷೋ ರೂಂ ಮಾಲೀಕ ಎಚ್.ಎಂ.ಪುಟ್ಟಮಾದಪ್ಪ ಹಾಗೂ ಅವರ ಮಗ ಹರ್ಷ ಪಟೇಲ್ ಗ್ರಾನೈಟ್ ಮಾಲೀಕ ಪಿ.ವೃಷಬೇಂದ್ರಪ್ಪ ಅವರು ನಗರದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮುಖಾಂತರ ಕೊಡಗು ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಇಂದು ಒಂದು ಲಕ್ಷ ರೂ. ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಇಂದು ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರನ್ನು ಭೇಟಿ…
ಕೇರಳ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೆರವು
August 22, 2018ಚಾಮರಾಜನಗರ: ಕೇರಳ ರಾಜ್ಯದಲ್ಲಿ ವರುಣನ ಅಬ್ಬರಕ್ಕೆ ಅನೇಕ ಜಿಲ್ಲೆಗಳು ಜಲಾವೃತವಾಗಿ ಲಕ್ಷಾಂತರ ಜನ ತೊಂದರೆಗೀಡಾಗಿ ಸಾವುನೋವುಗಳಿಂದ ತತ್ತರಿಸಿ ಹೋಗಿದೆ. ಇದರಿಂದ ಇದಕ್ಕೆ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಸಚಿವ ಸಿ.ಪುಟ್ಟರಂಗಶೆಟ್ಟಿ ಕೇರಳದ ರಾಜ್ಯದ ವೈನಾಡು ಜಿಲ್ಲೆಯ ಸಂತ್ರಸ್ತರಿಗೆ ಅಕ್ಕಿ, ಸಕ್ಕರೆ, ಹೆಸಿರುಕಾಳು, ಸೇರಿದಂತೆ ಇತರ ಸಾಮಾಗ್ರಿಗಳನ್ನು 2 ಲಾರಿಗಳಲ್ಲಿ ಕೇರಳದ ಗಂಜಿ ಕೇಂದ್ರಗಳಿಗೆ ತಲುಪಿಸಲಾಯಿತು. ಈ ಸಂದರ್ಭದಲ್ಲಿ ವೈನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿಯ ಶಾಸಕ ಐ.ಸಿ.ಬಾಲ ಕೃಷ್ಣನ್ ಅವರ ಮೂಲಕ ಚಾಮರಾಜ ನಗರದ ಕಾಂಗ್ರೆಸ್ ಮುಖಂಡ ಹಾಗೂ…
ಗೂಳೀಪುರ ಪಿಎಸಿಸಿ ಅಧ್ಯಕ್ಷರ ಅವಿರೋಧ ಆಯ್ಕೆ
August 22, 2018ಚಾಮರಾಜನಗರ: ತಾಲೂಕಿನ ಗೂಳೀಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೊಮ್ಮ ಗ್ರಾಮದ ಜಿ.ಎಂ.ರವಿಶಂಕರಮೂರ್ತಿ ಅವಿರೋಧವಾಗಿ ಆಯ್ಕೆಗೊಂಡರು. ಕೃಷಿ ಪತಿನ ಸಹಕಾರ ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೋಟಂಬಳ್ಳಿ ಗ್ರಾಮದ ಎಂ.ರಾಜು, ನಿರ್ದೇಶಕರುಗಳಾಗಿ ಜಿ.ಎನ್. ಬಸವಣ್ಣ, ಹೆಚ್.ನಾರಾಯಣಸ್ವಾಮಿ, ರಂಗಶೆಟ್ಟಿ, ಎಂ.ನಾಗೇಂದ್ರ ಸ್ವಾಮಿ, ಮಹದೇವಯ್ಯ, ಪಿ.ಡೈರಿಶಿವಣ್ಣ, ಗುರುಸ್ವಾಮಿ, ಹೆಚ್.ಡಿ. ಚಂದ್ರೇಗೌಡ, ಮಹಿಳಾ ವಿಭಾಗದಿಂದ ಭಾಗ್ಯಮ್ಮ ಮತ್ತು ಗುರು ಮಲ್ಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು…
ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: ಬಂಡಾಯಗಾರರ ಮನವೊಲಿಕೆ, ಯುವಕರು- ಮಹಿಳಾ ಸಂಘಗಳಿಗೆ ಹೆಚ್ಚಿದ ಬೇಡಿಕೆ
August 21, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇ ಗಾಲ ನಗರಸಭಾ ಸದಸ್ಯ ಸ್ಥಾನಗಳಿಗೆ ಇದೇ ತಿಂಗಳ 31ರಂದು ಮತದಾನ ನಡೆಯಲಿದೆ. ಈ ಎರಡೂ ನಗರಸಭೆ ಯ ಎಲ್ಲಾ 62 ಸದಸ್ಯ ಸ್ಥಾನಗಳಿಗೆ (ತಲಾ 31 ಸ್ಥಾನ) 263 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ. ಈ ಎಲ್ಲಾ ನಾಮ ಪತ್ರಗಳ ಪರಿಶೀಲನಾ ಕಾರ್ಯ ಸೋಮ ವಾರ ನಡೆಯಿತು. ಆ.23 ನಾಮಪತ್ರ ಹಿಂತೆ ಗೆದುಕೊಳ್ಳಲು ಕೊನೆಯ ದಿನವಾಗಿದೆ. ಮನವೊಲಿಕೆ: ಪ್ರಮುಖ ಪಕ್ಷಗಳಿಂದ ಟಿಕೆಟ್ ಬಯಸಿದ್ದ ಮುಖಂಡರು ಟಿಕೆಟ್ ಸಿಗದಿದ್ದಾಗ ಅಸಮಾಧಾನಗೊಂಡಿ ದ್ದಾರೆ….
ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಬಿಎಸ್ಪಿ ಪ್ರತಿಭಟನೆ
August 21, 2018ಗುಂಡ್ಲುಪೇಟೆ: ಪಟ್ಟಣದ 20ನೇ ವಾರ್ಡಿನಲ್ಲಿರುವ ಅಂಬೇ ಡ್ಕರ್ ಬಡಾವಣೆಯಲ್ಲಿ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಇತ್ತೀಚಿಗೆ ಬೀಳುತ್ತಿರುವ ಮಳೆಯಿಂದ ಬಡಾವಣೆಯ ರಸ್ತೆಗಳು ಕೆಸರು ಗದ್ದೆಯಂ ತಾಗಿದ್ದು, ವಾಹನ ಸಂಚಾರ ಮತ್ತು ಪಾದ ಚಾರಿಗಳಿಗೆ ಕಿರಿಕಿರಿಯುಂಟಾಗಿದೆ ಎಂದು ರಸ್ತೆ ಮಧ್ಯೆ ಕಳೆ ಗಿಡಗಳನ್ನು ನೆಡುವುದ ರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ರಸ್ತೆ ನಿರ್ಮಿಸಿಕೊಡುವಂತೆ ಒತ್ತಾಯಿ ಸಿರುವ ಮನವಿಯನ್ನು ಪುರಸಭೆಯ ಸಮನ್ವ ಯಾಧಿಕಾರಿ ಕೆ.ಮುರುಗೇಶ್ ಅವರಿಗೆ ಸಲ್ಲಿಸಿ ಶೀಘ್ರವಾಗಿ ರಸ್ತೆ ನಿರ್ಮಾಣಕ್ಕೆ ಕ್ರಮ…
ಆರ್.ಎಸ್.ದೊಡ್ಡಿಯಲ್ಲಿ ಕುಡಿಯುವ ನೀರಿಗೆ ಪರದಾಟ
August 21, 2018ಹನೂರು: ಪಟ್ಟಣದ ಆರ್‍ಎಸ್ ದೊಡ್ಡಿ ಆಶ್ರಯ ಬಡಾವಣೆಗೆ ಕಳೆದ ಒಂದು ವಾರದಿಂದ ಕುಡಿಯುವ ನೀರು ಇಲ್ಲದೆ ಪರದಾಡು ತ್ತಿದ್ದು, ಪಟ್ಟಣ ಪಂಚಾಯಿತಿ ಪರ್ಯಾ ಯ ವ್ಯವಸ್ಥೆಯಾಗಿ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಬೇಕೆಂದು ಆಗ್ರಹಿಸಿ ಹತ್ತಾರು ಮಹಿಳೆಯರು ಪಟ್ಟಣ ಪಂಚಾಯಿತಿ ಕಚೆÉೀರಿಗೆ ಪ್ರತಿಭಟನೆ ನಡೆಸಿದರು. ಹನೂರು ಪ.ಪಂ. ವ್ಯಾಪ್ತಿಯ ಆರ್.ಎಸ್. ದೊಡ್ಡಿ ಆಶ್ರಯ ಬಡಾವಣೆಯಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಿವಾಸಿಗಳು ತಿಳಿಸಿದ್ದರೂ ಸಹ ಐದಾರು…