ಮಳೆ ಸಂತ್ರಸ್ತ ಕೊಡಗು ಜನರ ನೆರವಿಗೆ ಲಕ್ಷ ರೂ. ನೀಡಿದ ಪುಟ್ಟಮಾದಪ್ಪ
ಚಾಮರಾಜನಗರ

ಮಳೆ ಸಂತ್ರಸ್ತ ಕೊಡಗು ಜನರ ನೆರವಿಗೆ ಲಕ್ಷ ರೂ. ನೀಡಿದ ಪುಟ್ಟಮಾದಪ್ಪ

August 22, 2018

ಚಾಮರಾಜನಗರ: ಮಳೆ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜನರ ನೆರವಿಗೆ ಜಿಲ್ಲೆಯ ಜನರ ಹೃದಯ ಮಿಡಿದಿದ್ದು, ಚಾಮರಾಜ ನಗರದ ಪಟೇಲ್ ಬಜಾಜ್ ಷೋ ರೂಂ ಮಾಲೀಕ ಎಚ್.ಎಂ.ಪುಟ್ಟಮಾದಪ್ಪ ಹಾಗೂ ಅವರ ಮಗ ಹರ್ಷ ಪಟೇಲ್ ಗ್ರಾನೈಟ್ ಮಾಲೀಕ ಪಿ.ವೃಷಬೇಂದ್ರಪ್ಪ ಅವರು ನಗರದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮುಖಾಂತರ ಕೊಡಗು ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಇಂದು ಒಂದು ಲಕ್ಷ ರೂ. ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇಂದು ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರನ್ನು ಭೇಟಿ ಮಾಡಿದ ಪುಟ್ಟಮಾದಪ್ಪ ಹಾಗೂ ವೃಷಬೇಂದ್ರಪ್ಪ ಅವರು ಭಾರಿ ಮಳೆಯಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಯ ಜನರ ನೆರವಿಗಾಗಿ ಒಂದು ಲಕ್ಷ ರೂ. ಧನ ಸಹಾಯದ ಚೆಕ್ಕನ್ನು ಜಿಲ್ಲಾಧಿ ಕಾರಿಗೆ ಹಸ್ತ್ತಾಂತರಿಸಿದರು.

ಚೆಕ್ಕನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಧಿಕಾರಿ ಬಿ.ಬಿ.ಕಾವೇರಿ ಅವರು. ನೆರೆಯಿಂದ ತೀವ್ರ ತೊಂದರೆಗೆ ಕೊಡಗು ಜನತೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭ ದಲ್ಲಿ ಅಲ್ಲಿನ ಜನರಿಗೆ ಸಹಾಯ ಹಸ್ತದ ಅಗತ್ಯವಿದೆ. ಇದನ್ನು ಮನಗಂಡು ಸ್ಪಂದಿಸಿ ಧನ ಸಹಾಯ ಮಾಡಿರುವ ಎಚ್.ಎಂ. ಪುಟ್ಟಮಾದಪ್ಪ ಹಾಗೂ ಅವರ ಮಗ ವೃಷ ಬೇಂದ್ರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು. ತೀವ್ರ ಸಂಕಷ್ಟದ ಬದುಕು ಅನುಭವಿಸು ತ್ತಿರುವ ಕೊಡಗಿನ ಜನರಿಗೆ ಧೈರ್ಯ ತುಂಬಬೇಕಿದೆ. ಮನೆ, ಆಸ್ತಿ ಪಾಸ್ತಿ ಕಳೆದು ಕೊಂಡು ಕಂಗಾಲಾಗಿರುವ ಜನತೆಗೆ ಉದಾರ ನೆರವು ಬೇಕಿದೆ. ಹೀಗಾಗಿ ಜಿಲ್ಲೆಯಿಂದಲೂ ಹೆಚ್ಚಿನ ಜನರು ಕೈಜೋ ಡಿಸಿ ಮಾನವೀಯತೆ ಮೆರೆಯಬೇಕಾಗಿದೆ ಎಂದು ಕಾವೇರಿ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಸಂತ್ರಸ್ತರಾಗಿರುವ ಕೊಡಗು ಜನರ ಪುರ್ನವಸತಿಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇದೆ. ನಿರಾಶ್ರಿತರಾಗಿ ರುವ ಕುಟುಂಬಗಳಿಗೆ ಪ್ರತಿ ನಿತ್ಯದ ವಸ್ತುಗಳ ಅಗತ್ಯವಿದೆ.

ಹೀಗಾಗಿ ನಗರದ ವಾಲ್ಮೀಕಿ ಭವನದಲ್ಲಿ ಸಾರ್ವಜನಿಕರಿಂದ ಅಗತ್ಯ ವಸ್ತುಗಳನ್ನು ಸ್ವೀಕರಿಸಿ ಕೊಡಗು ಜಿಲ್ಲೆಗೆ ಕಳುಹಿಸಿಕೊಡಲು ಜಿಲ್ಲಾಡಳಿತ ವತಿಯಿಂದ ಸಂಗ್ರಹಣಾ ಕೇಂದ್ರವನ್ನು ತೆರೆಯಲಾಗಿದೆ. ಧನ ಸಹಾಯ ಮಾಡು ವವರು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ನಿಧಿ ಖಾತೆಗೆ ಜಮೆ ಮಾಡ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಹೇಳಿದರು. ಎಪಿಎಂಸಿ ಮಾಜಿ ಅಧ್ಯಕ್ಷ ರವಿಕುಮಾರ್, ಕಸಾಪ ಮಾಜಿ ಜಿಲ್ಲಾದ್ಯಕ್ಷ ನಾಗಮಲ್ಲಪ್ಪ, ಮಾಸ್ಟರ್ ದೇವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

ಆರ್‍ಎಸ್‍ಎಸ್‍ನಿಂದ ನಿಧಿ ಸಂಗ್ರಹ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಚಾಮರಾಜನಗರ ಶಾಖೆಯ ರಾಷ್ಟ್ರೀಯ ಸ್ವಯಂಸೇವಕ ಸಂಘ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ನಿಧಿ ಸಂಗ್ರಹ ಮಾಡಿತು. ನಗರದ ಪ್ರಮುಖ ಅಂಗಡಿ ಬೀದಿಗಳಿಗೆ ಸ್ವಯಂಸೇವಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ತೆರಳಿ ನಿಧಿ ಸಂಗ್ರಹ ಮಾಡಿದರು. ಸಂಗ್ರಹ ವಾದ 41,219ರೂ.ಗಳನ್ನು ಮಡಿಕೇರಿಯ ಸೇವಾಭಾರತಿ ಘಟಕಕ್ಕೆ ಜಮಾ ಮಾಡ ಲಾಯಿತು ಎಂದು ಸಂಘ ತಿಳಿಸಿದೆ.

ಸಹಾಯ ಮಾಡಲು ಇಚ್ಚಿಸುವ ದಾನಿಗಳು ಸೇವಾ ಭಾರತಿ ಮಡಿಕೇರಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ Sಃ ಂ/ಅ ಓo-0203010000 10023 IಈSಅ ಅಔಆಇ Iಔಃಂ000 0203ಕ್ಕೆ ಜಮಾ ಮಾಡಬಹುದು ಎಂದು ಸಂಘದ ಜಿಲ್ಲಾ ಕಾರ್ಯಕರ್ತ ಮಹೇಶ್ ಮನವಿ ಮಾಡಿದ್ದಾರೆ.

Translate »