ಕೇರಳ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೆರವು
ಚಾಮರಾಜನಗರ

ಕೇರಳ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೆರವು

August 22, 2018

ಚಾಮರಾಜನಗರ: ಕೇರಳ ರಾಜ್ಯದಲ್ಲಿ ವರುಣನ ಅಬ್ಬರಕ್ಕೆ ಅನೇಕ ಜಿಲ್ಲೆಗಳು ಜಲಾವೃತವಾಗಿ ಲಕ್ಷಾಂತರ ಜನ ತೊಂದರೆಗೀಡಾಗಿ ಸಾವುನೋವುಗಳಿಂದ ತತ್ತರಿಸಿ ಹೋಗಿದೆ. ಇದರಿಂದ ಇದಕ್ಕೆ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಸಚಿವ ಸಿ.ಪುಟ್ಟರಂಗಶೆಟ್ಟಿ ಕೇರಳದ ರಾಜ್ಯದ ವೈನಾಡು ಜಿಲ್ಲೆಯ ಸಂತ್ರಸ್ತರಿಗೆ ಅಕ್ಕಿ, ಸಕ್ಕರೆ, ಹೆಸಿರುಕಾಳು, ಸೇರಿದಂತೆ ಇತರ ಸಾಮಾಗ್ರಿಗಳನ್ನು 2 ಲಾರಿಗಳಲ್ಲಿ ಕೇರಳದ ಗಂಜಿ ಕೇಂದ್ರಗಳಿಗೆ ತಲುಪಿಸಲಾಯಿತು.

ಈ ಸಂದರ್ಭದಲ್ಲಿ ವೈನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿಯ ಶಾಸಕ ಐ.ಸಿ.ಬಾಲ ಕೃಷ್ಣನ್ ಅವರ ಮೂಲಕ ಚಾಮರಾಜ ನಗರದ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಎಲ್.ಸುರೇಶ್ ತಲುಪಿ ಸಿದರು.

ಸಂತ್ರಸ್ತರಿಗೆ ಪರಿಹಾರ ಸ್ವೀಕರಿಸಿ ಮಾತ ನಾಡಿದ ಅವರು, ಭಾರತದೇಶದ ಎಲ್ಲಾ ಮೂಲೆಗಳಿಂದ ನಮ್ಮ ರಾಜ್ಯದ ಸಂಕಷ್ಟಕ್ಕೆ ಮನತುಂಬಿ ಸಹಕಾರ ನೀಡುತ್ತಿ ದ್ದು, ಅವ ರೆಲ್ಲರಿಗೂ ಕೃತಜ್ಞತೆಗಳು. 50 ವರ್ಷ ಗಳಿಂದ ಇಲ್ಲದ ಈ ಮಹಾ ಜಲ ಪ್ರಳಯ ದಿಂದ ರಾಜ್ಯ ತತ್ತರಿಸಿ ಹೋಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಗಡಿಜಿಲ್ಲೆ ಚಾಮರಾಜನಗರದ ಉಸ್ತುವಾರಿ ಸಚಿವರು ಹಾಗೂ ಸಹಾಯ ಹಸ್ತ ನೀಡಿರುವುದು ನಮ್ಮ ಭಾಗದ ಜನರ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇರಳದ ವೈನಾಡು ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಹೆಚ್.ಎಂ.ವಿಜಯನ್, ಸಲೀಮ್ ಕಲ್ಲೂರ್, ವಿನುತಾಮಸ್, ಪಿ.ಪಿ.ಆಲಿ, ವಿನಯನ್, ಮನೋಜ್ ಉಪಸ್ಥಿತರಿದ್ದರು.

Translate »