ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: ಬಂಡಾಯಗಾರರ ಮನವೊಲಿಕೆ, ಯುವಕರು- ಮಹಿಳಾ ಸಂಘಗಳಿಗೆ ಹೆಚ್ಚಿದ ಬೇಡಿಕೆ
ಚಾಮರಾಜನಗರ

ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: ಬಂಡಾಯಗಾರರ ಮನವೊಲಿಕೆ, ಯುವಕರು- ಮಹಿಳಾ ಸಂಘಗಳಿಗೆ ಹೆಚ್ಚಿದ ಬೇಡಿಕೆ

August 21, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇ ಗಾಲ ನಗರಸಭಾ ಸದಸ್ಯ ಸ್ಥಾನಗಳಿಗೆ ಇದೇ ತಿಂಗಳ 31ರಂದು ಮತದಾನ ನಡೆಯಲಿದೆ. ಈ ಎರಡೂ ನಗರಸಭೆ ಯ ಎಲ್ಲಾ 62 ಸದಸ್ಯ ಸ್ಥಾನಗಳಿಗೆ (ತಲಾ 31 ಸ್ಥಾನ) 263 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ. ಈ ಎಲ್ಲಾ ನಾಮ ಪತ್ರಗಳ ಪರಿಶೀಲನಾ ಕಾರ್ಯ ಸೋಮ ವಾರ ನಡೆಯಿತು. ಆ.23 ನಾಮಪತ್ರ ಹಿಂತೆ ಗೆದುಕೊಳ್ಳಲು ಕೊನೆಯ ದಿನವಾಗಿದೆ.

ಮನವೊಲಿಕೆ: ಪ್ರಮುಖ ಪಕ್ಷಗಳಿಂದ ಟಿಕೆಟ್ ಬಯಸಿದ್ದ ಮುಖಂಡರು ಟಿಕೆಟ್ ಸಿಗದಿದ್ದಾಗ ಅಸಮಾಧಾನಗೊಂಡಿ ದ್ದಾರೆ. ತಾವು ಸ್ಪರ್ಧಿಸಬೇಕು ಎಂದು ಬಯ ಸಿದ್ದ ವಾರ್ಡ್‍ನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ ಅಥವಾ ಬೇರೆ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಇದಕ್ಕೆ ಅನೇಕ ವಾರ್ಡ್‍ಗಳನ್ನು ಉದಾಹರಣೆ ನೀಡಬಹುದಾಗಿದೆ.

ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ಗೊಂಡಿರುವ ಕಾರ್ಯಕರ್ತರು ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದವರ ಮನ ವೊಲಿಸುವ ಕೆಲಸವನ್ನು ಆಯಾಯ ಪಕ್ಷದ ಮುಖಂಡರು ಮಾಡುತ್ತಿದ್ದಾರೆ. ನಾಮಪತ್ರ ವಾಪಸ್ ಪಡೆದು ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ, ಪಕ್ಷದಿಂದ ದೂರ ಉಳಿದರೆ ಏನೇನು ಅನಾನುಕೂಲಗಳು ಆಗುತ್ತದೆ ಎಂಬುದರ ಬಗ್ಗೆ ಮುಖಂಡರು ಬಂಡಾಯಗಾರರಿಗೆ ತಿಳಿಸುತ್ತಿದ್ದಾರೆ. ಮುಖಂಡರ ಮನವಿಗೆ ಕೆಲವು ಕಾರ್ಯ ಕರ್ತರು ಸಮ್ಮತಿ ಸೂಚಿಸಿದ್ದಾರೆ. ಮತ್ತೇ ಕೆಲವರು ಯಾವುದೇ ಕಾರಣಕ್ಕೂ ಸಲ್ಲಿಸಿ ರುವ ನಾಮಪತ್ರ ವಾಪಸ್ ಪಡೆಯು ವುದಿಲ್ಲ. ಕಣದಲ್ಲಿ ಉಳಿಯುವುದು ಶತಸಿದ್ಧ, ನಾನೇ ಗೆದ್ದು ನನ್ನ ಶಕ್ತಿ ಏನೆಂಬುದನ್ನು ತೋರ್ಪಡಿಸುತ್ತೇನೆ. ಇಲ್ಲವೇ ನಿಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿ ಸುತ್ತೇನೆಂದು ಹೇಳುವ ಮೂಲಕ ಮುಖಂಡರ ಮಾತಿಗೆ ಸೊಪ್ಪು ಹಾಕದ ಅನೇಕ ನಿದರ್ಶನಗಳು ಇವೆ.

ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದು ಮುಖಂಡರ ಮಾತಿಗೆ ಬೆಲೆ ನೀಡುತ್ತಾರೋ ಅಥವಾ ಕಣದಲ್ಲಿ ಉಳಿದು ಸೆಡ್ಡು ಹೊಡೆಯು ತ್ತಾರೋ ಎಂಬುದನ್ನು ತಿಳಿಯಲು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಗುರುವಾರ (ಆಗಸ್ಟ್ 23)ದವರೆಗೆ ಕಾಯಬೇಕು.

ಮುಂಚೂಣಿಯವರಿಗೆ ಡಿಮ್ಯಾಂಡ್: ಈಗಾಗಲೇ ನಾಮಪತ್ರ ಸಲ್ಲಿಸಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಾವು ಸ್ಪರ್ಧಿಸಿರುವ ವಾರ್ಡ್‍ನತ್ತ ಹೆಜ್ಜೆ ಹಾಕಿ ದ್ದಾರೆ. ವಾರ್ಡ್‍ನ ಮುಂಚೂಣಿಯಲ್ಲಿ ಇರುವ ರಾಜಕಾರಣಿಗಳು, ಮುಖಂಡರು, ಯುವಕರನ್ನು ಭೇಟಿ ಮಾಡುತ್ತಿರುವ ಅಭ್ಯರ್ಥಿಗಳು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಬೆಳಿಗ್ಗೆ, ಸಂಜೆ, ರಾತ್ರಿಯನ್ನದೇ ಭೇಟಿ ಮಾಡುತ್ತಿರುವ ಅಭ್ಯರ್ಥಿಗಳು ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಈಗ ನಗರದಲ್ಲಿ ವಾಸ ಇಲ್ಲದವ ರನ್ನು ಹುಡುಕಿ ಅವರಿಗೆ ಮೊಬೈಲ್ ಕರೆ ಮಾಡಿ ತಮಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿರುವ ಕಾರ್ಯವನ್ನು ಅಭ್ಯರ್ಥಿಗಳು ಮಾಡಲಾರಂಭಿಸಿದ್ದಾರೆ.

ಯುವಕರಿಗೆ, ಮಹಿಳಾ ಸಂಘಗಳಿಗೆ ಬೇಡಿಕೆ: ಆಯಾಯ ವಾರ್ಡ್‍ನಲ್ಲಿ ಇರುವ ಯುವಕ ಸಂಘಗಳಿಗೆ ಹಾಗೂ ಮಹಿಳಾ ಸಂಘಗಳಿಗೆ ಈಗ ಬೇಡಿಕೆ ಆರಂಭವಾಗಿದೆ. ಅಭ್ಯರ್ಥಿಗಳು ತಮ್ಮ ವಾರ್ಡ್‍ನ ವ್ಯಾಪ್ತಿಯಲ್ಲಿ ಇರುವ ಯುವಕ ಸಂಘಗಳು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿರುವ ದೃಶ್ಯ ಬಹುತೇಕ ವಾರ್ಡ್‍ಗಳಲ್ಲಿ ಕಂಡು ಬರುತ್ತಿದೆ.

ತಾವು ಹಾಗೂ ತಮ್ಮ ಸಂಘದ ಪದಾಧಿಕಾರಿಗಳು, ಸದಸ್ಯರು ನನ್ನನ್ನು ಬೆಂಬಲಿಸಿದರೆ ತಮಗೆ ಆಗುವ ಅನುಕೂಲಗಳ ಬಗ್ಗೆ ತಿಳಿಸುತ್ತಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಸಹ ಭೇಟಿ ಮಾಡಿ ತನ್ನನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿರುವುದರಿಂದ ಮತದಾರರು ಯಾರಿಗೆ ಒಲವು ತೋರುತ್ತಾರೇ ಎಂದು ಕಾದು ನೋಡಬೇಕಾಗಿದೆ.

Translate »