ಆರ್.ಎಸ್.ದೊಡ್ಡಿಯಲ್ಲಿ ಕುಡಿಯುವ ನೀರಿಗೆ ಪರದಾಟ
ಚಾಮರಾಜನಗರ

ಆರ್.ಎಸ್.ದೊಡ್ಡಿಯಲ್ಲಿ ಕುಡಿಯುವ ನೀರಿಗೆ ಪರದಾಟ

August 21, 2018

ಹನೂರು:  ಪಟ್ಟಣದ ಆರ್‍ಎಸ್ ದೊಡ್ಡಿ ಆಶ್ರಯ ಬಡಾವಣೆಗೆ ಕಳೆದ ಒಂದು ವಾರದಿಂದ ಕುಡಿಯುವ ನೀರು ಇಲ್ಲದೆ ಪರದಾಡು ತ್ತಿದ್ದು, ಪಟ್ಟಣ ಪಂಚಾಯಿತಿ ಪರ್ಯಾ ಯ ವ್ಯವಸ್ಥೆಯಾಗಿ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಬೇಕೆಂದು ಆಗ್ರಹಿಸಿ ಹತ್ತಾರು ಮಹಿಳೆಯರು ಪಟ್ಟಣ ಪಂಚಾಯಿತಿ ಕಚೆÉೀರಿಗೆ ಪ್ರತಿಭಟನೆ ನಡೆಸಿದರು.

ಹನೂರು ಪ.ಪಂ. ವ್ಯಾಪ್ತಿಯ ಆರ್.ಎಸ್. ದೊಡ್ಡಿ ಆಶ್ರಯ ಬಡಾವಣೆಯಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಿವಾಸಿಗಳು ತಿಳಿಸಿದ್ದರೂ ಸಹ ಐದಾರು ಬಡಾವಣೆಗಳಿಗೆ ಒಂದು ಟ್ಯಾಂಕರ್ ನೀರನ್ನು ಕಳುಹಿಸುತ್ತಿದ್ದು, ಇದು ಸಾಲುತ್ತಿಲ್ಲ. ಈ ಬಗ್ಗೆ ಪ.ಪಂ. ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಪ್ರತಿಭಟ ನಾಕಾರರು ಆಪಾದಿಸಿದರು.

ಭರವಸೆ: ಕಾವೇರಿ ನದಿಗೆ ಕೆಆರ್‍ಎಸ್ ಡ್ಯಾಂ ಮತ್ತು ಕಬಿನಿ ಜಲಾಶಯಗಳಿಂದ ಯಥೇಚ್ಛವಾಗಿ ನೀರನ್ನು ಹರಿಯ ಬಿಟ್ಟಿ ರುವುದರಿಂದ ಕೊಳ್ಳೇಗಾಲ ಸಮೀಪದ ಹರಳೆ ಗ್ರಾಮದಲ್ಲಿರುವ ನದಿ ತೀರದ ಪಂಪ್‍ಹೌಸ್‍ನಲ್ಲಿ ಜಾಕ್‍ವಾಲ್‍ಗಳು, ಮೋಟಾರುಗಳು, ವಿದ್ಯುತ್ ಟ್ರಾನ್ಸ್‍ಫಾರಂ ನೀರಿನಲ್ಲಿ ಮುಳುಗಡೆ ಆಗಿದೆ. ಆದುದ ರಿಂದ ಕಾವೇರಿ ನೀರಿನ ಸರಬರಾಜು ಸ್ಥಗಿತಗೊಂಡಿದೆ. ಅಲ್ಲಿಯವರೆಗೆ ಪಪಂ ವ್ಯಾಪ್ತಿಯಲ್ಲಿ ಸಮಸ್ಯೆ ಇರುವ ಕಡೆ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಲಾಗು ವುದು. ಪರ್ಯಾಯವಾಗಿ ರಾಮನಗುಡ್ಡೆ ಯಿಂದ ಬರುವ ಪೈಪ್‍ಲೈನ್‍ನಿಂದ ಬಡಾ ವಣೆಯಲ್ಲಿ ಎರಡು ಕಡೆ ನಿವಾಸಿಗಳಿಗೆ ನಲ್ಲಿಗಳ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲಾ ಗುವುದು ಎಂದು ಪಪಂ ಅಧಿಕಾರಿಗಳು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಇಂಜಿನಿಯರ್ ಶಿವಶಂಕರ ಆರಾಧ್ಯ, ಪಪಂನ ಸದಸ್ಯ ರಾಜೂಗೌಡ, ರೋಟರಿ ಅಧ್ಯಕ್ಷ ಗಿರೀಶ್ ಮತ್ತು ಯುವ ಮುಖಂಡ ರಾಜು, ಕಿರಣ್, ಆರ್.ಎಸ್ ದೊಡ್ಡಿ ಮಾದಪ್ಪ ಮತ್ತು ಮಹಿಳೆಯರು ಇದ್ದರು.

Translate »