ಹಾಸನ: ‘ಪರಿಸರ ಸ್ವಚ್ಛತೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ, ಎಲ್ಲರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಸಲಹೆ ನೀಡಿದರು. ನಗರದ ಆಕಾಶವಾಣಿ ಕೇಂದ್ರ ಹಿಂಭಾಗವಿರುವ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರು ವಾರ ಭಾರತ ಸೇವಾದಳ, ಹಸಿರು ಭೂಮಿ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್‍ನಿಂದ ಕ್ವಿಟ್ ಇಂಡಿಯಾ ಚಳವಳಿ ನೆನಪಿಗಾಗಿ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಗಿಡ ನೆಡುವ…
ಹಾಸನ ನಗರಸಭೆಯ 35 ವಾರ್ಡ್‍ನಲ್ಲೂ ಸ್ಪರ್ಧೆ:ಸಚಿವ ಹೆಚ್.ಡಿ.ರೇವಣ್ಣ
August 9, 2018ಹಾಸನ: ಆಗಸ್ಟ್ 29ರಂದು ನಡೆಯುವ ಹಾಸನ ನಗರಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗದಂತೆ 35 ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು. ನಗರದ ಎಂ.ಜಿ ರಸ್ತೆಯ ಶ್ರೀ ಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‍ನಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಜೆಡಿಎಸ್ ನಾಯಕರ ಅಭಿಪ್ರಾಯ ಪಡೆದು ನಗರಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಜಿಲ್ಲೆಯಲ್ಲಿ 2 ನಗರ ಸಭೆ ಸೇರಿದಂತೆ ಪುರಸಭೆಗಳಿಗೆ ಚುನಾವಣೆ ನಡೆಯಲಿದೆ….
ಕೊಳವೆ ಬಾವಿ ಕೊರೆಯಲು ಅನುಮತಿ ಕಡ್ಡಾಯ
August 9, 2018ಹಾಸನ: ಅಂತರ್ಜಲ ಪ್ರಮಾಣ ಕುಸಿದಿಸಿದಿರುವ ಜಿಲ್ಲೆಯ ಅರಸೀಕೆರೆಯು ಅಧಿಸೂಚಿತ ಅತೀ ಬಳಕೆ ಪ್ರದೇಶ ಆಗಿರುವುದರಿಂದ ಬಾವಿ/ಕೊಳವೆ ಬಾವಿಯನ್ನು ಕೊರೆದು ಅಂತರ್ಜಲವನ್ನು ತೆಗೆಯಲು ಮತ್ತು ಬಳಸಲು ನಿಯೋಜಿತ ಸಮಿತಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ 43 ಅಂತರ್ಜಲ ಅತೀ ಬಳಕೆ ತಾಲೂಕುಗಳನ್ನು ಅಧಿಸೂಚಿಸಿದ್ದು, ಅದರಲ್ಲಿ ಅರಸೀಕೆರೆ…
ಲ್ಯಾಬ್ ಖಾಸಗೀಕರಣ ಮಾಡದಂತೆ ಆಗ್ರಹ, ವಾಗ್ವಾದ
August 9, 2018ಹಾಸನ: ನಗರದ ಮಿಷನ್ ಆಸ್ಪತ್ರೆ ಯಲ್ಲಿರುವ ಲ್ಯಾಬ್‍ನ ಖಾಸಗೀಕರಣ ನಿರ್ಧಾರ ಖಂಡಿಸಿ ಆಸ್ಪತ್ರೆ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದರು. ಈ ವೇಳೆ ವಾಗ್ವಾದ ಏರ್ಪಟ್ಟಿತು. ನಗರದ ಮಿಷನ್ ಆಸ್ಪತ್ರೆ ಆಡಳಿತ ಮಂಡಳಿಯು ಅಲ್ಲಿರುವ ಲ್ಯಾಬ್ ಖಾಸಗೀಕರಣಗೊಳಿಸಲು ನಿರ್ಧರಿಸಿದ್ದು, ಈ ಹಿನ್ನೆಲೆ ಲ್ಯಾಬ್‍ನ ಇಬ್ಬರು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಹಿಸಿದೆ. ಇದರಿಂದ ಅಸಮಾಧಾನಗೊಂಡ ಆಸ್ಪತ್ರೆಯ ಇತರ ಸಿಬ್ಬಂದಿ ಆಡಳಿತ ಮಂಡಳಿ ಯವರ ವಿರುದ್ಧ ಇಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಸ್ಪತ್ರೆ ಆಡಳಿತಾಧಿಕಾರಿ ರೋಹನ್, ಮ್ಯಾನೇಜ್‍ಮೆಂಟ್‍ನ…
ಸರ್ಕಾರದ ಯೋಜನೆಗಳು ಅರ್ಹರಿಗೆ ದೊರಕಲಿ
August 9, 2018ರಾಮನಾಥಪುರ: ಸರ್ಕಾರದ ಜನಪರ ಯೋಜನೆಗಳು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ದೊರಕಲು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು. ಹೋಬಳಿಯ ಲಕ್ಕೂರು ಗ್ರಾಪಂ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳು ಸ್ಥಳೀಯ ಹಿರಿಯರ ವೃದ್ಧಾಪ್ಯವೇತನ ಮತ್ತು ಸಾರ್ವಜನಿಕರ ಕೆಲಸಗಳಿಗೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಜನರ ಸಮಸ್ಯೆಗಳಿಗೆ ಸ್ವಂದಿಸಬೇಕು…
ಎಡಕುಮರಿ ಬಳಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ
August 9, 2018ಹಾಸನ: ಹಾಸನ-ಮಂಗಳೂರು ನಡುವಿನ ಸಕಲೇಶಪುರದ ಎಡಕುಮರಿ ಬಳಿ ಗುಡ್ಡ ಕುಸಿದಿದ್ದು, ರೈಲು ಸಂಚಾರ ಸ್ಥಗಿತಗೊಂಡಿದೆ. ಮೂರು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಸಕ ಲೇಶಪುರದ ಎಡಕುಮರಿಯ ಮೂರನೇ ಮೈಲಿಯ ಬಳಿ ಗುಡ್ಡ ಕುಸಿದಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ವಿಷಯ ತಿಳಿದು ರೈಲ್ವೆ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ತುಂತುರು ಮಳೆಯಲ್ಲಿಯೇ ಗುಡ್ಡ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ರೈಲು ಸಂಚಾರ ಸ್ಥಗಿತದಿಂದ ಪ್ರಯಾಣಿಕರನ್ನು ರೈಲ್ವೆ ಇಲಾಖೆ ಹಾಸನದಿಂದ ರಸ್ತೆ ಮಾರ್ಗವಾಗಿ ಬಸ್‍ಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಿತು. 6ಕ್ಕೂ…
ಅತ್ಯಾಚಾರಿಗೆ ಕಠಿಣ ಕಾರಾಗೃಹ ಶಿಕ್ಷೆ
August 9, 2018ಹಾಸನ: ಮಹಿಳೆ ಅತ್ಯಾಚಾರ ಆರೋಪಿಗೆ 30 ಸಾವಿರ ರೂ. ಡಂಡ, 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದಾರೆ. ಗುಳ್ಳೇನಹಳ್ಳಿ ಗ್ರಾಮದ ನಿವಾಸಿ ಟ್ರಾಕ್ಟರ್ ಡ್ರೈವರ್ ಮುಜಾಯಿದ್ ಪಾಷಾ ಶಿಕ್ಷೆಗೆ ಗುರಿಯಾದವ. ಈತ ಗ್ರಾಮದ ಮನೆಯೊಂದಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ್ದ. ಅತ್ಯಾಚಾರಕ್ಕೊಳಗಾದ ಮಹಿಳೆ ನಗರದ ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಮೇರೆಗೆ…
ಬೇಲೂರು ಕ್ಷೇತ್ರದ ನೀರಿನ ಸಮಸ್ಯೆ ಅಂತ್ಯ
August 8, 2018ಬೇಲೂರು: ಎತ್ತಿನಹೊಳೆ, ಯಗಚಿ ಏತ ನೀರಾವರಿ, ರಣಘಟ್ಟ ಒಡ್ಡು ಯೋಜನೆಗಳ ಮೂಲಕ ತಾಲೂಕಿನಲ್ಲಿರುವ ನೀರಾವರಿ, ಕುಡಿಯುವ ನೀರಿನ ಸಮಸ್ಯೆಗೆ ಅಂತ್ಯ ಹಾಡಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಇಲ್ಲಿನ ಯಗಚಿ ಜಲಾಶಯ ವೀಕ್ಷಿಸಿದ ನಂತರ ಯಗಚಿ ವಸತಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಜಲಾಶಯದಲ್ಲಿ 2.6 ಟಿಎಂಸಿ ನೀರು ಸಂಗ್ರಹವಿದೆ. ಬೇಲೂರು, ಅರಸೀಕೆರೆ, ಚಿಕ್ಕಮಗಳೂರು ಪಟ್ಟಣಗಳಿಗೆ ಕುಡಿಯುವ ನೀರನ್ನು ಮೀಸಲಿಟ್ಟು, ಉಳಿದ ನೀರನ್ನು ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಕಾಲುವೆ ಮೂಲಕ ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಸದ್ಯ ನಾಲೆ…
ಅನಗತ್ಯ ಹೆರಿಗೆ ಶಸ್ತ್ರ ಚಿಕಿತ್ಸೆ ಕಡಿವಾಣಕ್ಕೆ ಸೂಚನೆ
August 8, 2018ಹಾಸನ: ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ಅನಗತ್ಯ ಹೆರಿಗೆ ಶಸ್ತ್ರಚಿಕಿತ್ಸೆಗಳು ಸಂಪೂರ್ಣ ನಿಯಂತ್ರಣಗೊಳ್ಳಬೇಕಿದ್ದು, ಕನಿಷ್ಠ ಶೇ.50ರಷ್ಟು ಶಿಶುಗಳು ಸಹಜ ಜನನವಾಗಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಆರೋಗ್ಯ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.45-50 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇ.67ರಷ್ಟು ಹೆರಿಗೆಗಳು ಶಸ್ತ್ರ ಚಿಕಿತ್ಸೆ ಮೂಲಕವೇ ಆಗುತ್ತಿವೆ. ಎಲ್ಲಾ ವೈದ್ಯರೂ ಆದಷ್ಟು ಸಹಜ ಹೆರಿಗೆಗೆ ಗಮನ ಹರಿಸಬೇಕು. ಈ ಬಗ್ಗೆ…
ಸರ್ಕಾರಿ ಸವಲತ್ತು ಜನತೆಗೆ ತಲುಪಲಿ
August 8, 2018ರಾಮನಾಥಪುರ: ಸರ್ಕಾರದ ಸವಲತ್ತು ಸುಲಭವಾಗಿ ಜನರಿಗೆ ತಲುಪು ವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿ ಗಳು ಕೆಲಸ ಮಾಡಬೇಕು ಎಂದು ಶಾಸಕ ಡಾ. ಎ.ಟಿ.ರಾಮಸ್ವಾಮಿ ಹೇಳಿದರು. ಹೋಬಳಿ ಗಂಗೂರು ಗ್ರಾಪಂ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಪೂರೈಕೆ, ವಿದ್ಯುತ್ ಸಮಸ್ಯೆ, ನಿವೇಶನ, ಶೌಚಾಲಯದ ವ್ಯವಸ್ಥೆ, ರಸ್ತೆ, ಚರಂಡಿ ವ್ಯವಸ್ಥೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅರ್ಜಿ ಗಳನ್ನು ಪರಿಶೀಲಿಸಿ, ಶೀಘ್ರವೇ ಕ್ರಮ ಕೈಗೊಳ್ಳ ಲಾಗುವುದು….