ಬೇಲೂರು ಕ್ಷೇತ್ರದ ನೀರಿನ ಸಮಸ್ಯೆ ಅಂತ್ಯ
ಹಾಸನ

ಬೇಲೂರು ಕ್ಷೇತ್ರದ ನೀರಿನ ಸಮಸ್ಯೆ ಅಂತ್ಯ

August 8, 2018

ಬೇಲೂರು: ಎತ್ತಿನಹೊಳೆ, ಯಗಚಿ ಏತ ನೀರಾವರಿ, ರಣಘಟ್ಟ ಒಡ್ಡು ಯೋಜನೆಗಳ ಮೂಲಕ ತಾಲೂಕಿನಲ್ಲಿರುವ ನೀರಾವರಿ, ಕುಡಿಯುವ ನೀರಿನ ಸಮಸ್ಯೆಗೆ ಅಂತ್ಯ ಹಾಡಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಇಲ್ಲಿನ ಯಗಚಿ ಜಲಾಶಯ ವೀಕ್ಷಿಸಿದ ನಂತರ ಯಗಚಿ ವಸತಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಜಲಾಶಯದಲ್ಲಿ 2.6 ಟಿಎಂಸಿ ನೀರು ಸಂಗ್ರಹವಿದೆ. ಬೇಲೂರು, ಅರಸೀಕೆರೆ, ಚಿಕ್ಕಮಗಳೂರು ಪಟ್ಟಣಗಳಿಗೆ ಕುಡಿಯುವ ನೀರನ್ನು ಮೀಸಲಿಟ್ಟು, ಉಳಿದ ನೀರನ್ನು ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಕಾಲುವೆ ಮೂಲಕ ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಸದ್ಯ ನಾಲೆ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ತಕ್ಷಣ ನೀರುಹರಿಸಲಾಗುವುದು. ಈ ಎರಡು ಹೋಬಳಿಗೆ ನೀರು ಕೊಡುವ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಣಘಟ್ಟ ಒಡ್ಡಿನಿಂದ ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಕಾಲುವೆ ಮೂಲಕ ನೀರು ಹರಿಸುವ 230 ಕೋಟಿ ರೂ. ಯೋಜನೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಈ ಯೋಜನೆಗೆ ಜಿಲ್ಲಾ ಉಸ್ತು ವಾರಿ ಸಚಿವ ಹೆಚ್.ಡಿ.ರೇವಣ್ಣ ಆಸಕ್ತಿ ತೋರಿದ್ದು, ಯೋಜನೆ ಕಾರ್ಯಗತ ವಾದರೆ ಹಳೇಬೀಡು ಮಾದಿಹಳ್ಳಿ ಹೋಬಳಿಯ ಹಲವು ಕೆರೆಕಟ್ಟೆಗಳಿಗೆ ನೀರು ಹರಿಯಲಿದ್ದು, ಅಂತರ್ಜಲ ವೃದ್ಧಿ ಯಾಗಲಿದೆ. ಕೃಷಿಕರ ಭೂಮಿಗೂ ಅನುಕೂಲ ಆಗಲಿದೆ. ಇದೊಂದು ಬೃಹತ್ ಮೊತ್ತದ ಯೋಜನೆಯಾಗಿದ್ದರೂ ಹಳೇ ಬೀಡು ಮಾದಿಹಳ್ಳಿ ಭಾಗದ ಜನರ, ರೈತರ ಹಿತದೃಷ್ಟಿಯಿಂದ ಅತ್ಯಗತ್ಯ ಎಂದರು.

ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿನ 22 ಕೆರೆಗಳಿಗೆ ನೀರು ಹರಿಸುವ ಬಗ್ಗೆ ಸರ್ವೇ ನಡೆಸಿ, ಡಿಪಿಆರ್ ಪಟ್ಟಿಗೆ ಸೇರಿಸ ಲಾಗಿದೆ. ಬಯಲು ಸೀಮೆ ವ್ಯಾಪ್ತಿಯ ಗ್ರಾಮ ಗಳಲ್ಲದೆ, ಮಲೆನಾಡು ಭಾಗದ ಗೆಂಡೇ ಹಳ್ಳಿ, ಬಿಕ್ಕೋಡು, ಅರೇಹಳ್ಳಿ ಭಾಗದ ಗ್ರಾಮ ಗಳಿಗೆ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲಾಗುವುದು ಎಂದು ತಿಳಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ತಾಪಂ ಅಧ್ಯಕ್ಷ ಹರೀಶ್, ಕಸಾಪ ಅಧ್ಯಕ್ಷ ಹೆಚ್.ಎಂ.ದಯಾನಂದ್ ಇತರರಿದ್ದರು.

Translate »