ಬಿಜೆಪಿ ಕಡೆ ತಿರುಗಿಯೂ ನೋಡಲ್ಲ, ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ
ಮೈಸೂರು

ಬಿಜೆಪಿ ಕಡೆ ತಿರುಗಿಯೂ ನೋಡಲ್ಲ, ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ

August 8, 2018

ನಂಜನಗೂಡು: ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾರೆಂಬ ಸುದ್ದಿ ಕೇವಲ ಉಹಾಪೋಹ. ಕಾಂಗ್ರೆಸ್ ತೊರೆಯುವುದಿಲ್ಲ. ಬಿಜೆಪಿ ಕಡೆ ಮುಖ ಸಹ ಹಾಕುವುದಿಲ್ಲ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ನಂಜನಗೂಡಿನ ಹೌಸಿಂಗ್ ಬೋರ್ಡ್‍ನಲ್ಲಿರುವ ತಮ್ಮ ನಿವಾಸಕ್ಕೆ ಮೊದಲ ಬಾರಿಗೆ ಇಂದು ಭೇಟಿ ನೀಡಿದ ವೇಳೆ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡುತ್ತ, ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ದಲ್ಲಿ ಸಾಕಷ್ಟು ಅಭಿವೃಧಿ ಕೆಲಸಗಳು ಆಗಿವೆ. ಅನೇಕ ಭಾಗ್ಯಗಳನ್ನು ನೀಡಿ, ರಸ್ತೆ, ನೀರಾವರಿ ಸೇರಿದಂತೆ ಇನ್ನಿತರ ಅಭಿವೃದ್ದಿಗೆ ಸಾವಿರಾರು ಕೋಟಿ ಹಣ ನೀಡಿ, ಎಲ್ಲಾ ವರ್ಗದವರಿಗೂ ಪಕ್ಷ ಭೇದ ಮರೆತು ಕೆಲಸಗಳನ್ನು ಮಾಡಿದರು. ಅದನ್ನು ಪರಿಗಣಿಸದೆ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದರು.

ಟಿ.ನರಸೀ ಪುರ ಕ್ಷೇತ್ರದಲ್ಲಿ ಇತಿಹಾಸದಲ್ಲೆ ನಡೆಯದ ಅಭಿವೃದ್ಧಿ ಕೆಲಸಗಳು ನಡೆದಿದ್ದರೂ, ಮತದಾರರು ನನ್ನನ್ನು ಸೋಲಿಸಿದರು. ಇದು ನನ್ನ ಮನಸ್ಸಿಗೆ ಅಘಾತವಾಗಿದೆ. ಅದರಿಂದ ಹೊರ ಬರಲು ಹಲವು ದಿನಗಳೇ ಬೇಕಾಯಿತು. ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ದೇವನೂರು ಶ್ರೀಗಳ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ನಂಜನಗೂಡಿಗೆ ಬಂದು ನಮ್ಮ ಆಪ್ತರ ಜೊತೆ ಚರ್ಚಿಸಿದ್ದೇನೆ.

ಕೆಲವು ಮೂಲದ ಪ್ರಕಾರ ಮುಂಬರುವ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದಲೇ ಸ್ಪರ್ಧಿಸಲು ಮಹದೇವಪ್ಪರಿಗೆ ಮುಖಂಡರಿಂದ ಒತ್ತಡ ಬರುತ್ತಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದೇವನೂರು ಮಹದೇವಪ್ಪ, ಧರ್ಮದರ್ಶಿ ಇಂಧನ್ ಬಾಬು, ಕೆಪಿಸಿಸಿ ಸದಸ್ಯರಾದ ಬಸವ ರಾಜು, ಅಕ್ಬರ್, ನಂದಕುಮಾರ್, ಹಿರಿಕಾಟಿ ದಿನೇಶ್, ಕೆ.ಬಿ ಸ್ವಾಮಿ, ಹೆಡ ತಲೆ ಮಂಜು ನಾಥ್, ಮಾಜಿ ಜಿಪಂ ಸದಸ್ಯ ಚೋಳರಾಜು ಸೇರಿದಂತೆ ಇತರರು ಇದ್ದರು.

Translate »