ಸರ್ಕಾರಿ ಸವಲತ್ತು ಜನತೆಗೆ ತಲುಪಲಿ
ಹಾಸನ

ಸರ್ಕಾರಿ ಸವಲತ್ತು ಜನತೆಗೆ ತಲುಪಲಿ

August 8, 2018

ರಾಮನಾಥಪುರ: ಸರ್ಕಾರದ ಸವಲತ್ತು ಸುಲಭವಾಗಿ ಜನರಿಗೆ ತಲುಪು ವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿ ಗಳು ಕೆಲಸ ಮಾಡಬೇಕು ಎಂದು ಶಾಸಕ ಡಾ. ಎ.ಟಿ.ರಾಮಸ್ವಾಮಿ ಹೇಳಿದರು.

ಹೋಬಳಿ ಗಂಗೂರು ಗ್ರಾಪಂ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಪೂರೈಕೆ, ವಿದ್ಯುತ್ ಸಮಸ್ಯೆ, ನಿವೇಶನ, ಶೌಚಾಲಯದ ವ್ಯವಸ್ಥೆ, ರಸ್ತೆ, ಚರಂಡಿ ವ್ಯವಸ್ಥೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅರ್ಜಿ ಗಳನ್ನು ಪರಿಶೀಲಿಸಿ, ಶೀಘ್ರವೇ ಕ್ರಮ ಕೈಗೊಳ್ಳ ಲಾಗುವುದು. ನೆರೆ ಪೀಡಿತ ಪ್ರದೇಶಗಳಲ್ಲಿ ಬೆಳೆ ನಾಶವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರದ ಅಂದಾಜು ಸಿದ್ಧಪಡಿ ಸುವಂತೆ ಕಂದಾಯ ಹಾಗೂ ಕೃಷಿ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಈಗಾಗಲೇ ತೋಟಗಾರಿಕಾ ಬೆಳೆ ಹಾನಿಯಾಗಿರುವ ಸಂತ್ರಸ್ಥರಿಗೆ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರದ ಸೌಲಭ್ಯ ಜನರ ಮನೆ ಬಾಗಿಲಿಗೆ ಒದಗಿ ಸಲು `ಸರ್ಕಾರದ ನಡೆ ಜನರ ಕಡೆಗೆ’ ಚಿಂತನೆ ಯಡಿ ಜನ ಸಂಪರ್ಕ ಸಭೆಯನ್ನು ಪ್ರತಿ ಗ್ರಾಪಂಗಳಲ್ಲಿ ನಡೆಸಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ರಾದ ಶಂಕರ್, ನಾಗಮ್ಮ, ತಹಶೀಲ್ದಾರ್ ಎಲ್.ನಂದಿಶ್, ಕಾರ್ಯನಿರ್ವ ಹಣಾಧಿಕಾರಿ ಡಾ.ಕೆ.ಎಲ್.ಯಶವಂತ್, ಲೋಕೋಪ ಯೋಗಿ ಇಲಾಖಾಧಿಕಾರಿ ರುದ್ರೇಶ್, ಡಾ.ಸ್ವಾಮಿ ಗೌಡ, ಸಿಡಿಪಿಓ ಭಾಗೀರಥಿ, ಕೊಣನೂರು ಠಾಣೆ ಎಸ್‍ಐ ಶಿವಣ್ಣ, ಕಟ್ಟೇಪುರ ವೆಂಕಟೇಶ್ ಮುಂತಾದವರಿದ್ದರು.

Translate »