ಮದ್ಯದಂಗಡಿಗೆ ತೆರೆಯಲು ಅನುಮತಿ ನೀಡದಂತೆ ಪ್ರತಿಭಟನೆ
ಹಾಸನ

ಮದ್ಯದಂಗಡಿಗೆ ತೆರೆಯಲು ಅನುಮತಿ ನೀಡದಂತೆ ಪ್ರತಿಭಟನೆ

August 8, 2018

ಹಾಸನ: ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಆಗ್ರಹಿಸಿ ಸಕಲೇಶಪುರದ ಸಿಪಿಸಿ ಹಾಗೂ ರಾಘವೇಂದ್ರ ಬಡಾವಣೆ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಸಕಲೇಶಪುರ ಪುರಸಭೆ ವ್ಯಾಪ್ತಿಯ ಸಿಪಿಸಿ ಮತ್ತು ರಾಘವೇಂದ್ರ ಬಡಾವಣೆಯ ಒಳಗೆ ವಿವಿಧ ಸಮುದಾಯದವರು ಶಾಂತಿಯಿಂದ ವಾಸಿಸುತ್ತಿದ್ದು, ಕೆಲ ಪ್ರಭಾವಿಗಳು ತಮ್ಮ ಪ್ರಭಾವದಿಂದ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ವಸತಿ ಪ್ರದೇಶ ಸಮೀಪವೇ ಮದ್ಯದಂಗಡಿ ತೆರೆದರೆ ಮದ್ಯವ್ಯಸನಿಗಳಿಂದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಅಳಲು ತೋಡಿಕೊಂಡರಲ್ಲದೆ, ಜನ ಸಾಮಾನ್ಯರ ಹಿತದೃಷ್ಟಿಯಿಂದ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಕಲೇಶಪುರದ ಸಿಪಿಸಿ ಮತ್ತು ರಾಘವೇಂದ್ರ ಬಡಾವಣೆ ನಿವಾಸಿಗಳಾದ ಬಾಬು, ಅಶ್ರಫ್, ಗೋವಿಂದ, ಅನ್ನಪೂರ್ಣ, ರಘು, ನಳಿನಿ ಸೇರಿದಂತೆ ಇತರರಿದ್ದರು.

Translate »