ಬಂದ್‍ಗೆ ಹಾಸನದಲ್ಲಿ ನೀರಸ ಪ್ರತಿಕ್ರಿಯೆ
ಹಾಸನ

ಬಂದ್‍ಗೆ ಹಾಸನದಲ್ಲಿ ನೀರಸ ಪ್ರತಿಕ್ರಿಯೆ

August 8, 2018

ಹಾಸನ: ಕೇಂದ್ರ ಜಾರಿಗೊಳಿಸುತ್ತಿರುವ ಮೋಟಾರು ವಾಹನ ತಿದ್ದುಪಡಿ ಮಸೂದೆ ವಿರೋಧಿಸಿ ಇಂದು ಕರೆ ನೀಡಿದ್ದ ಬಂದ್‍ಗೆ ಹಾಸನದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಎಸ್ಆರ್‌ಟಿಸಿ, ನಗರ ಸಾರಿಗೆ ಬಸ್‍ಗಳು, ಆಟೋ ಸೇರಿದಂತೆ ಇತರೆ ವಾಹಣಗಳು ಎಂದಿನಂತೆ ಸಂಚರಿಸಿದವು. ಜನ ಜೀವನ ಎಂದಿನಂತಿತ್ತು. ಅಂಗಡಿ ಮುಂಗಟ್ಟುಗಳು ತೆರದಿದ್ದವು.

ಕೆಎಸ್‍ಆರ್‍ಟಿಸಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್ ಜು.3ರಂದು ಸುದ್ದಿಗೋಷ್ಠಿ ನಡೆಸಿ ಮುಷ್ಕರಕ್ಕೆ ಬೆಂಬಲಿಸಲು ಮನವಿ ಮಾಡಿದ್ದರು. ಆದರೆ ಹಾಸನದ ಸಾರಿಗೆ ಸಂಬಂಧಿತ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡದೇ ಎಂದಿನಂತೆ ತಮ್ಮ ಕರ್ತವ್ಯ ನಿರ್ವಹಿಸಿದರು. ಇದರಿಂದ ಮುಷ್ಕರದ ಬಿಸಿ ಹಾಸನಕ್ಕೆ ತಟ್ಟಲಿಲ್ಲ.

Translate »