ಬೇಲೂರು: ಗೂಡಂಗಡಿಗಳ ತೆರವು
ಹಾಸನ

ಬೇಲೂರು: ಗೂಡಂಗಡಿಗಳ ತೆರವು

August 8, 2018

ಬೇಲೂರು: ಹಳೇಬೀಡಿನ ಹೊಯ್ಸಳ ದೇವಾಲಯದ ಬಳಿ ಮುಖ್ಯರಸ್ತೆಗೆ ಹೊಂದಿ ಕೊಂಡಂತಿದ್ದ ಗೂಡಂಗಡಿಗಳನ್ನು ಗ್ರಾಪಂನಿಂದ ತೆರವುಗೊಳಿಸಲಾಯಿತು.

ಇಂದು ಬೆಳಿಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಹರೀಶ್, ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಶೀಲಿಸಿದರು. ನಂತರ ವಾಹನ ಮೂಲಕ ಹಲವಾರು ಗೂಡಂಗಡಿಗಳನ್ನು ತೆರವುಗೊಳಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಪಿಡಿಓ ಹರೀಶ್, ದೇವಾಲಯದ ಬದಿಯಲ್ಲಿ ಹಲವರು ಗೂಡಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಕೆಲವರು ಸ್ಥಳಕ್ಕಾಗಿ ವ್ಯಾಪಾರ ನಡೆಸದೆ ಅಂಗಡಿಗಳನ್ನು ಇಟ್ಟಿರುತ್ತಾರೆ.
ಇದರಿಂದ ಸ್ವಚ್ಛತೆ ಇಲ್ಲವಾಗಿದೆ. ನೋಡಲು ಅಸಹ್ಯವೆನಿಸುತ್ತಿದೆ. ಹೊರ ಗಿನಿಂದ ಆಗಮಿಸಿದ ಪ್ರವಾಸಿಗರು ವಿಶ್ವ ಪ್ರಸಿದ್ಧಿ ಚನ್ನಕೇಶವ ದೇಗುಲದ ಬಳಿ ಈ ರೀತಿ ಗಲೀಜು ಇರುವುದನ್ನು ಕಂಡು ಬೇಸರಗೊಳ್ಳುತ್ತಾರೆ. ಇದನ್ನು ಮನಗಂಡು ಉಪಯೋಗಕ್ಕೆ ಬಾರದ ಅಂಗಡಿ ಹಾಗೂ ತಳ್ಳುಗಾಡಿಗಳ ತೆರವಿಗೆ ಕ್ರಮ ಕೈಗೊಂಡಿ ದ್ದೇವೆ ಎಂದು ತಿಳಿಸಿದರು.

Translate »