ಎಡಕುಮರಿ ಬಳಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ
ಹಾಸನ

ಎಡಕುಮರಿ ಬಳಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ

August 9, 2018

ಹಾಸನ: ಹಾಸನ-ಮಂಗಳೂರು ನಡುವಿನ ಸಕಲೇಶಪುರದ ಎಡಕುಮರಿ ಬಳಿ ಗುಡ್ಡ ಕುಸಿದಿದ್ದು, ರೈಲು ಸಂಚಾರ ಸ್ಥಗಿತಗೊಂಡಿದೆ.

ಮೂರು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಸಕ ಲೇಶಪುರದ ಎಡಕುಮರಿಯ ಮೂರನೇ ಮೈಲಿಯ ಬಳಿ ಗುಡ್ಡ ಕುಸಿದಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ವಿಷಯ ತಿಳಿದು ರೈಲ್ವೆ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ತುಂತುರು ಮಳೆಯಲ್ಲಿಯೇ ಗುಡ್ಡ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ರೈಲು ಸಂಚಾರ ಸ್ಥಗಿತದಿಂದ ಪ್ರಯಾಣಿಕರನ್ನು ರೈಲ್ವೆ ಇಲಾಖೆ ಹಾಸನದಿಂದ ರಸ್ತೆ ಮಾರ್ಗವಾಗಿ ಬಸ್‍ಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಿತು. 6ಕ್ಕೂ ಹೆಚ್ಚು ಬಸ್‍ಗಳಲ್ಲಿ ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಇತರೆಡೆ ಪ್ರಯಾಣಿಕರು ತೆರಳಿದರು. ಕಳೆದ ಎರಡೂವರೆ ತಿಂಗಳಲ್ಲಿ 11ನೇ ಬಾರಿ ಗುಡ್ಡ ಕುಸಿದಿದೆ.

Translate »