ಹಾಸನ

ದಾಖಲೆಯಿಲ್ಲದ 77 ಲಕ್ಷ ರೂ. ನಗದು ವಶ
ಹಾಸನ

ದಾಖಲೆಯಿಲ್ಲದ 77 ಲಕ್ಷ ರೂ. ನಗದು ವಶ

April 26, 2018

ಹಾಸನ: ಕ್ಷೇತ್ರ ಚುನಾವಣಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೂಕ್ತ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 77 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಹಾಸನ ಹೊರವಲಯದ ಚನ್ನಪಟ್ಟಣ ಬಳಿ ಹಣ ಸಮೇತ ವಾಹನ ವಶಪಡಿಸಿಕೊಳ್ಳಲಾಗಿದೆ. ಆದರೆ ಈ ವೇಳೆ ಹಣ ಸಾಗಾಟದಾರರು ಎ.ಟಿ.ಎಂ. ಗಳಿಗೆ ಹಾಕಲೆಂದು ಹಣ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಸೂಕ್ತ ದಾಖಲೆಗಳಿಲ್ಲದೆ ಹಣ ಸಾಗಾಟ ಮಾಡಿದ್ದ ರಿಂದ ಹಣವನ್ನು ಜಪ್ತಿ ಮಾಡಲಾಗಿದೆ. ಸ್ಥಳಕ್ಕೆ ಐಟಿ ಹಾಗೂ ಎಸ್‍ಬಿಐ ಅಧಿಕಾರಿಗಳು ಆಗಮಿಸಿದ್ದು, ಎಂಎಫ್ ಸಿಎಸ್ ಕಂಪನಿ ಮೂಲಕ ಎಟಿಎಂಗಳಿಗೆ ಹಣ ಹಾಕಲು ಗುತ್ತಿಗೆ…

ಹೊಳೆನರಸೀಪುರ: ಸಲ್ಲಿಕೆಯಾಗಿದ್ದ 16 ನಾಮಪತ್ರಗಳೂ ಕ್ರಮಬದ್ಧ
ಹಾಸನ

ಹೊಳೆನರಸೀಪುರ: ಸಲ್ಲಿಕೆಯಾಗಿದ್ದ 16 ನಾಮಪತ್ರಗಳೂ ಕ್ರಮಬದ್ಧ

April 26, 2018

ಹೊಳೆನರಸೀಪುರ: ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಗಳು 16 ನಾಮ ಪತ್ರವನ್ನು ಸಲ್ಲಿಸಿದ್ದು, ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ತಬಸ್ಸುಂ ಜಾಹೀರ ತಿಳಿಸಿದ್ದಾರೆ. ಜೆಡಿಎಸ್‍ನಿಂದ ಹೆಚ್.ಡಿ. ರೇವಣ್ಣ, ಕಾಂಗ್ರೆಸ್‍ನಿಂದ ಬಿ.ಪಿ. ಮಂಜೇಗೌಡ, ಬಿಜೆಪಿಯಿಂದ ಮಾರಗೌಡನಹಳ್ಳಿ ರಾಜು ಅಧಿಕೃತವಾಗಿ ಪಕ್ಷದ ಅಭ್ಯರ್ಥಿ ಗಳಾಗಿದ್ದಾರೆ. ಮಂಗಳವಾರ 5 ನಾಮ ಪತ್ರಗಳು ಸಲ್ಲಿಕೆಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಕಳೆದ ಗುರುವಾರ ನಾಮ ಪತ್ರ ಸಲ್ಲಿಸಿದ್ದು, ನಂತರ ಸೋಮವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಹೆಚ್.ಡಿ. ರೇವಣ್ಣ ಎಂಬ ಹೆಸರಿನ ವ್ಯಕ್ತಿಯೊಬ್ಬರು ಪಕ್ಷೇತರವಾಗಿ…

ಅಕ್ಕನ ಆಶೀರ್ವಾದ ಸಿಗಲ್ಲ ಎಂದ ಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗುತ್ತೆ
ಹಾಸನ

ಅಕ್ಕನ ಆಶೀರ್ವಾದ ಸಿಗಲ್ಲ ಎಂದ ಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗುತ್ತೆ

April 26, 2018

ಹಾಸನ:  ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕಿತ್ತು ಎಂಬುದು ಜನರ ಭಾವನೆ ಯಾಗಿತ್ತು. ಆದರೆ ಅವರಿಗೆ ಟಿಕೆಟ್ ನೀಡದೇ ಇರುವುದು ಪಕ್ಷದ ತೀರ್ಮಾನ. ಈ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಇಚ್ಚಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಜಿಲ್ಲೆಯ ಬೇಲೂರಿನಲ್ಲಿ ಮಾತನಾಡಿದ ಅವರು, ಬಾದಾಮಿ ಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೆಲುವು ಬಾದಾಮಿ ತಿಂದಷ್ಟು ಸುಲಭವಲ್ಲ. ಚಾಮುಂಡೇಶ್ವರಿಯಲ್ಲಿ ಚಾಮುಂಡಿ ಆಶೀರ್ವಾದ ಸಿಗದು ಎಂಬ…

ಕಡೇ ದಿನ: ಅಭ್ಯರ್ಥಿಗಳಿಂದ ಉಮೇದುವಾರಿಕೆ
ಹಾಸನ

ಕಡೇ ದಿನ: ಅಭ್ಯರ್ಥಿಗಳಿಂದ ಉಮೇದುವಾರಿಕೆ

April 25, 2018

ಹಾಸನ: ವಿಧಾನಸಭೆಗೆ ಸ್ಪರ್ಧಿ ಸುವ ಹಿನ್ನೆಲೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಜಿಲ್ಲಾದ್ಯಂತ ವಿವಿಧ ಕ್ಷೇತ್ರಗಳಿಂದ ಉಮೇದುವಾರಿಕೆ ಗಳು ಸಲ್ಲಿಕೆಯಾದವು. ಹಾಸನ ವಿಧಾನ ಸಭಾ ಕ್ಷೇತ್ರ: ಬಿಜೆಪಿ ಯಿಂದ ಪ್ರೀತಮ್ ಜೆ.ಗೌಡ ಅವರು ಭಾರೀ ಜನಸಾಗರದೊಂದಿಗೆ ತೆರೆದ ವಾಹನ ದಲ್ಲಿ ಮೆರವಣ ಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ನೆನ್ನೆಯಷ್ಟೇ ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನ ದೊಂದಿಗೆ ನಾಮಪತ್ರ ಸಲ್ಲಿಸಿದ್ದವು. ಜೊತೆಗೆ ಬಿಜೆಪಿ ಅಭ್ಯರ್ಥಿಯೂ ಕೇಲವ ರೊಂದಿಗೆ ಪಾಲ್ಗೊಂಡು ನಾಮಪತ್ರ ಸಲ್ಲಿಸಿ ದ್ದರು….

ಹಾಸನದ ಜಿಲ್ಲಾಧಿಕಾರಿಯಾಗಿ ಜಾಫರ್ ಅಧಿಕಾರ ಸ್ವೀಕಾರ
ಹಾಸನ

ಹಾಸನದ ಜಿಲ್ಲಾಧಿಕಾರಿಯಾಗಿ ಜಾಫರ್ ಅಧಿಕಾರ ಸ್ವೀಕಾರ

April 25, 2018

ಹಾಸನ: ಚುನಾವಣಾ ಆಯೋಗದ ಆದೇಶದ ಹಿನ್ನೆಲೆಯಲ್ಲಿ ಡಿಸಿ ಡಾ.ಡಿ.ರಂದೀಪ್‍ರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಜಿಲ್ಲಾಧಿಕಾರಿ ಯಾಗಿ ಪಿ.ಸಿ.ಜಾಫರ್ ಅಧಿಕಾರ ಸ್ವೀಕಾರ ಮಾಡಿದರು. ಚುನಾವಣಾ ಆಯೋಗದ ಸೂಚನೆಯಂತೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ಡಾ.ರಂದೀಪ್‍ರನ್ನು ಮಂಗಳ ವಾರ ವರ್ಗಾವಣೆ ಮಾಡಿದ್ದು, ರಣದೀಪ್ ಅವರ ಸ್ಥಾನಕ್ಕೆ ಪಿ.ಸಿ.ಜಾಫರ್‍ರನ್ನು ನೇಮಕ ಮಾಡಿ ಆದೇಶಿಸಿದೆ. ಒಂದು ವಾರದ ಹಿಂದಷ್ಟೇ ಹಾಸನ ಜಿಲ್ಲಾಧಿಕಾರಿ ಯಾಗಿ ನೇಮಕವಾಗಿದ್ದ ಡಿ.ರಂದೀಪ್ ಅವರು ಇಂದು ಜಾಫರ್‍ರಿಗೆ ಅಧಿಕಾರ ಹಸ್ತಾಂತರ ಮಾಡಿದರು. ರೋಹಿಣ ಸಿಂಧೂರಿ ವರ್ಗಾವಣೆ ಅರ್ಜಿಯನ್ನು ಸಿಎಟಿ ವಜಾ ಮಾಡಿ ಸೂಚಿಸಿದ್ದ…

ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು
ಹಾಸನ

ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

April 25, 2018

ಹೊಳೆನರಸೀಪುರ: ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಇಂದು ನಡೆದಿದೆ. ಪಟ್ಟಣದ ವಕ್ಕರಣೆ ಬಾವಿ ಬೀದಿಯ ನಿವಾಸಿ ಪೋಲಿಸ್ ಸಿಬ್ಬಂದಿ ಶೇಷಣ್ಣರ ಪುತ್ರ ಮಹೇಶ್ ಮೃತರು. ಮನೆ ಬಳಿ ಇರುವ ಕುಡಿಯುವ ನೀರಿನ ಬೋರ್‍ವೆಲ್ ಬಳಿ ಮೋಟರ್ ಆನ್ ಮಾಡಲು ಹೋದಾಗ ವಿದ್ಯುತ್ ಪ್ರವಹಿಸಿ ಕುಸಿದು ಬಿದ್ದಿದ್ದಾರೆ. ಅಸ್ವಸ್ಥರಾದ ಇವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಮೃತರು ಪತ್ನಿ, ಬಂಧು-ಬಳಗವನ್ನು ಅಗಲಿದ್ದಾರೆ. ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಮುಖಂಡ…

ಕುಡಿಯುವ ನೀರಿಗೆ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ
ಹಾಸನ

ಕುಡಿಯುವ ನೀರಿಗೆ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ

April 19, 2018

ಹಾಸನ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಿ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತ ಡಿ.ವಿ ಪ್ರಸಾದ್ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಪೂರೈಕೆ ಕುರಿತ ಸಭೆಯಲ್ಲಿ ಅಧಿಕಾರಿಗಳಿಂದ ಜಿಲ್ಲೆಯ ಮಳೆ, ಬೆಳೆ, ಕುಡಿಯುವ ನೀರಿನ ಸ್ಥಿತಿಗತಿ ಹಾಗೂ ದನಕರುಗಳಿಗೆ ಮೇವಿನ ಲಭ್ಯತೆ ಬಗ್ಗೆ ಮಾಹಿತಿ ಪಡೆದ ಅವರು, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗದಂತೆ ಮುಂಜಾಗ್ರತೆ ವಹಿಸಿ ಎಂದರು….

ಚೆಕ್‍ಪೋಸ್ಟ್‍ಗಳಲ್ಲಿ ಸರ್ಕಾರಿ ವಾಹನಗಳನ್ನೂ ಪರಿಶೀಲಿಸಿ
ಹಾಸನ

ಚೆಕ್‍ಪೋಸ್ಟ್‍ಗಳಲ್ಲಿ ಸರ್ಕಾರಿ ವಾಹನಗಳನ್ನೂ ಪರಿಶೀಲಿಸಿ

April 19, 2018

ಹಾಸನ: ಜಿಲ್ಲೆಯಾದ್ಯಂತ ಚೆಕ್‍ಪೋಸ್ಟ್ ಗಳಲ್ಲಿ ಸರ್ಕಾರಿ ವಾಹನಗಳು ಸೇರಿ ದಂತೆ ಎಲ್ಲಾ ವಾಹನಗಳನ್ನು ಕಡ್ಡಾಯ ವಾಗಿ ತಪಾಸಣೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಎಲ್ಲಾ ಕ್ಷೇತ್ರಗಳ ಚುನಾವಣಾ ಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸೆಕ್ಟರ್ ಅಧಿಕಾರಿಗಳೊಂದಿಗೆ ಸಭೆ ಹಾಗೂ ವೀಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾಧಿಕಾರಿ ವಾಹನವು ಸೇರಿದಂತೆ ಎಲ್ಲಾ ಅಧಿಕಾರಿ ಗಳ ವಾಹನಗಳನ್ನು ತಪಾಸಣೆಗೆ ಒಳಪಡಬೇಕು. ಅಧಿಕಾರಿಗಳು ಇದಕ್ಕೆ ಸಹಕಾರ ನೀಡಿ ಸ್ವಯಂ…

ಮಲ್ಲಿಪಟ್ಟಣದಲ್ಲಿ ಎ.ಮಂಜು ಮತ ಯಾಚನೆ
ಹಾಸನ

ಮಲ್ಲಿಪಟ್ಟಣದಲ್ಲಿ ಎ.ಮಂಜು ಮತ ಯಾಚನೆ

April 19, 2018

ರಾಮನಾಥಪುರ: ಸಚಿವನಾದ ಮೇಲೆ ತಾಲೂಕಿನಲ್ಲಿ ಹೆಚ್ಚಿನ ಅನುದಾನ ಗಳನ್ನು ತಂದು ಅಭಿವೃದ್ಧಿ ಕಾರ್ಯ ಮಾಡಿ ರುವುದೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಚಿವ ಎ.ಮಂಜು ತಿಳಿಸಿದರು. ಹೋಬಳಿ ಮಲ್ಲಿಪಟ್ಟಣ ಗ್ರಾಮ ದಲ್ಲಿ ಮತಯಾಚಿಸಿ ಮಾತನಾಡಿದ ಅವರು, ನಾನು ಮಾಡಿರುವ ಅಭಿವೃದ್ಧಿ ಕಂಡು ಮತದಾರರು ನನಗೆ ಮತ ನೀಡುತ್ತಾರೆ. ನಾನು ಶಾಸಕನಾಗಿದ್ದ ಅವಧಿ ಹಾಗೂ ಮಂತ್ರಿಯಾದ ಮೇಲೆ ನನ್ನ ಕ್ಷೇತ್ರಕ್ಕೆ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ಈ ಸಂದರ್ಭದಲ್ಲಿ ಜನರಿಂದ ಸಿಗುತ್ತಿರುವ ಬೆಂಬಲ ನಾನು ಕೈಗೊಂಡಿರುವ ಅಭಿವೃದ್ಧಿಯನ್ನು ಬಿಂಬಿಸುತ್ತಿವೆ ಎಂದು…

ಬಸವೇಶ್ವರರ ಜಯಂತಿಯನ್ನು ಕಾಯಕ ದಿನವಾಗಿಸುವುದು ಅಗತ್ಯ
ಹಾಸನ

ಬಸವೇಶ್ವರರ ಜಯಂತಿಯನ್ನು ಕಾಯಕ ದಿನವಾಗಿಸುವುದು ಅಗತ್ಯ

April 19, 2018

ಬೇಲೂರು: ಬಸವಣ್ಣನವರ ನುಡಿಯಂತೆ ಇಂದಿನ ದಿನವನ್ನು ಬಸವೇಶ್ವರ ಜಯಂತಿ ಬದಲಾಗಿ ಕಾಯಕದ ದಿನವೆಂದು ಆಚರಿಸುವ ಅಗತ್ಯವಿದೆ ಎಂದು ತಾಲೂಕು ಶರಣ ಸಾಹಿತ್ಯ ಒಕ್ಕೂಟದ ಅಧ್ಯಕ್ಷ ಸಿ.ಎಂ.ನಿಂಗರಾಜು ಹೇಳಿದರು. ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಏರ್ಪಡಿಸಿದ್ದ ಬಸವೇಶ್ವರ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ನಾವು ನಮ್ಮ ದೇಹ ಮತ್ತು ಮನಸ್ಸನ್ನು ಸ್ವಚ್ಛತೆಯನ್ನಾಗಿ ಇಟ್ಟಿಕೊಳ್ಳಲು ಬಸವಣ್ಣನವರ ಹಿತನುಡಿ ಇಂದಿಗೂ ಅಗತ್ಯವಾಗಿದೆ. ಇಂದು ನಾವು ಹೇಳುವುದೇ ಒಂದು, ನಡೆ ಮತ್ತೊಂದಾಗಿದೆ. ಹಣ, ಅಧಿಕಾರದ ಹಿಂದೆ ಓಡುತ್ತಿ ದ್ದೇವೆ. ಆತ್ಮಶುದ್ಧಿ…

1 130 131 132 133
Translate »