ಹೊಳೆನರಸೀಪುರ: ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಗಳು 16 ನಾಮ ಪತ್ರವನ್ನು ಸಲ್ಲಿಸಿದ್ದು, ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ತಬಸ್ಸುಂ ಜಾಹೀರ ತಿಳಿಸಿದ್ದಾರೆ.
ಜೆಡಿಎಸ್‍ನಿಂದ ಹೆಚ್.ಡಿ. ರೇವಣ್ಣ, ಕಾಂಗ್ರೆಸ್‍ನಿಂದ ಬಿ.ಪಿ. ಮಂಜೇಗೌಡ, ಬಿಜೆಪಿಯಿಂದ ಮಾರಗೌಡನಹಳ್ಳಿ ರಾಜು ಅಧಿಕೃತವಾಗಿ ಪಕ್ಷದ ಅಭ್ಯರ್ಥಿ ಗಳಾಗಿದ್ದಾರೆ. ಮಂಗಳವಾರ 5 ನಾಮ ಪತ್ರಗಳು ಸಲ್ಲಿಕೆಯಾಗಿತ್ತು.
ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಕಳೆದ ಗುರುವಾರ ನಾಮ ಪತ್ರ ಸಲ್ಲಿಸಿದ್ದು, ನಂತರ ಸೋಮವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಹೆಚ್.ಡಿ. ರೇವಣ್ಣ ಎಂಬ ಹೆಸರಿನ ವ್ಯಕ್ತಿಯೊಬ್ಬರು ಪಕ್ಷೇತರವಾಗಿ ನಾಮ ಪತ್ರ ಸಲ್ಲಿಸಿದ್ದಾರೆ.
ಎಂ. ಮಹೇಶ್ ನಿಂಗೇಗೌಡ, ಜಿ.ಕೆ ಗುರು, ಇವರುಗಳು ಪಕ್ಷೇತರವಾಗಿ ನಾಮ ಪತ್ರ ಸಲ್ಲಿದ್ದಾರೆ. ಭಾರತೀಯ ಅಂಬೇಡ್ಕರ್ ಜನತಾ ಪಕ್ಷದ ಹೆಸರಿನಲ್ಲಿ ಹೆಚ್.ಪಿ. ಯೋಗೇಶ್, ಎಪಿಪಿ ಪಾರ್ಟಿಯಿಂದ ಮೊಹಮದ್ ಹನೀಫ್ ನಾಮಪತ್ರ ಸಲ್ಲಿದ್ದಾರೆ. ಕೊನೆಯಲ್ಲಿ ಎಲ್ಲಾ ಅಭ್ಯರ್ಥಿಗಳ ನಾಮಪತ್ರವೂ ಕ್ರಮ ಬದ್ಧವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.