ಅಕ್ಕನ ಆಶೀರ್ವಾದ ಸಿಗಲ್ಲ ಎಂದ ಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗುತ್ತೆ
ಹಾಸನ

ಅಕ್ಕನ ಆಶೀರ್ವಾದ ಸಿಗಲ್ಲ ಎಂದ ಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗುತ್ತೆ

April 26, 2018

ಹಾಸನ:  ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕಿತ್ತು ಎಂಬುದು ಜನರ ಭಾವನೆ ಯಾಗಿತ್ತು. ಆದರೆ ಅವರಿಗೆ ಟಿಕೆಟ್ ನೀಡದೇ ಇರುವುದು ಪಕ್ಷದ ತೀರ್ಮಾನ. ಈ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಇಚ್ಚಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಜಿಲ್ಲೆಯ ಬೇಲೂರಿನಲ್ಲಿ ಮಾತನಾಡಿದ ಅವರು, ಬಾದಾಮಿ ಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೆಲುವು ಬಾದಾಮಿ ತಿಂದಷ್ಟು ಸುಲಭವಲ್ಲ. ಚಾಮುಂಡೇಶ್ವರಿಯಲ್ಲಿ ಚಾಮುಂಡಿ ಆಶೀರ್ವಾದ ಸಿಗದು ಎಂಬ ಕಾರಣ ದಿಂದ ಬಾದಾಮಿಯ ಬನಶಂಕರಿ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಆದರೆ ಅವರಿಬ್ಬರು ಅಕ್ಕ-ತಂಗಿಯರು. ಅಕ್ಕನ ಆಶೀರ್ವಾದ ಸಿಗಲ್ಲ ಎಂದಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗಲಿದೆ. ಬಾದಾಮಿ ಕಾಂಗ್ರೆಸ್ ಗೆ ಕಬ್ಬಿಣದ ಕಡಲೆಯಾಗುವುದು ನಿಶ್ಚಿತ ಎಂದರು.

Translate »