2020ಕ್ಕೆ ಹೊಸ ಪ್ರವಾಸೋದ್ಯಮ ನೀತಿ ಜಾರಿ
ಮೈಸೂರು

2020ಕ್ಕೆ ಹೊಸ ಪ್ರವಾಸೋದ್ಯಮ ನೀತಿ ಜಾರಿ

September 29, 2019

ಮೈಸೂರು, ಸೆ.28 (ಪಿಎಂ)- ಹೊಸ ಅನುಭವದ ತಾಣವಾಗಿ ಕರ್ನಾಟಕವನ್ನು ರೂಪಿಸುವ ನಿಟ್ಟಿನಲ್ಲಿ 2020ಕ್ಕೆ ಹೊಸ ಪ್ರವಾಸೋದ್ಯಮ ನೀತಿ ಜಾರಿಗೊ ಳಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತ ನಾಡಿದ ಅವರು, ಹೊಸ ನೀತಿ ಜಾರಿಗೊಳಿಸಿ ಸಾರ್ವ ಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತಿಸಲಾ ಗಿದೆ. ಈ ಮಾದರಿಯ ಯೋಜನೆ, ಪರಿಕಲ್ಪನೆ ಸರ್ಕಾರ ದ್ದಾಗಿದ್ದರೆ, ಬಂಡವಾಳ ಹೂಡಿಕೆ ಹಾಗೂ ಲಾಭ ಖಾಸಗಿಯವರಿಗೆ ಸಲ್ಲಲಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಖಾತೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ 10 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಶೀಲನಾ ಸಭೆ ನಡೆಸಿದ್ದು, ಇನ್ನು ಎರಡೂ ತಿಂಗಳು ನನ್ನದು ಅಧ್ಯಯನದ ಅವಧಿ ಎಂದು ಭಾವಿಸಿದ್ದೇನೆ. ಈ ಅವಧಿ ಯಲ್ಲಿ ಇಡೀ ರಾಜ್ಯ ಸುತ್ತಲಿದ್ದೇನೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗ ಸೃಷ್ಟಿಗೆ ವಿಫುಲವಾದ ಅವಕಾಶವಿದೆ. ಇಲಾಖೆಯಲ್ಲಿ ಶೇಕಡ ಎಂಭತ್ತೂವರೆ ಯಷ್ಟು ಹುದ್ದೆಗಳು ಭರ್ತಿಯಾಗಿಲ್ಲ. ನಿಯೋಜನೆ ಹಾಗೂ ಗುತ್ತಿಗೆ ಆಧಾರದಲ್ಲಿ ಖಾಲಿ ಹುದ್ದೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ವೈವಿಧ್ಯಮಯ ಪ್ರವಾಸಿ ತಾಣಗಳಿದ್ದು, ಪ್ರದೇಶದಿಂದ ಪ್ರದೇಶಕ್ಕೆ ಭಾಷೆ ಸೊಗಡಿನಲ್ಲೂ ವೈವಿ ಧ್ಯತೆ ಕಾಣಬಹುದು. ಜೊತೆಗೆ ವಿಶಿಷ್ಟ ಆಹಾರ ಪದ್ಧತಿ ಗಳು ಕಾಣಸಿಗಲಿದ್ದು, ಇದನ್ನು ಮಾರ್ಕೇಟ್ ಮಾಡಿ ದರೆ ಪ್ರವಾಸೋದ್ಯಮ ಬೆಳೆಯಲಿದೆ. ಸಾರ್ವಜನಿಕ ವಲಯದಿಂದ ತಮ್ಮ ತಮ್ಮ ಸ್ಥಳಗಳ ವಿಶೇಷತೆಯ 30 ಸೆಕೆಂಡ್‍ಗಳ ವೀಡಿಯೋ ಆಹ್ವಾನಿಸಲಾಗುವುದು. ಅವುಗಳನ್ನು ವೆಬ್‍ಸೈಟ್‍ನಲ್ಲಿ ಹಾಕುವ ಮೂಲಕ ಪ್ರತಿ ಗ್ರಾಮಗಳ ಸಮಗ್ರ ಮಾಹಿತಿ ದೊರಕುವಂತೆ ಮಾಡ ಲಾಗುವುದು ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಡಿಸ್ನಿಲ್ಯಾಂಡ್ ವಿಚಾರದಲ್ಲಿ ಸಾರಾಗೆ ಸಹಮತ: ಡಿಸ್ನಿಲ್ಯಾಂಡ್ ಮಾದರಿ ಕೆಆರ್‍ಎಸ್ ಜಲಾಶಯ ಬಳಿ ಅಭಿವೃದ್ಧಿಪಡಿಸುವ ಯೋಜನೆ ನಮ್ಮ ಇಲಾಖೆಯ ದಲ್ಲ. ಅದು ಭಾರೀ ನೀರಾವರಿ ಇಲಾಖೆ ಯೋಜನೆ. ಹೀಗಾಗಿ ಆ ಬಗ್ಗೆ ಅದರ ಸಮಗ್ರ ಮಾಹಿತಿ ಇಲ್ಲ. 1,200 ಕೋಟಿ ರೂ. ಯೋಜನೆ ಅದಾಗಿದ್ದು, ನಮ್ಮ ಇಲಾಖೆ ಅನುದಾನವೇ 450 ಕೋಟಿ ರೂ. ಒಳಗಿದೆ. ಇಂತಹ ಅಭಿವೃದ್ಧಿ ಯೋಜನೆ ವಿಚಾರದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ನನ್ನ ಸಹಮತವಿದೆ. ಕೆಲ ತಾಂತ್ರಿಕ ವಿಷಯಗಳನ್ನು ಸರಿಪಡಿಸಿಕೊಂಡು ಈ ಯೋಜನೆ ಅನುಷ್ಠಾನಗೊಳಿಸುವುದರಲ್ಲಿ ನನ್ನ ವಿರೋಧ ವಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ಪಾರಂಪರಿಕ ಕಟ್ಟಡ ಬಗ್ಗೆ ಸಭೆ: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳ ಫೋಷಣೆ ಸಂಬಂಧ ದಸರಾ ಬಳಿಕ ಮೈಸೂರಿನಲ್ಲೇ ಸಭೆ ನಡೆಸಲಾಗುವುದು. ಸದ್ಯ ಜಿಲ್ಲಾಧಿಕಾರಿಗಳು ಮೈಸೂರಿನಲ್ಲಿ 130 ಕಟ್ಟಡಗಳನ್ನು ಪಾರಂಪರಿಕ ಪಟ್ಟಿಗೆ ಗುರುತಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಪಾರಂಪರಿಕ ಕಟ್ಟಡಗಳ ರಕ್ಷಣೆ ಹಾಗೂ ಪೋಷಣೆ ಎರಡಕ್ಕೂ ಒತ್ತು ನೀಡಿ ಯೋಜನೆ ರೂಪಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿಯೂ ಟೂರಿಸಂ ಸಕ್ರ್ಯೂಟ್ ರಚಿಸಿ, ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಹಿಂದಿ ಭಾಷೆ ಬೇಕು: ಹಿಂದಿ ಭಾಷೆಯಿಂದಾಗಿ ದೇಶದ ಯಾವುದೇ ಪ್ರಾದೇಶಿಕ ಭಾಷೆಯ ಶಾಲೆಗಳು ಬಾಗಿಲು ಹಾಕಿದ ಉದಾಹರಣೆ ಇಲ್ಲ. ದೇಶದ ಶೇ.44 ರಷ್ಟು ಜನತೆ ಸ್ವಾಭಾವಿಕವಾಗಿ ಹಿಂದಿ ಕಲಿಯುತ್ತಾರೆ. ಪ್ರಾದೇಶಿಕ ಭಾಷೆಗಳ ಜೊತೆಗೆ ಸಂಪರ್ಕ ಭಾಷೆ ಯಾಗಿ ಹಿಂದಿ ಇರಬೇಕು ಎಂದು ಪ್ರತಿಪಾದಿಸಿದರು.

ಜಯಂತಿಗಳಿಗೆ ಹೊಸ ಸ್ವರೂಪ: ರಾಜ್ಯದಲ್ಲಿ ನಾನಾ ಮಹನೀಯರು, ದಾರ್ಶನಿಕರ ಜಯಂತಿ ಮಹೋತ್ಸವಗಳ ಸ್ವರೂಪದಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗುತ್ತಿದೆ. ಆಯಾಯ ಜಿಲ್ಲಾಧಿಕಾರಿ ಗಳು ಆಯಾಯ ಸಮುದಾಯದವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಯಾವುದೇ ಜಯಂತಿ ರದ್ದುಪಡಿ ಸುವ ಉದ್ದೇಶವಿಲ್ಲ. ಹಾಗೇ ಮಾಡಿದರೆ ವಿವಾದ ಮೈಮೇಲೆ ಎಳೆದುಕೊಂಡಂತೆ. ಜಯಂತಿಗಳನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸ ಬೇಕೆಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು. ಜಿಲ್ಲಾ ಪತ್ರ ಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು ಹಾಜರಿದ್ದರು.

ಯಡಿಯೂರಪ್ಪ-ಕಟೀಲ್ ನಡುವೆ ಭಿನ್ನಾಭಿಪ್ರಾಯವಿಲ್ಲ
ಮೈಸೂರು, ಸೆ.28(ಪಿಎಂ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾ ಧ್ಯಕ್ಷ ನಳಿನ್‍ಕುಮಾರ್ ಕಟೀಲ್ ನಡುವೆ ತಾತ್ವಿಕ ಆಲೋಚನೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಹೇಳಲಾಗಿರುವ ಬಗ್ಗೆ ಮಾಧ್ಯಮ ದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಅನುಷ್ಠಾನದ ಹಂತದಲ್ಲಿ ಒಬ್ಬೊಬ್ಬರದು ಒಂದೊಂದು ಶೈಲಿ ಇರು ತ್ತದೆ. ಈ ಹಂತದಲ್ಲಿ ಕೆಲ ವ್ಯತ್ಯಾಸ ಆಗಬಹುದು ಎಂದ ಅವರು, `ಯಡಿಯೂರಪ್ಪರನ್ನು ಬಿಜೆಪಿ ಅಸಹಾಯಕ ರನ್ನಾಗಿ ಮಾಡುತ್ತಿದೆಯೇ? ಎಂಬ ಪ್ರಶ್ನೆಗೆ ಅದು ಸಾಧ್ಯವೇ? ಪಕ್ಷ ಯಾರನ್ನೂ ತುಳಿಯುವುದಿಲ್ಲ ಎಂದರು.

ತಮಗೆ ಹೆಚ್ಚುವರಿಯಾಗಿ ಸಕ್ಕರೆ ಖಾತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಆ ಇಲಾಖೆ ಹಾಗೂ ಅದರ ವ್ಯಾಪ್ತಿಯ ಬಗ್ಗೆ ಸದ್ಯಕ್ಕೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಬಳಿ ಮಾರ್ಗದರ್ಶನ ಕೇಳಿ ದ್ದೇನೆ ಎಂದರು. 9 ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದ್ದು, ಒಂದಕ್ಕೆ ಕೊಟ್ಟು ಮತ್ತೊಂದಕ್ಕೆ ಬಿಡುವುದು ಬೇಡ ವೆಂದು ಯಾವುದೇ ರಾಜ್ಯಕ್ಕೂ ಕೇಂದ್ರ ಸರ್ಕಾರ ಇನ್ನು ಪರಿಹಾರ ಬಿಡುಗಡೆ ಮಾಡಿಲ್ಲ. ವೈಯಕ್ತಿಕ ನಷ್ಟದ ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುವ ವ್ಯವಸ್ಥೆಗೆ ಕೇಂದ್ರ ಮುಂದಾಗಿದೆ. ಖಂಡಿತ ಈ ವಿಷಯದಲ್ಲಿ ಕೇಂದ್ರ ಪರಿಹಾರ ನೀಡಲಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಯಾವುದೇ ರಾಜಕೀಯ ಮಾಡುವುದಿಲ್ಲ. ಎಲ್ಲಾ ರಾಜ್ಯಕ್ಕೂ ನ್ಯಾಯಯುತ ವಾಗಿ ಪರಿಹಾರ ಬಿಡುಗಡೆ ಮಾಡಲಿದೆ ಎಂದರು.

Translate »