ಮೈಸೂರು, ಸೆ.28(ಪಿಎಂ)- ಮಹಿಷ ರಾಕ್ಷಸನಾಗಿದ್ದರೆ ಅವನ ಹೆಸರು ಮೈಸೂ ರಿಗೆ ಬರುತ್ತಿಲಿಲ್ಲ. ಮಹಿಷ ದಸರಾ ವಿರೋಧಿ ಸುವವರು ಇತಿಹಾಸ ಓದಿ ತಿಳಿದುಕೊಳ್ಳದೇ ಕಂದಾಚಾರ, ಮೌಢ್ಯ ಹರಡುತ್ತಿದ್ದಾರೆ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ಟೀಕಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, `ಭಾರತದ ಇತಿಹಾಸ ಎಂದರೆ ಅದು ಬೌದ್ಧರು ಹಾಗೂ ಬ್ರಾಹ್ಮ ಣರ ನಡುವಿನ ಸಂಘರ್ಷ’ ಎಂದು ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಇದು ಸತ್ಯವಾದ ಮಾತು ಎಂದರು.
ಅಂಬೇಡ್ಕರ್ ಅವರು ಅತ್ಯಂತ ಆಳವಾದ ಅಧ್ಯಯನ ನಡೆಸಿ ಈ ಮಾತು ಹೇಳಿದ್ದಾರೆ. ಆದರೆ ಈಗ ಮಹಿಷ ದಸರಾ ವಿರೋಧಿಸು ವವರು ಓದುವುದಿಲ್ಲ, ಆಲೋಚನೆ ಮಾಡು ವುದನ್ನು ಕಲಿತಿಲ್ಲ. ಶೂದ್ರರೆಲ್ಲಾ ಗುಲಾಮರು ಎಂದು ಮನುಸ್ಪøತಿ ಹೇಳಿದೆ ಎಂದರು.
ಚಿಂತಕ ಪ್ರೊ.ನಂಜರಾಜ ಅರಸು ಮಾತ ನಾಡಿ, ಮಹಿಷ ದಸರಾ ವಿಚಾರದಲ್ಲಿ ಸಂಸ ದರ ವರ್ತನೆಯನ್ನು ಮಾಧ್ಯಮಗಳಲ್ಲಿ ನೋಡಿ ಬೇಸರವಾಯಿತು. ಅವರು ಹಿಟ್ಲರ್‍ಶಾಹಿ ಧೋರಣೆ ಅನುಸರಿಸಿದ್ದು, ಉದ್ಧಟತನ ಪ್ರದ ರ್ಶಿಸಿದ್ದಾರೆ. ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಸಂಸದರು ಟೀಕಿಸಿದ್ದಾರೆ. ಇದೇ ರೀತಿ ಒಬ್ಬ ಸಾಮಾನ್ಯ ವ್ಯಕ್ತಿ ಮಾತನಾಡಿದ್ದರೆ ಪ್ರಕರಣ ದಾಖಲಾಗುತ್ತಿತ್ತು ಎಂದು ವಿಷಾದಿಸಿದರು.
ಪುರಾಣವನ್ನೇ ಇತಿಹಾಸ ಎಂದು ಹೇಳಿ ಕೊಂಡು ಬರಲಾಗುತ್ತಿದೆ. ಚಾಮುಂಡಿ ಮೂಲತಃ ಗ್ರಾಮ ದೇವತೆ. ಜೈನರ ಪ್ರಾಬಲ್ಯ ವಿದ್ದ 10ನೇ ಶತಮಾನದಲ್ಲಿ ಯಕ್ಷಿಣಿಯಾಗಿ ದ್ದಳು. ಶೈವರ ಪ್ರಾಬಲ್ಯ ಬಂದಾಗ ಶೈವ ಸಂಪ್ರದಾಯದ ಸ್ವರೂಪ ನೀಡಲಾಯಿತು. ಟಿಪ್ಪು ಸಾವಿನ ನಂತರ ದಿವಾನ್ ಪೂರ್ಣಯ್ಯ ನವರು ತಮಿಳುನಾಡಿನಿಂದ ಬ್ರಾಹ್ಮಣ ಅರ್ಚಕ ರನ್ನು ಕರೆಯಿಸಿಕೊಂಡರು. ಅವರು ಪೂಜೆ ಮಾಡಲಾರಂಭಿಸಿದ ಬಳಿಕ ಚಾಮುಂಡಿ ಶುದ್ಧ ಸಸ್ಯಾಹಾರಿಯಾದಳು. ಹೀಗೆ ಚಾಮುಂಡಿ ಕಾಲದಿಂದ ಕಾಲಕ್ಕೆ ರೂಪಾಂತರಗೊಂಡಿ ದ್ದಾಳೆ. ಆದಾಗ್ಯೂ ಚಾಮುಂಡಿ ಹಬ್ಬ ಆಚ ರಣೆಯಲ್ಲಿ ಮಾಂಸಾಹಾರವನ್ನೇ ಮಾಡು ವುದನ್ನು ಮೈಸೂರಿನ ಅನೇಕ ಬಡಾವಣೆ ಗಳಲ್ಲಿ ಕಾಣಬಹುದು ಎಂದು ವಿವರಿಸಿದರು.
ಕಾನೂನು ಹೋರಾಟ: ಮಹಿಷ ದಸರಾ ಆಚರಣೆ ಹಿನ್ನೆಲೆಯಲ್ಲಿ ಹಾಕಿಸಿದ್ದ ಶಾಮಿಯಾನ ತೆರವುಗೊಳಿಸಿದ ಸಂಸದ ಪ್ರತಾಪ್ ಸಿಂಹ ವರ್ತನೆ ವಿರುದ್ಧ ಕಾನೂನಾ ತ್ಮಕ ಹೋರಾಟ ನಡೆಸಲು ಉದ್ದೇಶಿಸಲಾ ಗಿದೆ ಎಂದು ದಲಿತ ವೇಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ತಿಳಿಸಿದರು.
ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಕಳೆದ 6 ವರ್ಷಗಳಿಂದ ಶಾಂತಿ ಯುತವಾಗಿ ಮಹಿಷ ದಸರಾ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಅದೇ ರೀತಿ ಈ ಬಾರಿಯೂ ಮಹಿಷಾ ದಸರಾ ಆಚ ರಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಸಂಸದ ಪ್ರತಾಪ್ ಸಿಂಹ ಕೊನೆ ಗಳಿಗೆಯಲ್ಲಿ ಚಾಮುಂಡಿಬೆಟ್ಟದ ಮಹಿಷ ಪ್ರತಿಮೆ ಬಳಿ ಹಾಕಿದ್ದ ಶಾಮಿಯಾನ ತೆಗೆಸಿ ದ್ದಾರೆ. ಆ ಮೂಲಕ ದಲಿತ ವಿರೋಧಿ ಧೋರಣೆ ಪ್ರದರ್ಶನ ಮಾಡಿದ್ದಾರೆ ಎಂದು ಆರೋಪಿಸಿದರು.
ನಾವು ಮಹಿಷ ದಸರಾ ಆಚರಣೆ ಮೂಲಕ ಯಾರ ಭಾವನೆಗೂ ಧಕ್ಕೆ ತರುತ್ತಿಲ್ಲ. ಮಹಿಷ ದಸರಾ ವಿರೋಧಿಸುವವರು ಇತಿಹಾಸದ ಆಧಾರದಲ್ಲಿ ಬೇಕಿದ್ದರೆ ಚರ್ಚೆಗೆ ಬರಲಿ. ಅವರ ಪುರಾಣದ ಕಥೆಗಳು ನಮಗೆ ಬೇಕಿಲ್ಲ. ಈ ಹಿಂದೆ ಭಗವದ್ಗೀತೆ ಕುರಿತಂತೆಯೂ ಒಂದು ಆರೋಗ್ಯಕರ ಚರ್ಚೆ ಆಗಲೆಂದು ಸಂವಾದ ಏರ್ಪಡಿಸಿದ್ದೆವು. ಉಡುಪಿಯ ಪೇಜಾವರ ಶ್ರೀಗಳು ಇದರಲ್ಲಿ ಭಾಗವಹಿ ಸುವುದಾಗಿ ತಿಳಿಸಿದ್ದರು. ಆದರೆ ಎಲ್ಲಾ ವ್ಯವಸ್ಥೆ ಮಾಡಿಕೊಂಡ ಬಳಿಕ ನಿಷೇಧಾಜ್ಞೆ ಜಾರಿ ಗೊಳಿಸಿ ತಡೆಹಿಡಿಯಲಾಯಿತು. ಇದೀಗ ಅದೇ ರೀತಿ ಮಹಿಷ ದಸರಾ ತಡೆಹಿಡಿದಿದ್ದಾರೆ ಎಂದು ದೂರಿದರು. ದಲಿತ ವೇಲ್‍ಫೇರ್ ಟ್ರಸ್ಟ್ ಕಾರ್ಯದರ್ಶಿ ಚಿಕ್ಕಅನ್ನದಾನಿ, ವಕೀಲ ಮಹೇಶ್, ಲೇಖಕ ಸಿದ್ದಸ್ವಾಮಿ ಮತ್ತಿತರರು ಗೋಷ್ಠಿಯಲ್ಲಿದ್ದರು.