ನಾಳೆಯಿಂದ ದಸರಾ ಯೋಗ ಪ್ರದರ್ಶನ
ಮೈಸೂರು

ನಾಳೆಯಿಂದ ದಸರಾ ಯೋಗ ಪ್ರದರ್ಶನ

September 29, 2019

ಮೈಸೂರು,ಸೆ.28(ಆರ್‍ಕೆ)-ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ವಿವಿಧೆಡೆ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 6ರವರೆಗೆ ಯೋಗ ಪ್ರದರ್ಶನ ಏರ್ಪಡಿಸಲಾಗಿದೆ.

ಮೈಸೂರಿನ ವಾರ್ತಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯೋಗ ದಸರಾ ಉಪಸಮಿತಿ ಅಧ್ಯಕ್ಷ ಡಾ.ಅನಿಲ್ ಥಾಮಸ್ ಹಾಗೂ ಉಪ ವಿಶೇಷಾಧಿಕಾರಿ ಕೆ.ರಮ್ಯ ಅವರು, ಸೆಪ್ಟೆಂಬರ್ 30 ಸಂಜೆ 5ರಿಂದ 8 ಗಂಟೆವರೆಗೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಓವಲ್ ಮೈದಾನದಲ್ಲಿ ಯೋಗ ನೃತ್ಯ ರೂಪಕ ನಡೆಯಲಿದ್ದು ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದರು.

ಅ.1ರಂದು ಬೆಳಿಗ್ಗೆ 8 ರಿಂದ 9 ಗಂಟೆವರೆಗೆ ಕುವೆಂಪುನಗರದ ಸೌಗಂಧಿಕ ಉದ್ಯಾ ನವನದಲ್ಲಿ ನಡೆಯುವ ಯೋಗವಾಹಿನಿ ಕಾರ್ಯಕ್ರಮವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸುವರು. ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಸಿರುವ ಯೋಗ ವಾಹಿನಿ ಯಲ್ಲಿ ಚಾಲನಾ ಕ್ರಿಯೆಗಳು, ಸೂರ್ಯ ನಮಸ್ಕಾರ, ಆಸನಗಳು, ಪ್ರಾಣಾಯಾಮ, ಶವಾಸನ, ಧ್ಯಾನ ಹಾಗೂ ಶಾಂತಿ ಮಂತ್ರ ನಡೆಯಲಿದೆ ಎಂದು ಅವರು ತಿಳಿಸಿದರು.

ಅ.2ರಂದು ಬೆಳಿಗ್ಗೆ 6ರಿಂದ 8ಗಂಟೆವರೆಗೆ ಅರಮನೆ ಆವರಣದಲ್ಲಿ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಯೋಗ ಸಂಭ್ರಮ ಆಯೋಜಿಸಲಾಗಿದ್ದು, ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮ ಉದ್ಘಾಟಿಸುವರು. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ದಸರಾ ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಉದ್ಘಾಟಿಸುವರು. ಅ.4ರಂದು ಬೆಳಿಗ್ಗೆ 6ರಿಂದ 8ಗಂಟೆವೆರೆಗೆ ಅರಮನೆ ಆವರಣದಲ್ಲಿ ಯೋಗ ಸರಪಳಿ, ಅ.5ರಂದು ಬೆಳಿಗ್ಗೆ 8ರಿಂದ 9 ಗಂಟೆವರೆಗೆ ಸೌಗಂ ಧಿಕ ಉದ್ಯಾನವನದಲ್ಲಿ ಸ್ವಚ್ಛ ಸರ್ವೇಕ್ಷಣಾ ಯೋಗ, ಅ.6ರಂದು ಬೆಳಿಗ್ಗೆ 6 ರಿಂದ 8 ಗಂಟೆವರೆಗೆ ಚಾಮುಂಡಿಬೆಟ್ಟದ ತಪ್ಪಲು ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಯೋಗಚಾರಣ ಹಾಗೂ ದುರ್ಗಾ ನಮಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯೋಗ ಪಟುಗಳು, ಯೋಗಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎಲ್ಲಾ ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆರೋಗ್ಯ ಮತ್ತು ಸುಸ್ಥಿರ ಸಮಾಜಕ್ಕೆ ಕೈ ಜೋಡಿಸಿ ಎಂದು ಯೋಗ ದಸರಾ ಉಪಸಮಿತಿ ಪದಾಧಿಕಾರಿ ಗಳು ಮನವಿ ಮಾಡಿದ್ದಾರೆ. ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಲಿ ಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ`www.mysoredasara.gov.in.’ವೆಬ್‍ಸೈಟ್, `yogadasara. [email protected], [email protected]’ ಇ-ಮೇಲ್ ಅಥವಾ ಜಿಲ್ಲಾ ಆಯುಷ್ ಕಚೇರಿ 0821-2512962 ಅನ್ನು ಸಂಪರ್ಕಿಸಲು ಕೋರಲಾಗಿದೆ.

Translate »