ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ: ಸಿ.ಟಿ.ರವಿ
ಹಾಸನ

ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ: ಸಿ.ಟಿ.ರವಿ

March 6, 2019

ಹಾಸನ: ಬಿಜೆಪಿಯಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು. ನಮ್ಮಲ್ಲಿ ಕುಟುಂಬ ರಾಜಕಾರಣವಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಭವನದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಪ್ರಬುದ್ಧರ ಸಭೆಯಲ್ಲಿ ಮಾತ ನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅದೃಷ್ಟದಿಂದ ಪ್ರಧಾನಿ ಆಗಲಿಲ್ಲ. ಅವರ ಸಾಮಥ್ರ್ಯದ ಮೇಲೆ ಆಗಿದ್ದು, 130 ಕೋಟಿ ಜನರಲ್ಲಿ ಯಾರು ಬೇಕಾ ದರೂ ಪ್ರಧಾನಿ ಆಗಬಹುದು. ಆದರೆ ಒಂದೇ ಕುಟುಂಬದ ಸದಸ್ಯರನ್ನು ಪ್ರಧಾನಿ ಯಾಗಿ ಮಾಡುವುದು ನಮ್ಮ ಸಿದ್ಧಾಂತ ವಲ್ಲ. ಅಟಲ್ ಬಿಹಾರಿ ವಾಜಪೇಯಿ ಅವ ರನ್ನು ಉತ್ತಮ ಪ್ರಧಾನಿ ಎಂದು ಕರೆದಿ ದ್ದೆವು. ಪ್ರಸ್ತುತ ಮೋದಿ ಅವರು ಇನ್ನೂ ಉತ್ತಮ ಪ್ರಧಾನಿಯಾಗಿದ್ದಾರೆ ಎಂದರು.

ಕಾಂಗ್ರೆಸ್ ಕುಟುಂಬದ ರಾಜಕಾರಣ ಮಾಡಿಕೊಂಡು ದೇಶದಲ್ಲಿ ಆಳ್ವಿಕೆ ನಡೆ ಸಿದೆ. ಕರ್ನಾಟಕದಲ್ಲಿ ಜೆಡಿಎಸ್‍ನಲ್ಲಿ ಮೊಮ್ಮಕ್ಕಳವರೆಗೂ ಕುಟುಂಬ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ದೇಶಕ್ಕೆ ಯಾರು ಯೋಗ್ಯರು ಎಂಬು ದನ್ನು ಮೊದಲು ಚಿಂತಿಸಬೇಕು. ಆರ್ಥಿಕ ವಾಗಿ ಪ್ರಪಂಚದಲ್ಲಿ ಭಾರತವನ್ನು 6ನೇ ಸ್ಥಾನಕ್ಕೆ ನರೇಂದ್ರ ಮೋದಿಯವರು ತಂದಿ ದ್ದಾರೆ. ಶೂನ್ಯ ಬ್ಯಾಂಕ್ ಖಾತೆಗೆ ಜನ್ ಧನ್ ಯೋಜನೆ ಪ್ರಾರಂಭಿಸಿ ಎಲ್ಲರ ಖಾತೆಗೆ ಹಣ ಹಾಕಿದೆ. ಸಾಕ್ಷರತೆ ಎಂದರೇ ಅಕ್ಷರ ಒಂದೇಯಲ್ಲ. ಬ್ಯಾಂಕ್ ಕಡೆ ಹೆಜ್ಜೆ ಹಾಕದವರಿಗೆಲ್ಲಾ ಬ್ಯಾಂಕ್ ಕಡೆ ಬರು ವಂತೆ ಮಾಡಲಾಗಿದೆ ಎಂದು ತಿಳಿಸಿದರು.

ಬೇಟಿ ಬಚಾವ್ ಯೋಜನೆಯಲ್ಲಿ ಹೆಣ್ಣು ಮಕ್ಕಳ ಯೋಜನೆ ತರಲಾಯಿತು. ಸುಲಭವಾಗಿ ರೈತರಿಗೆ ಗೊಬ್ಬರ ಸಿಗು ವಂತೆ ಮಾಡಲಾಗಿದೆ. ಬೇನಾಮಿ ಆಸ್ತಿ ಮಾಡಿಕೊಳ್ಳುತ್ತಿದ್ದರೂ ಅದಕ್ಕೂ ಕಡಿ ವಾಣ ಹಾಕಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್, ರಾಜ್ಯ ರೈತ ಮೋರ್ಚಾದ ರೇಣುಕುಮಾರ್ ಇತರರು ಪಾಲ್ಗೊಂಡಿದ್ದರು.

Translate »