ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ವೃದ್ಧಾಪ್ಯ ವೇತನ
ಹಾಸನ

ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ವೃದ್ಧಾಪ್ಯ ವೇತನ

March 6, 2019

ಹಾಸನ: ಅಸಂಘಟಿತ ಕಾರ್ಮಿ ಕರು 60 ವರ್ಷ ತುಂಬಿದ ನಂತರ ತಿಂಗಳಿಗೆ ಕನಿಷ್ಠ 3000 ವೃದ್ಧಾಪ್ಯ ವೇತನ ಪಡೆಯ ಬಹುದು ಎಂದು ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಅಪ್ಪಯ್ಯ ಶಿಂದಿಹಟ್ಟಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ಹೇಮಾ ವತಿ ಸಭಾಂಗಣದಲ್ಲಿ ಮಂಗಳವಾರ ಕಾರ್ಮಿಕರ ರಾಜ್ಯ ವಿಮಾ ನಿಗಮದ ವತಿಯಿಂದ ಆಯೋ ಜಿಸಲಾಗಿದ್ದ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರಿಗೆ ವೃದ್ಧಾಪ್ಯ ಪಿಂಚಣಿಗಾಗಿ ಕೇಂದ್ರ ಸರ್ಕಾರವು ಅಸಂ ಘಟಿತ ವಲಯಕ್ಕೆ ಪಿಂಚಣಿ ಯೋಜನೆ ಪ್ರಾರಂಭಿಸಿದೆ. 18 ರಿಂದ 40 ವರ್ಷ ವಯೋ ಮಾನದ ಕಾರ್ಮಿಕರು 55 ರಿಂದ 200 ರೂಪಾಯಿಗಳವರೆಗೆ ಮಾಸಿಕ ವಂತಿಕೆ ಪಾವತಿಸಬೇಕು ಎಂದು ತಿಳಿಸಿದರು.

ಅಸಂಘಟಿತ ಕಾರ್ಮಿಕರಿಗೆ ಒಂದು ಪಿಂಚಣಿ ಯೋಜನೆಯಡಿ ವಂತಿಕೆದಾರರ ಖಾತೆಗೆ ಅಷ್ಟೇ ಪ್ರಮಾಣದ ಮೊತ್ತ ಕೇಂದ್ರ ಸರ್ಕಾರದ ವಂತಿಕೆ ಪಾವತಿಯಾಗು ವುದು. ಎಲ್‍ಐಸಿ ಆಫ್ ಇಂಡಿಯಾ ಪೆನ್ಷನ್ ಫಂಡ್ ಮ್ಯಾನೇಜರ್ ಆಗಿದ್ದು ಪಿಂಚಣಿ ಪಾವತಿಸುವ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.

ಎಲ್.ಐ.ಸಿ ಮುಖ್ಯಾಡಳಿತಾಧಿಕಾರಿ ಎನ್. ಸುಬ್ರಮಣ್ಯ ಮಾತನಾಡಿ, ಅಸಂಘಟಿತ ಕಾರ್ಮಿಕರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರವನ್ನು ಭೇಟಿ ಮಾಡಿ ಪ್ರಧಾನಿ ಯೋಜನೆ (PM-SYM)ನಲ್ಲಿ ನೋಂದಾಯಿಸಿಕೊಳ್ಳ ಬೇಕು. ಮೊದಲ ತಿಂಗಳ ವಂತಿಕೆಯನ್ನು ನಗದಾಗಿ ಪಾವತಿಸಿ ರಶೀದಿ ಪಡೆಯಬೇಕು. ನಂತರ ಸ್ವಯಂ ಡೆಬಿಟ್ ಸೌಲಭ್ಯದ ಮೂಲಕ ಕಡಿತಗೊಳಿಸಿ ಪಾವತಿ ಮಾಡಿಕೊಳ್ಳಲಾಗು ವುದು. ಎಲ್ಲಾ ಸಾಮಾನ್ಯ ಸೇವಾ ಕೇಂದ್ರ ಗಳಲ್ಲಿ ದಾಖಲಾತಿ ನಡೆಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಲ್‍ಐಸಿ ಶಾಖಾ ಆಡಳಿತಾಧಿಕಾರಿ ಆರ್.ಕುಮಾರ್, ಹಿರಿಯ ಕಾರ್ಮಿಕ ಪರಿವೀಕ್ಷಕ ಎಂ.ಬಾಲ ಕೃಷ್ಣ, ಪಿಎಫ್ ಪರಿವೀಕ್ಷಕ ಅನಿಲ್ ಕುಮಾರ್, ಕಾರ್ಮಿಕ ಪರಿವೀಕ್ಷಕ ಆನಂದ ರಾಮ್ ಹಾಜರಿದ್ದರು.

Translate »