ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ವಿವಿಧ ದಸರಾ ಸಾಂಸ್ಕøತಿಕ ಕಾರ್ಯಕ್ರಮ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ವಿವಿಧ ದಸರಾ ಸಾಂಸ್ಕøತಿಕ ಕಾರ್ಯಕ್ರಮ

September 30, 2019

ಮೈಸೂರು, ಸೆ. 29- ಮೈಸೂರು ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ದಸರಾ ಅಂಗವಾಗಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮ, ಫುಡ್ ಕೋರ್ಟ್‍ನ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಾಳೆ (ಸೋಮವಾರ) ಸಂಜೆ 5ಕ್ಕೆ ನೆರವೇರಿಸಲಿದ್ದಾರೆ. ಶಾಸಕರಾದ ಜಿ.ಟಿ.ದೇವೇಗೌಡ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾ ಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥಯ್ಯ ಭಾಗವಹಿಸುವರು.

ಕಲಾಪ್ರದರ್ಶನ, ಸಾಂಸ್ಕೃತಿಕ ಪ್ರದರ್ಶನ: ದಸರಾ ಮಹೋತ್ಸವದ ಅಂಗವಾಗಿ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಕರಕುಶಲ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಕಲಾ ವೈಭವ ಆರಂಭಗೊಂಡಿದೆ. ಈ ಕಾರ್ಯ ಕ್ರಮದ ಅಂಗವಾಗಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋ ಜನೆಗೊಂಡಿವೆ. ಜತೆಗೆ, ಅರ್ಬನ್ ಹಾತ್ ಆವರಣದಲ್ಲಿ ಫುಡ್ ಕೋರ್ಟ್ ಆರಂಭವಾಗುತ್ತಿದೆ. ನಾಡಿನ ಕಲೆ ಸಂಸ್ಕೃತಿಯನ್ನು ಬಿಂಬಿ ಸುವ ಈ ಕಾರ್ಯಕ್ರಮಗಳನ್ನು ಅರ್ಬನ್ ಹಾತ್, ಅನಿಕೇತನ ಸಂಸ್ಥೆಯ ಸಹಯೋಗದಲ್ಲಿ ನಡೆಸುತ್ತಿದೆ. ಪ್ರಸ್ತುತ ಪ್ರದರ್ಶನವು ಮೈಸೂರಿನ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವ ಮೂಲಕ ನಾಡಿನ ವೈವಿಧ್ಯ ಮಯ ಸಂಸ್ಕೃತಿಯನ್ನು ಅನಾವರಣಗೊಳಿಸಲಿದೆ.

ಸಾಂಪ್ರದಾಯಿಕ ಚಿತ್ರಕಲಾ ಪ್ರದರ್ಶನ: ಚಿನ್ನದ ಲೇಪನದೊಂದಿಗೆ ವರ್ಣಮಯವಾದ ಕಲಾ ಶೈಲಿಯಿಂದ ಮೂಡಿಬಂದಿರುವ, ಆಯ್ದ ಕಲಾವಿದರು ರಚಿಸಿರುವ ಸಾಂಪ್ರದಾಯಿಕ ಮೈಸೂರು ಶೈಲಿಯ ಚಿತ್ರಕಲೆಗಳನ್ನು ಪ್ರದರ್ಶಿಸಲಾಗುತ್ತದೆ.

ಮೈಸೂರು ಇನ್ಲೇ ಆಟ್ರ್ಸ್: ಮರದ ತುಂಡುಗಳನ್ನು ಜೋಡಿಸಿ ರಚಿಸಿರುವ ಇನ್ಲೇ ಆರ್ಟ್‍ಗಳು ಮನ ಸೆಳೆಯಲಿವೆ. ಮೈಸೂರಿನ ಹಳೆಯ ಛಾಯಾಚಿತ್ರಗಳ ಪ್ರದರ್ಶನವೂ ಮನ ಸೆಳೆಯಲಿದೆ.

ಸಾಂಪ್ರದಾಯಿಕ ಬೊಂಬೆ ಜೋಡಣೆ: ರಾಮಾಯಣ, ಮಹಾಭಾರತದ ಪಾತ್ರಗಳನ್ನು ಹೊಸ ತಲೆಮಾರಿನ ಚಿಣ್ಣರಿಗೆ ಪರಿಚಯಿಸುವ ಸಾಂಪ್ರದಾ ಯಿಕ ಬೊಂಬೆಗಳ ಆಕರ್ಷಕ ಜೋಡಣೆಯನ್ನೂ ಮಾಡಿ ಪ್ರದರ್ಶಿಸಲಾಗುತ್ತಿದೆ.

ಮೇಜಿನಾಟ: ಹುಲಿ ಕುರಿ, ಪರಮಪದ, ಅಳಿಗುಳಿಮನೆ, ಚೌಕಾಬಾರ ಮೊದಲಾದ ಸಾಂಪ್ರದಾಯಿಕ ಆಟಿಕೆಗಳನ್ನೂ ನೋಡಬಹುದು. ಮೈಸೂರು ಮಲ್ಲಿಗೆ ದಂಡೆ, ಮೊಗ್ಗಿನ ಜಡೆ, ಮಲ್ಲಿಗೆ ಹಾರವೂ ಪ್ರದರ್ಶನದ ಆಕರ್ಷಣೆಗಳಲ್ಲಿ ಒಂದಾಗಿರಲಿದೆ.

ಮೈಸೂರು ವೀಳ್ಯದೆಲೆ: ಮೈಸೂರು ವೀಳ್ಯದೆಲೆಯ ಸೊಗಡನ್ನು ಪ್ರದರ್ಶಿಸಿ ಪರಿಚಯಿಸುವ ಕಾರ್ಯಕ್ರಮವೂ ನಡೆಯಲಿದೆ. ಪ್ರದರ್ಶನದಲ್ಲಿ ಗುಡಿ ಕೈಗಾರಿಕೆ ಹಾಗೂ ಕಲಾವಿದರಿಂದ ಸಿದ್ಧಪಡಿಸಲಾದ ಕರಕುಶಲ ಮತ್ತು ಕೈಮಗ್ಗದ ಉತ್ಪನ್ನಗಳ ಪ್ರದರ್ಶನ, ಮಾರಾಟದ ವ್ಯವಸ್ಥೆಯೂ ಇದೆ.

ಮೈಸೂರು ರಸಪಾಕ: ಮೈಸೂರು ಮಸಾಲೆ ದೋಸೆ, ಮೈಸೂರು ಪಾಕ್ ಸೇರಿದಂತೆ ಬಾಯಲ್ಲಿ ನೀರೂರಿಸುವ ಸಾಂಪ್ರದಾಯಿಕ ಖಾದ್ಯಗಳೂ ಲಭ್ಯ ವಿರುತ್ತದೆ. ಪ್ರದರ್ಶನದ ಸಾಂಸ್ಕೃತಿಕ ಸಂಜೆಯಲ್ಲಿ ಮೈಸೂರಿನ ಹಲವು ಪ್ರತಿಭೆಗಳು ವೀಕ್ಷಕರನ್ನು ರಂಜಿಸಲಿದ್ದಾರೆ. ಹಿನ್ನೆಲೆ ಗಾಯಕರಾದ ಮೈಸೂ ರಿನ ನಿತಿನ್ ಶಾಸ್ತ್ರಿ ಹಾಗೂ ತಂಡದವರಿಂದ ಸುಗಮ ಸಂಗೀತ, ಬಿಯಾಂಡ್ ತಾಳಾಸ್ ತಂಡದವರಿಂದ ನೃತ್ಯ ಪ್ರದರ್ಶನ, ಚಲನಚಿತ್ರ ಹಾಸ್ಯ ಕಲಾವಿದ ಹಾಗೂ ಮಿಮಿಕ್ರಿ ಕಲಾವಿದ ಮಹೇಶ್ ಹಾಗೂ ತಂಡದವರಿಂದ ಹಾಸ್ಯ ಸಂಜೆ, ನಮ್ಮೂರ ಥಿಯೇಟರ್ ತಂಡದವರಿಂದ ನಗೆ ನಾಟಕ, ಸರಸ್ವತಿ ಲಕ್ಷ್ಮಿ ಸಹೋದರಿಯರಿಂದ ಲಘು ಸಂಗೀತ ಹಾಗೂ ಡೊಳ್ಳು ಕುಣಿತ, ಕಂಸಾಳೆ, ಜಡೆ ಕೋಲಾಟ, ಕೊರವರ ನೃತ್ಯ ಪ್ರದರ್ಶನಗಳಿವೆ.

Translate »