ಸಚಿವ ತನ್ವೀರ್ ಸೇಠ್ 10 ಕೋಟಿ ಆಸ್ತಿ ಒಡೆಯ
ಮೈಸೂರು

ಸಚಿವ ತನ್ವೀರ್ ಸೇಠ್ 10 ಕೋಟಿ ಆಸ್ತಿ ಒಡೆಯ

April 26, 2018

ಮೈಸೂರು: ಮೈಸೂರಿನ ನರ ಸಿಂಹರಾಜ ಕ್ಷೇತ್ರ ದಿಂದ ಪುನ ರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಸಚಿವ ತನ್ವೀರ್ ಸೇಠ್ ಅವರ ಆಸ್ತಿ ಮೌಲ್ಯ 10 ಕೋಟಿ. ಚುನಾವಣಾಧಿಕಾರಿಗಳ ಮುಂದೆ 2013 ರಲ್ಲಿ ಅವರು 5.08 ಕೋಟಿ ರೂ.ಗಳ ಆಸ್ತಿ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದರು. ಹೊಸದಾಗಿ ಯಾವುದೇ ಆಸ್ತಿಯನ್ನು ಅವರು ಖರೀದಿ ಮಾಡದೇ ಇದ್ದರೂ ಸ್ಥಿರಾಸ್ತಿಗಳು ಹಾಗೂ ಚಿನ್ನಾಭರ ಣದ ಮಾರುಕಟ್ಟೆ ದರ ಹೆಚ್ಚಳವಾಗಿರುವ ಕಾರಣ ಅವರ ಆಸ್ತಿ ಹೆಚ್ಚಾಗಿದೆ ಅಷ್ಟೆ.

ವಿವರ: ತನ್ವೀರ್ ಸೇಠ್, ಪತ್ನಿ ಸೆಮೀರಾ ಬಾಯ್, ಅವಲಂಬಿತರಾದ ಪರ್ವೀನ್ ಸೇಠ್ ಮತ್ತು ಜಾವೀದ್ ಸೇಠ್ ವಾರ್ಷಿಕ ಆದಾಯ 33.55 ಲಕ್ಷಗಳಷ್ಟಿದೆ.

ತನ್ವೀರ್ ಸೇಠ್ ಕೈಯ್ಯಲ್ಲಿರುವ ನಗದು 1.30 ಲಕ್ಷ. ಅವರ ಪತ್ನಿ ಬಳಿ 3.85 ಲಕ್ಷ ಹಾಗೂ ಇಬ್ಬರು ಅವಲಂಬಿತರ ಬಳಿ ಒಟ್ಟು 3.50 ಲಕ್ಷ ಇದೆ.

ತನ್ವೀರ್ ಸೇಠ್ ಹೆಸರಿನಲ್ಲಿ ಒಂದು ಮೋಟಾರ್ ಬೈಕ್, ಟಯೋಟಾ ಕೊರೊಲ್ಲ ಮತ್ತು ಇನ್ನೋವಾ ಕಾರು ಗಳಿವೆ. ಪತ್ನಿ ಹೆಸರಿನಲ್ಲಿ ಮಾರುತಿ ಸಿಲೆರಿಯೋ ಕಾರಿದ್ದು, ಅವಲಂಬಿತ ಹೆಸರಿನಲ್ಲಿ ಹೊಂಡಾ ಆಕ್ಟೀವಾ ಸ್ಕೂಟರ್ ಮತ್ತು ಮಾರುತಿ ಸ್ವಿಫ್ಟ್ ಕಾರು ಇದೆ. 250 ಗ್ರಾಂ ಚಿನ್ನ ತನ್ವೀರ್ ಬಳಿ ಇದ್ದರೆ, ಅವರ ಪತ್ನಿ 480 ಗ್ರಾಂ ಹಾಗೂ ಅವ ಲಂಬಿತರು 50 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಇದರ ಮೌಲ್ಯವೂ ಹೆಚ್ಚಳ ವಾಗಿದೆ. ಬೆಂಗಳೂರಿನ ಹೊಸೂರು ರಸ್ತೆ ಯಲ್ಲಿ ವಾಣ ಜ್ಯ ಕಟ್ಟಡವಿದ್ದು, ಅದನ್ನು ಅವರು 68,23,245 ರೂ.ಗಳಿಗೆ ಖರೀದಿ ಸಿದ್ದರು. ಆದರೆ ಈಗ ಅದರ ಮಾರುಕಟ್ಟೆ ದರ 1.50 ಕೋಟಿ. ಮೈಸೂರಿನ ಬೆಳ ವಾಡಿ ಕೈಗಾರಿಕಾ ಪ್ರದೇಶದಲ್ಲಿ 60 ಸಾವಿರ ಚದು ರಡಿಯ ವಾಣ ಜ್ಯ ಸಂಕಿರಣವನ್ನು ಹೊಂದಿದ್ದು, ಹಿಂದೆ ಅದನ್ನು ಅವರು 21 ಲಕ್ಷ ರೂ. ಗಳಿಗೆ ಖರೀದಿಸಿದ್ದರು. ಆದರೆ ಅದರ ಇಂದಿನ ಮಾರುಕಟ್ಟೆ ದರ 2 ಕೋಟಿ.

ಮೈಸೂರಿನ ಯಲಹಂಕದಲ್ಲಿ ತನ್ವೀರ್ ಅವಲಂಬಿತರು 65.10 ಲಕ್ಷ ರೂ.ಗಳಿಗೆ ಪ್ಲಾಟ್‍ವೊಂದನ್ನು ಖರೀದಿಸಿದ್ದು, ಅದರ ಮಾರುಕಟ್ಟೆ ಮೌಲ್ಯ 1 ಕೋಟಿ ರೂ. ಮೈಸೂರಿನ ಉದಯಗಿರಿಯಲ್ಲಿ ತನ್ವೀರ್ ಹೆಸರಿನಲ್ಲಿ ವಾಸದ ಮನೆ ಇದ್ದು, ಅದನ್ನು 17.50 ಲಕ್ಷ ರೂ.ಗಳಿಗೆ ಖರೀದಿಸಲಾ ಗಿತ್ತು. ಅದರ ಇಂದಿನ ಮಾರುಕಟ್ಟೆ ದರ 80 ಲಕ್ಷ ರೂ.ಗಳಾಗಿದೆ. ಅವರ ಪತ್ನಿ ಹೆಸರಿನಲ್ಲಿರುವ ಮನೆಯು 28.60 ಲಕ್ಷ ರೂ.ಗಳಿಗೆ ಖರೀದಿಸಲಾಗಿದ್ದು, ಅದರ ಮೌಲ್ಯ ಈಗ 1.20 ಕೋಟಿ ರೂ.ಗಳಿಗೇ ರಿದೆ. ಬೆಂಗಳೂರಿನ ಹೆಚ್‍ಬಿಆರ್ 1ನೇ ಹಂತದಲ್ಲಿ ಅವರು ಖರೀದಿಸಿದ್ದ 23,59, 095 ಮೌಲ್ಯದ ಆಸ್ತಿಯ ಮೌಲ್ಯ ಇಂದಿನ ಮಾರುಕಟ್ಟೆ ದರದಲ್ಲಿ 30 ಲಕ್ಷಗಳಾಗಿವೆ. ಒಟ್ಟಾರೆ 2013ರಿಂದ ಈವರೆವಿಗೂ ತನ್ವೀರ್ ಸೇಠ್ ಹಾಗೂ ಅವರ ಕುಟುಂಬದವರು ಯಾವುದೇ ಹೊಸ ಆಸ್ತಿ ಖರೀದಿಸದಿ ದ್ದರೂ, ಮಾರುಕಟ್ಟೆ ದರ ಹೆಚ್ಚಳದಿಂ ದಾಗಿ ಅವರ ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ.

Translate »