ದಾಖಲೆಯಿಲ್ಲದ 77 ಲಕ್ಷ ರೂ. ನಗದು ವಶ
ಹಾಸನ

ದಾಖಲೆಯಿಲ್ಲದ 77 ಲಕ್ಷ ರೂ. ನಗದು ವಶ

April 26, 2018

ಹಾಸನ: ಕ್ಷೇತ್ರ ಚುನಾವಣಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೂಕ್ತ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 77 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಹಾಸನ ಹೊರವಲಯದ ಚನ್ನಪಟ್ಟಣ ಬಳಿ ಹಣ ಸಮೇತ ವಾಹನ ವಶಪಡಿಸಿಕೊಳ್ಳಲಾಗಿದೆ. ಆದರೆ ಈ ವೇಳೆ ಹಣ ಸಾಗಾಟದಾರರು ಎ.ಟಿ.ಎಂ. ಗಳಿಗೆ ಹಾಕಲೆಂದು ಹಣ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಸೂಕ್ತ ದಾಖಲೆಗಳಿಲ್ಲದೆ ಹಣ ಸಾಗಾಟ ಮಾಡಿದ್ದ ರಿಂದ ಹಣವನ್ನು ಜಪ್ತಿ ಮಾಡಲಾಗಿದೆ.

ಸ್ಥಳಕ್ಕೆ ಐಟಿ ಹಾಗೂ ಎಸ್‍ಬಿಐ ಅಧಿಕಾರಿಗಳು ಆಗಮಿಸಿದ್ದು, ಎಂಎಫ್ ಸಿಎಸ್ ಕಂಪನಿ ಮೂಲಕ ಎಟಿಎಂಗಳಿಗೆ ಹಣ ಹಾಕಲು ಗುತ್ತಿಗೆ ನೀಡಿದ್ದಾಗಿ ಹೇಳಿದ್ದಾರೆ. ಆದರೆ ಪ್ರಕರಣವನ್ನು ಚುನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.

Translate »