ಕಡೇ ದಿನ: ಅಭ್ಯರ್ಥಿಗಳಿಂದ ಉಮೇದುವಾರಿಕೆ
ಹಾಸನ

ಕಡೇ ದಿನ: ಅಭ್ಯರ್ಥಿಗಳಿಂದ ಉಮೇದುವಾರಿಕೆ

April 25, 2018

ಹಾಸನ: ವಿಧಾನಸಭೆಗೆ ಸ್ಪರ್ಧಿ ಸುವ ಹಿನ್ನೆಲೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಜಿಲ್ಲಾದ್ಯಂತ ವಿವಿಧ ಕ್ಷೇತ್ರಗಳಿಂದ ಉಮೇದುವಾರಿಕೆ ಗಳು ಸಲ್ಲಿಕೆಯಾದವು.

ಹಾಸನ ವಿಧಾನ ಸಭಾ ಕ್ಷೇತ್ರ: ಬಿಜೆಪಿ ಯಿಂದ ಪ್ರೀತಮ್ ಜೆ.ಗೌಡ ಅವರು ಭಾರೀ ಜನಸಾಗರದೊಂದಿಗೆ ತೆರೆದ ವಾಹನ ದಲ್ಲಿ ಮೆರವಣ ಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನೆನ್ನೆಯಷ್ಟೇ ಜೆಡಿಎಸ್-ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನ ದೊಂದಿಗೆ ನಾಮಪತ್ರ ಸಲ್ಲಿಸಿದ್ದವು. ಜೊತೆಗೆ ಬಿಜೆಪಿ ಅಭ್ಯರ್ಥಿಯೂ ಕೇಲವ ರೊಂದಿಗೆ ಪಾಲ್ಗೊಂಡು ನಾಮಪತ್ರ ಸಲ್ಲಿಸಿ ದ್ದರು. ಆದರೆ ಇಂದು ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿ ಗಳೊಂದಿಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಬಿಜೆಪಿ ಕಾರ್ಯ ಕರ್ತರ ಜನಸ್ತೋಮವೇ ಸೇರಿತು. ನಂತರ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮೆರವಣ ಗೆ ಹೊರಟ ಪ್ರೀತಮ್ ಜೆ.ಗೌಡ ಸಾಲಗಾಮೆ ರಸ್ತೆ ಗೇಟ್ ಮೂಲಕ, ಸಹ್ಯಾದ್ರಿ ಚಿತ್ರಮಂದಿರ, ಮಹಾವೀರ ವೃತ್ತ, ಹಳೇ ಬಸ್‍ನಿಲ್ದಾಣ, ಎನ್‍ಆರ್ ವೃತ್ತ ಹಾಗೂ ಬಿಎಂ ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮೆರವಣ ಗೆ ವೇಳೆ ಸಂಚಾರ ಅಸ್ತವ್ಯಸ್ತವಾಯಿತು. ವಾಹನ ಸವಾರÀರು, ಪರದಾಡಿದರು. ತುರ್ತು ಚಿಕಿತ್ಸಾ ವಾಹನವು ಕಷ್ಟಪಟ್ಟು ತೆರಳಬೇಕಾಯಿತು.
ಬೃಹತ್ ಮೆರವಣ ಗೆ ಹಿನ್ನೆಲೆ ಮುನ್ನೆ ಚ್ಚರಿಕಾ ಕ್ರಮವಾಗಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೆರವಣ ಗೆ ಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್, ಮುಖಂಡ ಎಂ.ಎಸ್. ಕೃಷ್ಣೇಗೌಡ, ಮಾಜಿ ಶಾಸಕ ಬಿ.ವಿ.ಕರೀಗೌಡ, ನಗರಾಧ್ಯಕ್ಷ ಶೋಭಾನ್ ಬಾಬು, ಲೋಹಿತ್ ಕುಂದೂರು, ವೇಣು ಗೋಪಾಲ್ ಇತರರಿದ್ದರು.

ಅರಕಲಗೂಡು ವಿಧಾನಸಭಾ ಕ್ಷೇತ್ರ: ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಗೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಪಟ್ಟಣಕ್ಕೆ ಭಾರೀ ಮೆರವಣ ಗೆ ಮೂಲಕ ಆಗಮಿಸಿದ ಸಚಿವರು, ತಾಲೂಕು ಮಿನಿ ವಿಧಾನಸೌಧಕ್ಕೆ ತೆರಳಿ ಚುನಾವಣಾ ಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಇದಕ್ಕೂ ಮುನ್ನ ಕೊಣನೂರಿನಿಂದ ಅರಕಲಗೂಡಿಗೆ ಸಾಗುವ ಮಾರ್ಗ ಮಧ್ಯೆ ರಾಮನಾಥಪುರ ಶ್ರೀ ಬಸವೇಶ್ವರ ವೃತ್ತದಲ್ಲಿ ಬೆಂಬಲಿಗರು. ಅಭಿಮಾನಿಗಳು ಬೈಕ್ ಮೂಲಕ ಅಭೂತಪೂರ್ವ ಸ್ವಾಗತ ನೀಡಿ ದರು. ರಾಮನಾಥಪುರದ ಶ್ರೀ ರಾಮೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಅರಕಲಗೂಡಿಗೆ ನಾಮಪತ್ರ ಸಲ್ಲಿಸಲು ಬೈಕ್ ರ್ಯಾಲಿ ಮೂಲಕ ಸಾಗಿದರು. ಈ ವೇಳೆ ಪುತ್ರ ಜಿಪಂ ಸದಸ್ಯ ಮಂತರ್‍ಗೌಡ, ಮುಖಂಡರಾದ ಮಹೇಂದ್ರ ಕುಮಾರ್, ಬಿ.ಕೆ.ಪ್ರಕಾಶ್, ಬಿ.ಜೆ.ಚೇತನ್ ಕುಮಾರ್, ಬಿ.ಪಿ.ಮಹದೇವ್, ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷ ಕರೀಗೌಡ, ಸದಸ್ಯ ರವಿ, ವ್ಯಾನ್ ರವಿ, ಬೂದನೂರು ಅಣ್ಣೇಗೌಡ, ಹೋಬಳಿ ಅಧ್ಯಕ್ಷ ಜಿ.ಸಿ.ಮಂಜೇಗೌಡ, ಎಸ್.ಕುಮಾರ್, ಹನ್ಯಾಳು ಗ್ರಾಪಂ ಮಾಜಿ ಅಧ್ಯಕ್ಷ ಗುಂಡಣ್ಣ ಇತರರು ಸಾಥ್ ನೀಡಿದರು.

ಬೇಲೂರು ವಿಧಾನ ಸಭಾ ಕ್ಷೇತ್ರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ನಾಮಪತ್ರ ಸಲ್ಲಿಸಿದರು.
ಶ್ರೀಚನ್ನಕೇಶವಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ದೇವಾ ಲಯದ ಆವರಣದಿಂದ ನಿರೀಕ್ಷೆಗೂ ಮೀರಿದ ಸಾವಿರಾರು ಸಂಖ್ಯೆಯ ಕಾರ್ಯಕರ್ತ ರೊಂದಿಗೆ ತೆರೆದ ವಾಹನದಲ್ಲಿ ಮೆರವಣ ಗೆ ಮೂಲಕ ತೆರಳಿದರು. ಕೆಂಪೇಗೌಡ ವೃತ್ತದ ಬಳಿ ಮಾಗಡಿ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತಾಲೂಕು ವಿಧಾನ ಸಭೆಗೆ ಆಗಮಿಸಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ.ರವಿ ಅವರೊಂದಿಗೆ ಚುನಾವಣಾಧಿಕಾರಿ ಡಿ.ಆರ್.ನಾಗೇಶ್‍ಗೆ ಹುಲ್ಲಹಳ್ಳಿ ಸುರೇಶ್ ನಾಮಪತ್ರ ಸಲ್ಲಿಸಿ ದರು. ಈ ವೇಳೆ ಬಿಜೆಪಿ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ನವಿಲೆಅಣ್ಣಪ್ಪ, ಸದಸ್ಯ ಜಿ.ಕೆ.ಕುಮಾರ್, ಎಂಎಲ್‍ಸಿ ಪ್ರಾಣೇಶ್ ಸಾಥ್ ನೀಡಿದರು. ವಿಧಾನಸಭಾ ಚುನಾ ವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಆರ್ ಪುಣ್ಯಕೋಟಿ ಟ್ರಸ್ಟ್ ಸಂಸ್ಥಾಪಕ ಬಿ.ಡಿ. ತೊಳಚಾನಾಯಕ್ ಅಸಂಖ್ಯಾತ ಬೆಂಬಲಿ ಗರೊಂದಿಗೆ ಮೆರವಣ ಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಗೋವಿಂದನಾಯಕ್, ಗ್ರಾಪಂ ಸದಸ್ಯ ಕುಮಾರನಾಯಕ್, ಸುರೇಶ್ ನಾಯಕ್, ದಯಾನಂದ್, ಶಿವಣ್ಣ ಇತರರಿದ್ದರು.

ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರ; ಬಿಜೆಪಿ ಅಭ್ಯರ್ಥಿ ಎಂ.ಎನ್.ರಾಜು ಇಂದು ಬೆಂಬಲಿಗರೊಂದಿಗೆ ಉಮೇದು ವಾರಿಕೆ ಸಲ್ಲಿಸಿದರು. ಶ್ರೀ ಲಕ್ಷ್ಮಿ ನರಸಿಂಹ ದೇಗುಲ ದಲ್ಲಿ ಪೂಜೆ ಸಲ್ಲಿಸಿ, ನಂತರ ಮೆರವಣ ಗೆ ಯಲ್ಲಿ ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ತಬಸ್ಸುಮ್ ಜಹೇರಾಗೆ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ರವಿ ಕಮ್ಮರಗಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಪಟೇಲ್, ಜಿಲ್ಲಾ ಎಸ್ಸಿ ಘಟಕದ ಪ್ರಧಾನ ಕಾರ್ಯ ದರ್ಶಿ ದಿವಾಕರ್, ಉಪಾಧ್ಯಕ್ಷ ಮುತ್ತು ರಾಜ್, ಹಿರಿಯ ಬಿಜೆಪಿ ಮುಖಂಡ ಕೃಷ್ಣಪ್ಪ, ನಾಗೇಂದ್ರ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರ: ಚನ್ನರಾಯಪಟ್ಟಣದಲ್ಲಿ ಶ್ರವಣಬೆಳಗೊಳ ಕ್ಷೇತ್ರದಿಂದ ಬಿಜೆಪಿಯಿಂದ ಅಭ್ಯರ್ಥಿ ಯಾಗಿ ಶಿವನಂಜೇಗೌಡ ನಾಮ ಪತ್ರ ಸಲ್ಲಿಸಿದರು. ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿ ಕಚೇರಿ ಯಿಂದ ಕಾರ್ಯ ಕರ್ತರೊಂದಿಗೆ ಬೃಹತ್ ಮೆರವಣ ಗೆ ಹೊರಟ ಅವರು ಪಕ್ಷದ ಮುಖಂಡರ ಜೊತೆ ನಾಮಪತ್ರವನ್ನು ಸಲ್ಲಿಸಿದರು.

Translate »