ಸೋಲಿನ ಭಯದಿಂದ ಸಿಎಂ ಬಾದಾಮಿಗೆ ಪಲಾಯನ ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್
ಮೈಸೂರು

ಸೋಲಿನ ಭಯದಿಂದ ಸಿಎಂ ಬಾದಾಮಿಗೆ ಪಲಾಯನ ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್

April 25, 2018

ಕೆ.ಆರ್.ನಗರ: ನುಡಿದಂತೆ ನಡೆದ ಸರ್ಕಾರ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲುವ ಭಯದಿಂದ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡಿದ್ದು, ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೇಗೆ ಸಾಧ್ಯ? ಎಂದು ಶಾಸಕ ಸಾ.ರಾ. ಮಹೇಶ್ ಪ್ರಶ್ನಿಸಿದರು.

ಕಸಬಾ ಹೋಬಳಿಯ ಮೂಲೆಪೆಟ್ಲು ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನಾನು 10 ವರ್ಷ ಗಳ ಅಧಿಕಾರಾವಧಿಯಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದು, ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದ ರಾಮಯ್ಯನವರು ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿದರೂ ವಿಧಾನ ಸೌಧದ ಒಳಗೆ ಹೋರಾಟ ಮಾಡಿ ಅನು ದಾನ ತಂದು ಅಭಿವೃದ್ದಿಗೆ ಶ್ರಮಿಸಿದ್ದೇನೆ. ಜೊತೆಗೆ ಅತಿ ಕಡು ಬಡವರು ಹಿಂದುಳಿದ ವರ್ಗದವರ ಏಳಿಗೆಗೆ ಸ್ವಂತ ಹಣವನ್ನು ನೀಡುತ್ತಿದ್ದು, ಇದು ನನ್ನ ಗೆಲುವಿಗೆ ಸಹಕಾರವಾಗಲಿದೆ ಎಂದರು.

ಕೆ.ಆರ್.ನಗರದಿಂದ ಮೈಸೂರಿಗೆ ಹೋಗಲು ಪರದಾಡುತ್ತಿದ್ದ ನೌಕರರು ಮತ್ತು ಕಾರ್ಮಿಕರು ಹಾಗೂ ರೈತರಿಗೆ ಕೇವಲ 15ನಿಮಿಷದಲ್ಲಿ ತಲುಪಲು ಅನುಕೂಲ ವಾಗುವಂತೆ ಸಾಗರಕಟ್ಟೆ-ಕೆ.ಆರ್.ನಗರದ ರಸ್ತೆಗೆ 4 ಕೋಟಿ 40 ಲಕ್ಷ ಅನುದಾನವನ್ನು ನೀಡಲಾಗಿದ್ದು, ಚುನಾವಣೆ ಮುಗಿದ ನಂತರ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.

ಪ್ರಚಾರದ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬೆಳ್ಳೂಳಿ ಸಿದ್ದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎನ್.ವೆಂಕಟೇಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಎಂ.ಕೆ. ಮಹದೇವ, ಕಮಲ, ಧರ್ಮ, ದೇವೇಗೌಡ, ದಿವಾಕರ್, ಸಿದ್ದಪ್ಪ, ಎಂ.ಕೆ. ಲೋಕೆಶ್, ಪಾಂಡುರಂಗ, ಪುಟ್ಟರಾಜು, ಸುರೇಶ್ ಮತ್ತು ಅಭಿ ಇನ್ನಿತರರು ಹಾಜರಿದ್ದರು.

Translate »