ಚೆಕ್‍ಪೋಸ್ಟ್‍ಗಳಲ್ಲಿ ಸರ್ಕಾರಿ ವಾಹನಗಳನ್ನೂ ಪರಿಶೀಲಿಸಿ
ಹಾಸನ

ಚೆಕ್‍ಪೋಸ್ಟ್‍ಗಳಲ್ಲಿ ಸರ್ಕಾರಿ ವಾಹನಗಳನ್ನೂ ಪರಿಶೀಲಿಸಿ

April 19, 2018

ಹಾಸನ: ಜಿಲ್ಲೆಯಾದ್ಯಂತ ಚೆಕ್ಪೋಸ್ಟ್ ಗಳಲ್ಲಿ ಸರ್ಕಾರಿ ವಾಹನಗಳು ಸೇರಿ ದಂತೆ ಎಲ್ಲಾ ವಾಹನಗಳನ್ನು ಕಡ್ಡಾಯ ವಾಗಿ ತಪಾಸಣೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಎಲ್ಲಾ ಕ್ಷೇತ್ರಗಳ ಚುನಾವಣಾ ಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸೆಕ್ಟರ್ ಅಧಿಕಾರಿಗಳೊಂದಿಗೆ ಸಭೆ ಹಾಗೂ ವೀಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾಧಿಕಾರಿ ವಾಹನವು ಸೇರಿದಂತೆ ಎಲ್ಲಾ ಅಧಿಕಾರಿ ಗಳ ವಾಹನಗಳನ್ನು ತಪಾಸಣೆಗೆ ಒಳಪಡಬೇಕು. ಅಧಿಕಾರಿಗಳು ಇದಕ್ಕೆ ಸಹಕಾರ ನೀಡಿ ಸ್ವಯಂ ತಪಾ ಸಣೆಗೆ ಒಳಪಡಬೇಕು. ಇದರಿಂದ ಸಾರ್ವಜನಿಕರಿಗೂ ಪಾರದರ್ಶಕ ಚುನಾವಣೆ ಬಗ್ಗೆ ಒಳ್ಳೆಯ ಸಂದೇಶ ಹೋಗುತ್ತದೆ ಎಂದರು.

ಎಲ್ಲಾ ಚೆಕ್ಪೋಸ್ಟ್ ಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ನಗದು ವಶ ಪಡಿಸಿಕೊಳ್ಳುವ ಸಂದರ್ಭದಲ್ಲಿ ಸರಿ ಯಾಗಿ ಲೆಕ್ಕ ಇಟ್ಟು ವರದಿ ಮಾಡ ಬೇಕು. ಅಕ್ರಮ ಹಣ ಮದ್ಯ ಸಾಗಾಣೆಗೆ ಒಂದಿಷ್ಟೂ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ  ನಿರ್ದೇಶನ ನೀಡಿದರು. ಎಲ್ಲಾ ಚುನಾವಣಾಧಿಕಾರಿ ಗಳು, ಸಹಾಯಕ ಚುನಾವಣಾಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ಮತಗಟ್ಟೆಗಳಿಗೆ ಭೇಟಿ ನೀಡಿ, ಅವುಗಳ ಸ್ಥಿತಿಗತಿ ಗಳನ್ನು ಪರಿಶೀಲಿಸಬೇಕು. ಇನ್ನೂ ದುರಸ್ತಿಯಾಗಬೇಕಿ ರುವ ಮತಗಟ್ಟೆಗಳ ಬಗ್ಗೆ ಕೂಡಲೇ ಮಾಹಿತಿ ಒದಗಿಸ ಬೇಕು. ಕಾರ್ಯದಲ್ಲಿ ಲೋಪವಾದರೆ ಗ್ರಾಮ ಲೆಕ್ಕಿ ಗರನ್ನು ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಹೊಳೆನರಸೀಪುರ ವೆಚ್ಚ ಸೂಕ್ಷ್ಮ ಕ್ಷೇತ್ರ ಎಂದು ಈಗಾಗಲೇ ಅಲ್ಲಿಗೆ ಸಿಆರ್ಪಿಎಫ್ ತಂಡವನ್ನು ರವಾನಿಸ ಲಾಗಿದೆ. ಅವುಗಳನ್ನು ಚೆಕ್ಪೋಸ್ಟ್ಗೆ ನಿಯೋಜಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಆರ್ಓಗಳು ಚುನಾವಣಾ ತಿದ್ದುಪಡಿ ಚೆನ್ನಾಗಿ ಓದಿ ನಿಯಮಗಳನ್ನು ತಿಳಿದುಕೊಳ್ಳಿ. ಯಾವುದೇ ಲೋಪಗಳಿಲ್ಲದಂತೆ ಚುನಾವಣೆ ನಿರ್ವಹಿಸಿ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ ಗಮನಿಸಿ. ಚುನಾವಣಾ ಆಯೋಗದ ವೆಬ್ಸೈಟ್ ಗಳಲ್ಲಿ ಹೊಸ ಸುತ್ತೋಲೆಗಳಿದ್ದರೆ ತಕ್ಷಣ ಪಾಲನೆ ಮಾಡಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದ ರಲ್ಲದೆ, ಯಾವುದೇ ಅನುಮಾನಗಳಿದ್ದಲ್ಲಿ ಕೂಡಲೇ ಬಗೆಹರಿಸಿಕೊಳ್ಳಿ. ತಮ್ಮಿಂದ ಯಾವೂದೇ ಒತ್ತಡ ಇರುವುದಿಲ್ಲ. ಆದರೆ ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ನಿರ್ವಹಣೆಯಲ್ಲಿ ಯಾವುದೇ ಲೋಪ ಸಹಿಸಲಾಗದು. ತಪ್ಪುಗಳು ಸಾಬೀತಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಅವರು ಮಾತನಾಡಿ, ನಾಮಪತ್ರ ಸಲ್ಲಿಕೆ ವೇಳೆ ನೀಡಲಾಗುವ ಮೆರವಣಿಗೆ ಅನುಮತಿಗಳ ಬಗ್ಗೆ ಗಮನ ಅಗತ್ಯ. ಒಂದೇ ದಿನ ಎರಡು ಪಕ್ಷಗಳ ಅಭ್ಯರ್ಥಿಗಳ ಕನಿಷ್ಠ ಕಾಲದ ಅಂತರದಲ್ಲಿ ನಾಮಪತ್ರ ಸಲ್ಲಿಸಲು ಬಯಸಿದ್ದಲ್ಲಿ ಮೆರವಣಿಗೆಯಲ್ಲಿ ಆಗಮಿಸುವವರ ಸಂಖ್ಯೆ ನಿಯಂತ್ರಿಸು ವುದು ಅನಿವಾರ್ಯವಾಗುತ್ತದೆ ಬಗ್ಗೆ ಚುನಾವ ಣಾಧಿಕಾರಿಗಳು ಗಮನ ಹರಿಸಬೇಕು ಎಂದರು.

ಮತಗಟ್ಟೆ ದುರಸ್ತಿ ವರದಿ ನೀಡುವಂತೆ ಸಂಬಂಧಪಟ್ಟವರಿಗೆ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಅಪರ ಪೋಲೀಸ್ ವರಿಷ್ಠಾಧಿಕಾರಿ ಜ್ಯೋತಿವೈದ್ಯನಾಥನ್, ಉಪವಿಭಾಗಾಧಿಕಾರಿ ಲಕ್ಷ್ಮೀ ಕಾಂತ ರೆಡ್ಡಿ, ವಿವಿಧ ಕ್ಷೇತ್ರಗಳ ಚುನಾವಣಾ ಧಿಕಾರಿಗಳು ಸಭೆಯಲ್ಲಿದ್ದರು.

 

Translate »