ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ಅಭಿಪ್ರಾಯ ಹಾಸನ: ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ರಕ್ಷಣೆಗೆ ಅಗತ್ಯ ಪ್ರಥಮ ಚಿಕಿತ್ಸೆ ನೀಡು ವುದು ಅತಿ ಮುಖ್ಯವಾಗಿದೆ. ಆ ಸಮಯ ದಲ್ಲಿ ನಮ್ಮ ಸಾಮಾನ್ಯ ತಿಳುವಳಿಕೆ, ತಾರ್ಕಿಕವಾಗಿ ಮತ್ತು ವಿಶ್ಲೇóಷಣಾತ್ಮಕವಾಗಿ ಆಲೋಚಿಸಿದಾಗ ಮುಂದೆ ಆಗುವ ಅವಘಡಗಳು ನಡೆಯದಂತೆ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ಮತ್ತು ಹೆಚ್.ಐ.ವಿ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ತಿಳಿಸಿದರು. ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ( ಸ್ವಾಯತ್ತ) ಕಾಲೇ ಜಿನಲ್ಲಿ ಯುವ…
ಗಾಂಧಿಗೆ ಅಪಮಾನಿಸಿದವರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
February 6, 2019ಹಾಸನ: ಮಹಾತ್ಮ ಗಾಂಧೀಜಿ ಹತ್ಯೆಯಾಗಿ ಹುತಾತ್ಮರಾದ ದಿನದಂದು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಗೆ ಜೈಕಾರ ಹಾಕುವ ಮೂಲಕ ಗಾಂಧೀಜಿಗೆ ಅಪಮಾನಿಸಿದವರನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಯಿತು. ನಗರದ ಬಿ.ಎಂ.ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಬಂದ ಪ್ರತಿಭಟನಾಕಾರರು ಆರೋಪಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು. ಹಿಂದೂ ಮಹಾಸಭಾದವರು ಗಾಂಧೀಜಿಯವರ ಪ್ರತಿಕೃತಿಗೆ ಶೂಟ್ ಮಾಡುವುದರ ಮೂಲಕ ಮತ್ತು ನಾಥುರಾಮ್ ಗೋಡ್ಸೆಗೆ ಜೈಕಾರ ಹಾಕಿ,…
ಬೇಲೂರಿನಲ್ಲಿ ಹೆಲ್ಮೆಟ್ ಧಾರಣೆ ಜಾಗೃತಿ
February 6, 2019ಬೇಲೂರು: ಹದಿಹರೆಯದ ವಯಸ್ಸಿನಲ್ಲಿ ಹುರುಪಿಗೆ ಒಳಗಾಗಿ ಹೆಲ್ಮೆಟ್ ಧರಿಸದೇ ವಾಹನಗಳ ಚಲಾವಣೆಗೆ ಮುಂದಾಗುವುದು ತೀವ್ರ ಅಪಾಯಕಾರಿ. ಈ ಕುರಿತು ಯುವ ಜನಾಂಗ ಜಾಗೃತಿ ಗೊಳ್ಳಬೇಕು ಎಂದು ಶಾಸಕ ಕೆ.ಎಸ್. ಲಿಂಗೇಶ್ ಕರೆ ನೀಡಿದರು. ಬೇಲೂರು ಆರಕ್ಷಕ ಇಲಾಖೆ ಹಾಗೂ ಸಾರಿಗೆ ಇಲಾಖೆಗಳ ಸಂಯುಕ್ತಾಶ್ರಯ ದಲ್ಲಿ ನಡೆಸಿದ ಹೆಲ್ಮೆಟ್ ಧಾರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಲ್ಮೆಟ್ ಧರಿಸದೇ ವಾಹನ ಚಲಾವಣೆ ಮತ್ತು ಅಪಘಾತಗಳಿಂದಾಗಿ ಉಂಟಾದ ಸಾವು-ನೋವುಗಳಲ್ಲಿ 16-25ರ ನಡು ವಿನ ಹರೆಯದವರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಅರಿಯಬೇಕು. ವಾಹನ…
ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್, ಗೈಡ್ಸ್‍ನ ಪಾತ್ರ ಮುಖ್ಯ
February 6, 2019ಆಲೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಸೇವಾಮನೋಭಾವವನ್ನು ಬೆಳೆಸುವುದರ ಜೊತೆಗೆ ಸಾಮಾಜಿಕ ಬದ್ಧತೆ, ವಿಶ್ವ ಭ್ರಾತೃತ್ವ, ಸಮಾನತೆ, ಶಿಸ್ತು, ಮಾನಸಿಕ ವಿಸ್ತಾರತೆ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲ ಹೇಳಿದರು. ತಾಲೂಕಿನ ಕವಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಗೈಡ್ ಕ್ಯಾಪ್ಟನ್ ಜಿ.ವಿ.ಸುಜಾತ ಅವರ ಚಾಮುಂಡೇ ಶ್ವರಿ ಗೈಡ್ ದಳದ ಹನ್ನೊಂದು ಮಕ್ಕಳಿಗೆ ಹಮ್ಮಿಕೊಂಡಿದ್ದ ದೀಕ್ಷಾ ಸಮಾರಂಭದಲ್ಲಿ ಮಾತನಾಡಿ, ನಮ್ಮ ಸಂಸ್ಥೆಯ ಪ್ರಾರಂಭಿಕ ಶಿಕ್ಷಣವನ್ನು ಪಡೆದು ಇಂದು ವಿಶ್ವ…
ಕಾಂಗ್ರೆಸ್, ಜೆಡಿಎಸ್‍ನಿಂದ ಅಹಿಂದ ವರ್ಗ ಕಡೆಗಣನೆ
February 5, 2019ಕೆಪಿಸಿಸಿ ಕಾರ್ಯದರ್ಶಿ ಪಟೇಲ್ ಶಿವಪ್ಪ ಅಸಮಾಧಾನ ಅರಸೀಕೆರೆ: ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳೂ ಹಾಸನ ಲೋಕಸಭಾ ಚುನಾ ವಣೆಯಲ್ಲಿ ಅಹಿಂದ ವರ್ಗ ಸೇರಿದಂತೆ ಇತರೆ ಜನಾಂಗದ ಅಭ್ಯರ್ಥಿಯನ್ನು ಕಡೆಗಣಿಸಿ, ತಾರತಮ್ಯ ಎಸಗುತ್ತಿದ್ದಾರೆ ಎಂದು ಗಂಡಸಿ ಕ್ಷೇತ್ರದ ಜಿಪಂ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಪಟೇಲ್ ಶಿವಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಅಭ್ಯರ್ಥಿ ಸ್ಥಾನ ಒಕ್ಕಲಿಗರಿಗೆ ಮಾತ್ರ ಸೀಮಿತವಾಗುತ್ತಿದ್ದು, ಕಡೂರು ಸೇರಿದಂತೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ 16 ಲಕ್ಷ…
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ
February 5, 2019ರಾಮನಾಥಪುರ: ಈಗಾಗಲೇ ಹತ್ತಾರು ಕಾಮಗಾರಿಗಳು ಪ್ರಾರಂಭ ವಾಗಿದ್ದು, ಎಲ್ಲಾ ಕಾಮಗಾರಿಗಳನ್ನು ಮಳೆ ಗಾಲ ಸಮೀಪಿಸುವ ಮೊದಲು ಗುತ್ತಿಗೆದಾ ರರು ಮುಗಿಸಬೇಕು ಮತ್ತು ಸಂಬಂಧಪಟ್ಟ ಇಲಾಖೆ ಇಂಜಿನಿಯರ್‍ಗಳು ಕಾಮಗಾರಿ ಗಳತ್ತ ಗಮನ ಹರಿಸಿ, ನಿಗದಿತ ಅವಧಿ ಯಲ್ಲಿ ಕೆಲಸವನ್ನು ಗುಣಮಟ್ಟದಿಂದ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗೂಲಿ ಗ್ರಾಮದಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾ ಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತ ನಾಡಿದ ಅವರು,…
ಜೀವನದಲ್ಲಿ ತಾಳ್ಮೆ, ನಂಬಿಕೆ, ಆತ್ಮವಿಶ್ವಾಸವಿದ್ದಾಗ ಮಾತ್ರ ಯಶಸ್ಸು
February 5, 2019ಸಾಧ್ಯ ಬಿಇಓ ಮೋಹನ್‍ಕುಮಾರ್ ಅಭಿಮತ ಅರಸೀಕೆರೆ: ಮನುಷ್ಯ ಜೀವನ ದಲ್ಲಿ ತಾಳ್ಮೆ, ನಂಬಿಕೆ, ಆತ್ಮ ವಿಶ್ವಾಸವನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸನ್ನು ಪಡೆಯಬಹುದು. ಮಹಾತ್ಮ ಗಾಂಧೀಜಿ ಯವರ ಜೀವನದಲ್ಲಿ ಈ ಮೂರು ಅಂಶಗಳು ಹಾಸು ಹೊಕ್ಕಿದ ಪರಿಣಾಮ ಇಂದು ವಿಶ್ವವೇ ಗೌರವಿಸುವಂತಹ ಮಹಾನ್ ದಾರ್ಶನಿಕ ಪುರುಷರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೋಹನ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ಹೊರವಲಯದಲ್ಲಿರುವ ಕಸ್ತೂರಬಾ ಶಿಬಿರ ಗಾಂಧಿ ಸ್ಮಾರಕದಲ್ಲಿ ಹಾಸನದ ವಾಸವಿ ಆಂಗ್ಲ ಮಾಧ್ಯಮ ಶಾಲೆಯವರು ಗಾಂಧಿ-150 ವರ್ಷಾ ಚರಣೆಯ ಹಿನ್ನೆಲೆಯಲ್ಲಿ ‘ಗಾಂಧಿ ಸ್ಮರಣ-ವಾಸವಿ…
ಜಿಪಂ ಮಾಜಿ ಉಪಾಧ್ಯಕ್ಷ-ಪ್ರಭಾರ ಸಿಇಓ ಜಟಾಪಟಿ
February 5, 2019ಹಾಸನ: ಜಿಲ್ಲಾ ಪಂಚಾಯಿತಿ ಮಾಜಿ ಉಪಾ ಧ್ಯಕ್ಷರೂ ಆದ ಹಾಲಿ ಸದಸ್ಯ ಶ್ರೀನಿವಾಸ್ ಮತ್ತು ಪ್ರಭಾರ ಸಿಇಓ ಪುಟ್ಟಸ್ವಾಮಿ ನಡುವೆ ಜಟಾಪಟಿ ನಡೆ ದಿದ್ದು, ಪುಟ್ಟಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲಾ ಪಂಚಾಯಿತಿಗೆ 36 ಲಕ್ಷ ರೂ. ಅನುದಾನ ಬಂದಿದ್ದು, ಈ ಬಗ್ಗೆ ವಿಚಾರಿಸಲು ಶ್ರೀನಿವಾಸ್ ಅವರು ಪುಟ್ಟಸ್ವಾಮಿ ಅವರನ್ನು ಸಂಪರ್ಕಿಸಿದಾಗ ಜಟಾಪಟಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರಭಾರ ಸಿಇಓ ಪುಟ್ಟಸ್ವಾಮಿ ಅವರು, ಶ್ರೀನಿವಾಸ್ ಅವರು ಮತ್ತೋರ್ವ ವ್ಯಕ್ತಿಯೊಂದಿಗೆ…
ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಎಎಸ್ಪಿ ನಂದಿನಿ ಚಾಲನೆ
February 5, 2019ಹಾಸನ: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಹಾಸನ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಎಎಸ್ಪಿ ನಂದಿನಿ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು. ರಸ್ತೆಯನ್ನು ದಾಟುವಾಗ ಎರಡು ದಿಕ್ಕಿನತ್ತ ದೃಷ್ಟಿ ಹರಿಸಿ, ನಂತರ ವಾಹನ ಇಲ್ಲದಿರುವುದು ಖಚಿತವಾದ ಮೇಲೆ ಮುಂದೆ ಹೋಗಬೇಕು. ಪಾದಚಾರಿಗಳು ಫುಟ್‍ಪಾತ್ ಮೇಲೆ ಚಲಿಸಬೇಕು. ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚಿಗೆ ಕೂರಬಾರದು. ಕಡ್ಡಾಯವಾಗಿ ಹೆಲ್ಮೆಟ್ ಉಪಯೋಗಿಸಬೇಕು. ನಗರ ಮತ್ತು ಪಟ್ಟಣ ಭಾಗಗಳಲ್ಲಿ 30…
ಲೋಕಸಭಾ ಚುನಾವಣೆ: ರಾಜ್ಯದ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು
February 4, 2019ಹಾಸನ: ಕೇಂದ್ರದ ಇಂದಿನ ಜನಪರ ಬಜೆಟ್ ಮುಂದಿನ ಅಭಿವೃದ್ಧಿಗೆ ದಿಕ್ಸೂಚಿ ಆಗಲಿದ್ದು, ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 28 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿ ಸಿದೆ. ಎಲ್ಲಾ ಯೋಜನೆಗೂ ಹಣವನ್ನು ಮುಂಗಡವಾಗಿ ತೆಗೆದು ಇಡುವ ಮೂಲಕ ದೇಶಕ್ಕೆ ಒಂದು…