ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ
ಹಾಸನ

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

February 5, 2019

ರಾಮನಾಥಪುರ: ಈಗಾಗಲೇ ಹತ್ತಾರು ಕಾಮಗಾರಿಗಳು ಪ್ರಾರಂಭ ವಾಗಿದ್ದು, ಎಲ್ಲಾ ಕಾಮಗಾರಿಗಳನ್ನು ಮಳೆ ಗಾಲ ಸಮೀಪಿಸುವ ಮೊದಲು ಗುತ್ತಿಗೆದಾ ರರು ಮುಗಿಸಬೇಕು ಮತ್ತು ಸಂಬಂಧಪಟ್ಟ ಇಲಾಖೆ ಇಂಜಿನಿಯರ್‍ಗಳು ಕಾಮಗಾರಿ ಗಳತ್ತ ಗಮನ ಹರಿಸಿ, ನಿಗದಿತ ಅವಧಿ ಯಲ್ಲಿ ಕೆಲಸವನ್ನು ಗುಣಮಟ್ಟದಿಂದ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗೂಲಿ ಗ್ರಾಮದಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾ ಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತ ನಾಡಿದ ಅವರು, ಅತ್ಯಲ್ಪ ಅವಧಿಯಲ್ಲಿ ಈಗಾಗಲೇ ರೂಪಿಸಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದು, ಬಹುತೇಕ ಕಾಮಗಾರಿಗಳು ಚಾಲ್ತಿಯಲ್ಲಿದ್ದು ಹಲವು ಕಾಮಗಾರಿಗಳು ವಿವಿಧ ಹಂತದಲ್ಲಿವೆ. ವಿಶೇಷವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದಿಂದ ಬರುವ ಅನುದಾನ ಕೇವಲ ಸಿಬ್ಬಂದಿಗಳ ಸಂಬಳ ಮತ್ತು ಇತರೆ ಸಣ್ಣ ಪುಟ್ಟ ಕೆಲಸಗಳಿಗೆ ಆಗುತ್ತಿರುವುದರಿಂದ ಇತರ ಮೂಲಗಳಿಂದ ಅನುದಾನವಿಲ್ಲ ದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲವೆಂದು ಮನ ಗಂಡು ಮುಖ್ಯಮಂತ್ರಿಗಳು ಮತ್ತು ಕೆಲವು ಸಚಿವರ ಸಹಕಾರ ಪಡೆದು ವಿಶೇಷ ಅನುದಾನದಡಿ ಹಾಗೂ ಇತರ ಮೂಲ ಗಳಿಂದ ಬಿಡುಗಡೆ ಮಾಡಿಸಿದ್ದೇನೆ ಎಂದರು.

ಬಿಳಗೂಲಿ ಗ್ರಾಮದ ಮುಖಂಡರಾದ ಸಣ್ಣಮಾಯಿಗೌಡ, ಬೀರೇಗೌಡ, ರಾಜೇ ಗೌಡ, ಕುಮಾರ್, ರವಿ, ನಿಂಗೇಗೌಡ, ರಂಗಯ್ಯ, ಕಾಳೆನಹಳ್ಳಿ ಐಯಣ್ಣಗೌಡ, ಉಪಾರೀಕೇಗೌಡ, ಮಂಜುನಾಥ್ ಗ್ರಾಪಂ ಮಾಜಿ ಅಧ್ಯಕ್ಷರಾದ ಚಿಕ್ಕಣ್ಣಶೆಟ್ಟಿ, ಡಿ.ಎಚ್.ಪ್ರಭಾಕರ್, ಮಾಜಿ ಉಪಾ ಧ್ಯಕ್ಷರಾದ ರಾಮೇಗೌಡ ಹಾಗೂ ಎಂ.ಎಚ್. ಕೃಷ್ಣಮೂರ್ತಿ, ಅಖಿಲ ಭಾರತೀಯ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಬಿ.ಅರ್.ನಾರಾ ಯಣಸ್ವಾಮಿ, ಹಿಂದುಳಿದ ವರ್ಗದ ಅಧ್ಯಕ್ಷ ಸಾದಿಕ್‍ಸಾಬ್, ಗ್ರಾಪಂ ಸದಸ್ಯರಾದ ದಿವಾ ಕರ್, ದ್ಯಾವಯ್ಯ, ಶಾಸಕರ ಆಪ್ತ ಸಹಾಯಕ ವೆಂಕಟೇಶ್, ಕೃಷ್ಣೇಗೌಡ, ಗುಂಡಣ್ಣ ಮುಂತಾದವರು ಉಪಸ್ಥಿತರಿದ್ದರು.
ಮನವಿ: ರಾಮನಾಥಪುರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕು. ಆಗ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿರುವ ಹಳ್ಳಿಗಳಿಗೆ ರಸ್ತೆಗಳು, ಚರಂಡಿಗಳು, ಕುಡಿಯುವ ನೀರು, ಆಸ್ಪತ್ರೆ. ಶೌಚಾಲಯಗಳು ಮತ್ತು ಡೈರಿ ಮೊದ ಲಾದ ಸವಲತ್ತುಗಳ ಅವಶ್ಯಕತೆ ತೀರಾ ಅನಿವಾರ್ಯವಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ವಿವಿಧ ಇಲಾಖೆಯ ಸವಲತ್ತು ಗಳನ್ನು ಹೆಚ್ಚಿನ ರೀತಿ ಮಾಡಿಸಿಕೊಡು ವಂತೆ ಶಾಸಕ ರಾಮಸ್ವಾಮಿಯವರಲ್ಲಿ ಮನವಿ ಮಾಡಿದರು.

Translate »