ಕಾಂಗ್ರೆಸ್, ಜೆಡಿಎಸ್‍ನಿಂದ ಅಹಿಂದ ವರ್ಗ ಕಡೆಗಣನೆ
ಹಾಸನ

ಕಾಂಗ್ರೆಸ್, ಜೆಡಿಎಸ್‍ನಿಂದ ಅಹಿಂದ ವರ್ಗ ಕಡೆಗಣನೆ

February 5, 2019

ಕೆಪಿಸಿಸಿ ಕಾರ್ಯದರ್ಶಿ ಪಟೇಲ್ ಶಿವಪ್ಪ ಅಸಮಾಧಾನ
ಅರಸೀಕೆರೆ: ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳೂ ಹಾಸನ ಲೋಕಸಭಾ ಚುನಾ ವಣೆಯಲ್ಲಿ ಅಹಿಂದ ವರ್ಗ ಸೇರಿದಂತೆ ಇತರೆ ಜನಾಂಗದ ಅಭ್ಯರ್ಥಿಯನ್ನು ಕಡೆಗಣಿಸಿ, ತಾರತಮ್ಯ ಎಸಗುತ್ತಿದ್ದಾರೆ ಎಂದು ಗಂಡಸಿ ಕ್ಷೇತ್ರದ ಜಿಪಂ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಪಟೇಲ್ ಶಿವಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಅಭ್ಯರ್ಥಿ ಸ್ಥಾನ ಒಕ್ಕಲಿಗರಿಗೆ ಮಾತ್ರ ಸೀಮಿತವಾಗುತ್ತಿದ್ದು, ಕಡೂರು ಸೇರಿದಂತೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ 16 ಲಕ್ಷ ಮತದಾರರಿದ್ದು, 10 ಲಕ್ಷಕ್ಕೂ ಅಧಿಕ ಅಹಿಂದ ವರ್ಗದವರಿದ್ದಾರೆ. ಆದರೂ ಮೊದಲಿಂದಲೂ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಕೇವಲ ಒಕ್ಕಲಿಗ ಸಮುದಾಯಕ್ಕೆ ಮೀಸಲಾಗುತ್ತಾ ಬಂದಿದ್ದು ಇದೇನು ಒಕ್ಕಲಿಗ ಮೀಸಲು ಕ್ಷೇತ್ರವೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಡುವಂತೆ ದೇವೇಗೌಡರ ನಂತರ ತಮ್ಮ ಮೊಮ್ಮಗನನ್ನು ಆ ಸ್ಥಾನಕ್ಕೆ ತರುವಂತಹ ಬೆಳವಣಿಗೆಗಳು ನಡೆಯುತ್ತಿರುವುದು ವಿಪರ್ಯಾಸವಾಗಿದೆ ಎಂದರು.

ದೇವೇಗೌಡರು ಅಭ್ಯರ್ಥಿಯಾದರೆ ನಮ್ಮ ಬೆಂಬಲ ಇದೆ ಎಂದು ಮಾಜಿ ಸಚಿವ ಎ.ಮಂಜು ಹೇಳಿಕೆ ನೀಡಿದರೆ, ಮತ್ತೊಂದೆಡೆ ಕಾಂಗ್ರೆಸ್‍ನಿಂದ ಎ.ಮಂಜು ಅವರಿಗೆ ನಮ್ಮ ಬೆಂಬಲ ಇದೆ ಎಂದು ಬಿ.ಶಿವರಾಂ ಹೇಳುತ್ತಾರೆ. ಎರಡೂ ಪಕ್ಷಗಳ ಈ ಬೆಳವಣಿಗೆ ಹಾಸನ ಜಿಲ್ಲೆಯಲ್ಲಿ ಮೇಲ್ವರ್ಗದ ಸಮುದಾಯ ಹಾಗೂ ಅಹಿಂದ ಜೊತೆಗೆ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಲಿಂಗಾಯತ ಸಮುದಾಯವನ್ನು ಸಂಪೂರ್ಣ ಕಡೆಗಣನೆ ಮಾಡುತ್ತಾ ಬಂದಿರುವುದು ಇಲ್ಲಿ ಸಾಮಾನ್ಯನ ಗಮನಕ್ಕೂ ಬರುತ್ತದೆ.

ಒಂದೇ ಪಕ್ಷ ಅಧಿಕಾರದಲ್ಲಿದ್ದಾಗ ಈ ವಿಷಯ ಪ್ರಸ್ತಾಪಕ್ಕೆ ಬರುತ್ತಿ ರಲಿಲ್ಲ. ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವ ಈ ಸಂದರ್ಭ ದಲ್ಲಿ ಎರಡೂ ಪಕ್ಷದವರು ಸೌಜನ್ಯಕ್ಕಾದರೂ ಒಕ್ಕಲಿಗರೇತರೊ ಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಧ್ವನಿ ಎತ್ತದಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇನ್ನಾದರೂ ಈ ಬಗ್ಗೆ ಪಕ್ಷದ ವರಿಷ್ಠರು ಚಿಂತನೆ ನಡೆಸಿ, ಎರಡೂ ಪಕ್ಷಗಳು ಒಮ್ಮತಕ್ಕೆ ಬರುವುದರ ಮೂಲಕ ಅಹಿಂದ ಅಥವಾ ಬೇರೆ ಯಾವುದೇ ಸಮುದಾಯದವರಿಗೆ ಅವಕಾಶ ಕೊಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

Translate »