ಬೇಲೂರು: ಹದಿಹರೆಯದ ವಯಸ್ಸಿನಲ್ಲಿ ಹುರುಪಿಗೆ ಒಳಗಾಗಿ ಹೆಲ್ಮೆಟ್ ಧರಿಸದೇ ವಾಹನಗಳ ಚಲಾವಣೆಗೆ ಮುಂದಾಗುವುದು ತೀವ್ರ ಅಪಾಯಕಾರಿ. ಈ ಕುರಿತು ಯುವ ಜನಾಂಗ ಜಾಗೃತಿ ಗೊಳ್ಳಬೇಕು ಎಂದು ಶಾಸಕ ಕೆ.ಎಸ್. ಲಿಂಗೇಶ್ ಕರೆ ನೀಡಿದರು.
ಬೇಲೂರು ಆರಕ್ಷಕ ಇಲಾಖೆ ಹಾಗೂ ಸಾರಿಗೆ ಇಲಾಖೆಗಳ ಸಂಯುಕ್ತಾಶ್ರಯ ದಲ್ಲಿ ನಡೆಸಿದ ಹೆಲ್ಮೆಟ್ ಧಾರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಲ್ಮೆಟ್ ಧರಿಸದೇ ವಾಹನ ಚಲಾವಣೆ ಮತ್ತು ಅಪಘಾತಗಳಿಂದಾಗಿ ಉಂಟಾದ ಸಾವು-ನೋವುಗಳಲ್ಲಿ 16-25ರ ನಡು ವಿನ ಹರೆಯದವರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಅರಿಯಬೇಕು. ವಾಹನ ಚಲಾ ಯಿಸುವವರು ತಾವು ಕುಟುಂಬದ ಒಂದು ಭಾಗವಾಗಿದ್ದೇವೆ ಎಂಬ ಅರಿವನ್ನು ಮೂಡಿಸಿಕೊಂಡು ವಾಹನ ಸವಾರಿಗೆ ಮುಂದಾಗಬೇಕು ಎಂದರು. ಹದಿ ಹರೆ ಯದಲ್ಲಿ ಸಾಹಸ ಪ್ರವೃತ್ತಿ, ಮುನ್ನುಗ್ಗುವ ಪ್ರವೃತ್ತಿ ಸಹಜ. ಆದರೆ ಸಂಸಾರದ ಹಿತ ದೃಷ್ಟಿಯನ್ನು ಇಟ್ಟುಕೊಂಡು ಕಾನೂನು ನಿಯಮಗಳನ್ನು ಪಾಲಿಸಿಕೊಂಡು ವಾಹನಗಳ ಚಲಾವಣೆಗೆ ಯುವ ಜನಾಂಗ ಮುಂದಾಗಬೇಕೆಂದರು.
ಹದಿಹರೆಯದಲ್ಲಿನ ಸಾಹಸ ಕುಟುಂಬ ಗಳ ಕಣ್ಣೀರಿಗೆ ಕಾರಣವಾಗಬಾರದೆಂದು ತಮ್ಮ ವೈಯಕ್ತಿಕ ನೋವನ್ನು ಹಂಚಿ ಕೊಂಡರು. ಹದಿ ಹರೆಯದ ತನ್ನ ಮಗನ ಸಾವು ಕೂಡ ಬೈಕ್ ಅಪಘಾತದಲ್ಲಿ ಉಂಟಾ ದುದನ್ನು ನೆನೆದು ಕಣ್ಣೀರಿಟ್ಟರು.
ಆರಕ್ಷಕ ವೃತ್ತ ನಿರೀಕ್ಷಕ ಲೋಕೇಶ್ ಮಾತನಾಡಿ, ಹೆಲ್ಮೆಟ್ ಧರಿಸಿ ವಾಹನ ಚಲಾ ವಣೆ ಮಾಡುವಂತೆ ಸವಾರರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಜಾಗೃತರಾಗಿಲ್ಲ. ದಂಡ ಹಾಕುವು ದೊಂದೇ ಪರಿಹಾರವಲ್ಲ. ಸವಾರರು ಜಾಗೃತರಾಗಿ ನೀತಿ ನಿಯಮಾವಳಿಗಳನ್ನು ಪಾಲಿಸಲು ಮುಂದಾಗಬೇಕು. ಇದುವೇ ಮುಖ್ಯವಾದುದಾಗಿದೆ. ಮುಂದಿನ ದಿನಗಳಲ್ಲಿ ಕಠಿಣ ಕ್ರಮವನ್ನು ಈ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತದೆ. 15 ದಿನಗಳ ಕಾಲ ಈ ಜಾಗೃತಿ ಅಭಿಯಾನವನ್ನು ಪಟ್ಟಣ ಹಾಗೂ ಹಳ್ಳಿಗಳಲ್ಲೂ ನಡೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ 10 ಜನ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು.
ತಾಲೂಕು ತಹಶೀಲ್ದಾರ್ ಮೇಘನಾ, ತಾಪಂ ಕಾರ್ಯನಿರ್ವಹಣಾಧಿಕಾರಿ ರವಿ ಕುಮಾರ್, ಉಪಠಾಣಾಧಿಕಾರಿ ಜಗ ದೀಶ್, ಅಬಕಾರಿ ಇಲಾಖಾಧಿಕಾರಿ ಕೇಶವ ಮೂರ್ತಿ, ತಾಪಂ ಅಧ್ಯಕ್ಷ ರಂಗೇಗೌಡ, ಪುರಸಭಾ ಅಧ್ಯಕ್ಷೆ ಡಿ.ಆರ್.ಭಾರತಿ ಅರುಣ್ ಕುಮಾರ್, ಜೆಡಿಎಸ್ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ ಮತ್ತಿತರರು ಹಾಜರಿದ್ದರು.