ಆಲೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಸೇವಾಮನೋಭಾವವನ್ನು ಬೆಳೆಸುವುದರ ಜೊತೆಗೆ ಸಾಮಾಜಿಕ ಬದ್ಧತೆ, ವಿಶ್ವ ಭ್ರಾತೃತ್ವ, ಸಮಾನತೆ, ಶಿಸ್ತು, ಮಾನಸಿಕ ವಿಸ್ತಾರತೆ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲ ಹೇಳಿದರು.
ತಾಲೂಕಿನ ಕವಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಗೈಡ್ ಕ್ಯಾಪ್ಟನ್ ಜಿ.ವಿ.ಸುಜಾತ ಅವರ ಚಾಮುಂಡೇ ಶ್ವರಿ ಗೈಡ್ ದಳದ ಹನ್ನೊಂದು ಮಕ್ಕಳಿಗೆ ಹಮ್ಮಿಕೊಂಡಿದ್ದ ದೀಕ್ಷಾ ಸಮಾರಂಭದಲ್ಲಿ ಮಾತನಾಡಿ, ನಮ್ಮ ಸಂಸ್ಥೆಯ ಪ್ರಾರಂಭಿಕ ಶಿಕ್ಷಣವನ್ನು ಪಡೆದು ಇಂದು ವಿಶ್ವ ಗೈಡ್ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ ಎಲ್ಲಾ ಮಕ್ಕಳಿಗೂ ಪ್ರೀತಿಯ ಸ್ವಾಗತ ಕೋರುತ್ತಾ ದೇಶಕ್ಕಾಗಿ, ತಂದೆ-ತಾಯಿಗಾಗಿ, ಕರ್ತವ್ಯವನ್ನು ಸಲ್ಲಿ ಸುತ್ತಾ ಉತ್ತಮ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಉನ್ನತ ಚಾರಿತ್ರ್ಯದ ವ್ಯಕ್ತಿಗಳಾಗಿ ಎಂದು ಹಾರೈಸಿದರು.
ಆಲೂರು ತಾಲೂಕಿನ ಸಂತ ಜೋಸೆಫ್ ಶಾಲೆಯ ಗೈಡ್ ಶಿಕ್ಷಕಿ ಅಶ್ವಿನಿ ಮಕ್ಕಳ ಕಲಿಕಾ ದೃಢತೆಯನ್ನು ತಿಳಿಸಿಕೊಟ್ಟರು. ಗೈಡ್ ಶಿಕ್ಷಕಿ ಜಿ.ವಿ.ಸುಜಾತ ಮಕ್ಕಳಿಗೆ ಗೈಡ್ ನಿಯಮಗಳನ್ನು ಬೋಧಿಸಿ ಅಧಿಕೃತವಾಗಿ ದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತಾಲೂಕು ನೋಡೆಲ್ ಅಧಿಕಾರಿ ಗಳಾದ ಬಿ.ಎಂ.ಗೀತಾ, ತಾಲೂಕು ಉಪಾಧ್ಯಕ್ಷ ಟಿಪಿಇಒ ನಾಗರಾಜ್, ಸ್ಥಳೀಯ ಸಂಸ್ಥೆಯ ಕಾರ್ಯ ದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೌರಮ್ಮ, ಸ್ಕೌಟ್ ಮಾಸ್ಟರ್ ಎಚ್.ಎಸ್.ಜಗದೀಶ್, ಡಿ.ಧರ್ಮೇಶ್, ಗೈಡ್ ಕ್ಯಾಪ್ಟನ್ ಮಹೇರಾಬಾನು, ಸಹ ಶಿಕ್ಷಕ ಕೃಷ್ಣಮೂರ್ತಿ ಮುಂತಾ ದವರು ಪಾಲ್ಗೊಂಡಿದ್ದರು. ಜೋಸೆಫ್ ನಗರದ ಸಂತ ಜೋಸೆಫ್ ಶಾಲೆಯ ಗೈಡ್ ಮಕ್ಕಳು, ಹುಣಸವಳ್ಳಿ ಶಾಲೆಯ ಸ್ಕೌಟ್ಸ್ ಮಕ್ಕಳು ಹಾಗೂ ಕವಳಿಕೆರೆ ಶಾಲೆಯ ಗೈಡ್ಸ್ ಮಕ್ಕಳು ಹಾಜರಿದ್ದರು.